ಆಧ್ಯಾತ್ಮ, ಸಾಹಿತ್ಯ, ವೈಚಾರಿಕ ಹಾಗೂ ಚಾರಿತ್ರಿಕ ಹಿನ್ನೆಲೆಯುಳ್ಳ ಸಾಂಸ್ಕೃತಿಕ ನಗರಿ ಮೈಸೂರಿಗೆ ನಂಜನಗೂಡು ಮುಕುಟವಿದಂತೆ ಎಂದರೆ ಅತಿಶಯೋಕ್ತಿ ಆಗಲಾರ ದು. ಇನ್ನು ಪತ್ರಿಕಾ ರಂಗಕ್ಕೂ, ನಂಜನಗೂಡಿಗೂ ಇರುವ ನಿಕಟ ಬಾಂಧವ್ಯದ ಬಗ್ಗೆ ಹೇಳುವುದಾದರೆ ಸ್ವತಂತ್ರ್ಯ ಪೂರ್ವದಿಂದಲೂ ಈ ರಂಗವನ್ನು ಶ್ರೀಮಂತಗೊಳಿಸಿ ದ ಕೀರ್ತಿ ನಂಜನಗೂಡಿಗೂ ಸಲ್ಲುತ್ತ ದೆ.

ನಂಜುಂಡೇಶ್ವರನ ತಪೋಭೂಮಿ, ಸಾಧು ಸಂತರು, ಶರಣರು ತಪಸ್ಸುಗೈ ದ ಐತಿಹ್ಯುುಂಳ್ಳ ನೆಲೆವೀಡು, ಸಾವಿರಾರು ವರ್ಷಗಳ ಇತಿಹಾಸವಿರುವ ಮಠ ವಾನ್ಯಗಳ ಹಿರಿಮೆ, ನಾಡಿಗೆ ದಾರ್ಶನಿಕರನ್ನು ಕೊಟ್ಟ ಗರಿಮೆ, ಭೌಗೋಳಿಕ ಹಿನ್ನೆಲೆಯುಳ್ಳ ವಿಶ್ವಪ್ರಸಿ ದ್ಧ ನಂಜನಗೂಡು ರಸ ಬಾಳೆ, ಶತವಾನ ಇತಿಹಾಸವಿರುವ ಬಿ.ವಿ.ಪಂಡಿತರ ನಂಜನಗೂಡು ಹಲ್ಲುಪುಡಿ, ದಳವಾಯಿಗಳ ಆಳ್ವಿಕೆ ಕುರುಹು… ಹೀಗೆ ಗರಳಪುರಿಯಿಂದ ನಂಜನಗೂಡು ಆಗಿ ರೂಪುಗೊಂಡಿರುವವರೆಗೂ ಇತಿಹಾಸದ ಪುಟವನ್ನು ತೆರೆದಂತೆ ಪಟ್ಟಿ ಮಾಡುತ್ತಾ ಹೋ ದಷ್ಟೂ ನಂಜನಗೂಡಿನ ಶ್ರೀಮಂತಿಕೆ ಹೆಚ್ಚುತ್ತಾ ಹೋಗುತ್ತದೆ. ಕಲೆ, ಕ್ರೀಡೆ, ಜನಪದ, ನಾಟಕ, ಸಾಹಿತ್ಯ ಕ್ಷೇತ್ರಗಳಲ್ಲಿ ಛಾಪು ಮೂಡಿಸಿರುವಂತೆ ಪತ್ರಿಕಾ ಕ್ಷೇತ್ರದಲ್ಲೂ ನಂಜನಗೂಡು ತನ್ನದೇ ಆದ ಛಾಪು ಮೂಡಿಸಿರುವುದು ಈಗ ಇತಿಹಾಸ.
ಪತ್ರಿಕಾ ಕ್ಷೇತ್ರದ ಮೊ ದಲ ಪರ್ತಕರ್ತೆ ತಿರುಮಲಾಂಬ
ರಾಜ್ಯ ದ ಮೊದಲ ಮಹಿಳಾ ಪತ್ರಕರ್ತೆ ಎಂಬ ಕೀರ್ತಿಗೆ ಭಾಜನರಾದ ತಿರುಮಲಾಂಬ ಅವರು ನಂಜನಗೂಡಿನವರೇ ಎಂಬು ದು ಪತ್ರಿಕಾರಂಗದಲ್ಲಿ ಮೊದಲ ಹೆಗ್ಗುರುತು. ನಂಜನಗೂಡಿನಲ್ಲಿ ಹುಟ್ಟಿ, ಬೆಳೆದು ೧೪ನೇ ವಯಸ್ಸಿನಲ್ಲೇ ವಿಧವೆಯಾದ ಇವರಿಗೆ ಸಂಗಾತಿಯಾಗಿದ್ದು ಪುಸ್ತಕಗಳು. ಹಲವು ಪುಸ್ತಕಗಳನ್ನು ಓದಿ ಪಾಂಡಿತ್ಯ ಪಡೆದು ಕಥೆ, ಕಾದಂಬರಿಗಳನ್ನು ಬರೆಯುತ್ತಾ ಉತ್ತಮ ಬರಹಗಾರ್ತಿಯಾಗಿ ರೂಪುಗೊಂಡ ಇವರು, ೧೯೧೬ರಲ್ಲಿ ‘ಕರ್ನಾಟಕ ನಂದಿನಿ’ವಾಸ ಪತ್ರಿಕೆಯನ್ನು ಹೊರತಂದು ಮಹಿಳೆಯರ ಸಬಲೀಕರಣ ಕುರಿತ ಲೇಖನಗಳನ್ನು ಪ್ರಕಟಿಸುವ ಮೂಲಕ ಹೊಸ ಕ್ರಾಂತಿ ಹುಟ್ಟು ಹಾಕಿ ದರು. ಈ ಪತ್ರಿಕೆ ಸುಮಾರು ೪ ವರ್ಷಗಳ ಕಾಲ ನಿಯಮಿತವಾಗಿ ಬಂತು. ಆನಂತರ ೧೯೨೨ರಲ್ಲಿ ‘ಸನ್ಮಾರ್ಗದರ್ಶಿ’ ಎಂಬ ಮತ್ತೊಂದು ಪತ್ರಿಕೆಯನ್ನು ತಿರುಮಲಾಂಬ ಅವರು ಹೊರತಂದರು. ಮಕ್ಕಳು ಹಾಗೂ ಮಹಿಳೆಯರ ಪರವಾದ ನಿಲುವುಗಳನ್ನು ಪ್ರಕಟಿಸುವ ಮೂಲಕ ಜನಮನ್ನಣೆಗೆ ಪಾತ್ರವಾಗಿತ್ತು. ತಿರುಮಲಾಂಬ ವಾಸವಿದ್ದ ನಾರಾಯಣರಾವ್ ಅಗ್ರಹಾರ ದ ರಸ್ತೆಗೆ ತಿರುಮಲಾಂಬ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.
ಸುಧಾ ಸಂಪಾದಕ ಇ.ಆರ್.ಸೇತೂರಾಂ
ಮಹಿಳೆಯರ ಅಚ್ಚುಮೆಚ್ಚಿನ ಸಂಗಾತಿಯಾಗಿದ್ದ ‘ಸುಧಾ’ ವಾರಪತ್ರಿಕೆಯ ಸಂಸ್ಥಾಪಕ ಸಂಪಾದಕರು ನಂಜನಗೂಡಿನವರೇ ಎಂಬುದು ಮತ್ತೊಂದು ಹೆಗ್ಗಳಿಕೆ. ಕಿಡಿ, ತಾಯ್ನಾಡು, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ಕೆಲಸ ಮಾಡಿ ಅನುಭವವಿ ದ ನಂಜನಗೂಡಿನ ಸಂಸ್ಕೃತ ಪಾಠಶಾಲಾ ಬೀದಿಯ ಇ.ಆರ್.ಸೇತೂರಾಂ ಅವರು ‘ಸುಧಾ’ ವಾರಪತ್ರಿಕೆಯ ಸಂಪಾದಕರಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದವರು. ರಾಜೇಂದ್ರಪ್ರಸಾದ್ ರಾಷ್ಟ್ರಪತಿಯಾಗಿದ್ದಾಗ ಹಿಂದಿ ಹಾಗೂ ಹಿಂದಿಯೇತರವಾಗಿ ಎರಡು ವಿಭಾಗಗಳಲ್ಲಿ ಅತ್ಯುತ್ತಮ ವಾರಪತ್ರಿಕೆಗಳಿಗೆ ಪ್ರಶಸ್ತಿ ನೀಡಲಾಗುತ್ತಿತ್ತು. ಆಗ ಹಿಂದಿಯೇತರ ವಿಭಾಗದಲ್ಲಿ ಕನ್ನಡ ದ ಸುಧಾ ಅತ್ಯುತ್ತಮ ವಾರಪತ್ರಿಕೆ ಪ್ರಶಸ್ತಿಗೆ ಭಾಜನವಾಗಿದ್ದು ಇ.ಆರ್.ಸೇತೂರಾಂ ಅವರ ಕೈಚಳಕಕ್ಕೆ ಹಿಡಿದ ಕನ್ನಡಿತಯಾಗಿತ್ತು.
ಶಾರದಾಪ್ರಸಾದ್ ಮೂಲ ನಂಜನಗೂಡು
ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮಾಧ್ಯಮ ಸಂಯೋಜಕರಾಗಿ ಕರ್ತವ್ಯ ನಿರ್ವಹಿಸಿ ದ ಎಚ್.ವೈ.ಶಾರದಾಪ್ರಸಾದ್ ಮೂಲ ನಂಜನಗೂಡು ಎಂಬುದು ಮತ್ತೊಂದು ವಿಶೇಷ. ಇ.ಆರ್ ಸೇತೂರಾಂ ಅವರ ಆತ್ಮೀಯ ಸ್ನೇಹಿತರಾಗಿದ್ದ ಇವರು ಕಾಲೇಜು ದಿನಗಳಲ್ಲಿ ವಾರದಲ್ಲಿ ಮೂರ್ನಾಲ್ಕು ದಿನಗಳ ಕಾಲ ನಂಜನಗೂಡಿನ ಸೇತೂರಾಂ ಮನೆಯಲ್ಲೇ ಉಳಿಯುತ್ತಿದ್ದರು ಎನ್ನಲಾಗಿದೆ.
ಪಂಚಮ ಸಂಪಾ ದಕರಾಗಿ ಮುಳ್ಳೂರು ನಾಗರಾ…
ಬಂಡಾಯ ಸಾಹಿತಿ ಮುಳ್ಳೂರು ನಾಗರಾಜ್ ಅವರು ಸಾಹಿತ್ಯ ಕೃಷಿ ಜತೆಗೆ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದವರು. ದಲಿತ ಚಳವಳಿಯ ಮುಖವಾಣಿಯಾಗಿ ದ ‘ಪಂಚಮ’ ಪತ್ರಿಕೆಗೆ ಸಂಪಾದಕರಾಗಿ ಕೆಲಸ ಮಾಡುವ ಮೂಲಕ ದಲಿತ ಚಳವಳಿಗೆ ಹೊಸ ಭಾಷ್ಯ ಬರೆದರು. ನಂತರ ‘ಮುಳ್ಳೂರು’, ‘ಹೊಸದಿಕ್ಕು’, ‘ಈ ಲೋಕ’ ಪಾಕ್ಷಿಕ ಪತ್ರಿಕೆಗಳನ್ನು ನಂಜನಗೂಡಿನಿಂದಲೇ ಪ್ರಕಟಿಸಿ ತಮ್ಮ ಬಂಡಾಯ ನಿಲುವುಗಳ ಮೂಲಕ ಜನಪ್ರಿಯತೆ ಗಳಿಸಿದರು. ಮಂಗಳೂರಿನಿಂದ ಪ್ರಕಟವಾಗುತ್ತಿದ ‘ಮುಂಗಾರು’ ಪತ್ರಿಕೆಗೂ ವರದಿಗಾರರಾಗಿ ಸೇವೆ ಸಲ್ಲಿಸಿ ದರು. ಹಲವು ಪತ್ರಿಕೆಗಳಿಗೆ ಹವ್ಯಾಸಿ ಪತ್ರಕರ್ತರಾಗಿ ತಮ್ಮ ಹೆಗ್ಗುರುತು ಮೂಡಿಸಿ ದರು.
ಸಣ್ಣ ಪತ್ರಿಕೆಗಳಿಗೂ ಹೆಸರುವಾಸಿ
ತಾಲ್ಲೂಕು ಕೇಂದ್ರಕ್ಕೆ ಸೀಮಿತವಾಗಿ ಅನೇಕ ಸ್ಥಳೀಯ ದಿನಪತ್ರಿಕೆಗಳು ಪ್ರಕಟಗೊಂಡಿರುವ ಇತಿಹಾಸ ನಂಜನಗೂಡಿನಲ್ಲಿದೆ. ಕಪಿಲ ವಾರ್ತೆ, ಈ ಲೋಕ, ನಿತ್ಯಸತ್ಯ, ಸತ್ಯಪ್ರಭ, ಹೊಯ್ಸಳ ಕರ್ನಾಟಕ, ಗರಳಪುರಿ ಮಹಾನಂದಿ, ರೈತರಾಜ್ಯ, ಟೈಮ್ಸ್ ಆಫ್ ನಂಜನಗೂಡು ಪತ್ರಿಕೆಗಳು ಪ್ರಸರಣಗೊಂಡಿವೆ. ಸ ದ್ಯ ಕೆಲ ಪತ್ರಿಕೆಗಳು ಪ್ರಕಟಗೊಳ್ಳುತ್ತಿಲ್ಲ. ಇನ್ನು ಕೆಲವು ಇಂದಿಗೂ ಪ್ರಕಟಗೊಳ್ಳುತ್ತಿರುವು ದು ವಿಶೇಷ. ಹಾಗೆೆಯೇ ಪಾಕ್ಷಿಕ ಪತ್ರಿಕೆಗಳೂ ನಂಜನಗೂಡಿನಲ್ಲಿ ಹುಟ್ಟುಕೊಂಡಿವೆ. ಕಪಿಲ ವಾಹಿ ನಿ, ಹೊಯ್ಸಳ ಕರ್ನಾಟಕ, ಸ್ವಾಭಿಮಾನಿ, ಸುದ್ದಿ ಸಂಪದ, ಕಲಿಗಾಲ, ಕರ್ಮಕಾಂಡ ನಂಜನಗೂಡಿನಿಂದ ಪ್ರಕಟಗೊಂಡಿವೆ. ಕೆಲ ಪತ್ರಿಕೆಗಳು ಇಂದಿಗೂ ಬರುತ್ತಿವೆ.
ನಂಜನಗೂಡಿನ ಪತ್ರಕರ್ತರು
ನಂಜನಗೂಡಿನ ಅನೇಕ ಹಿರಿಯಪತ್ರಕರ್ತರು ವಿವಿಧ ಪತ್ರಿಕೆಗಳಲ್ಲಿ ರಾಜ್ಯ, ಜಿಲ್ಲಾ ಮಟ್ಟ ದಲ್ಲಿ ತಮ್ಮದೇ ಛಾಪು ಮೂಡಿಸಿ ಅನನ್ಯ ಸೇವೆ ಸಲ್ಲಿಸುತ್ತಿದ್ದಾರೆ. ನಾಲ್ಕು ದಶಕಗಳಿಂದ ಸುದೀರ್ಘ ಅನುಭವವಿರುವ ಎಂ.ಎನ್ ಮೋಹನ್ ಕುಮಾರ್ ಅವರು ಇದೀಗ ವಿಶ್ವವಾಣಿ ಪತ್ರಿಕೆಯ ಸಂಪಾದಕೀಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾಡಿನ ಮಹನೀಯರ ದಿವ್ಯವಾಣಿಯನ್ನು ಶ್ರೋತೃಗಳಿಗೆ ಕೇಳಿಸುವ ಮೂಲಕ ವಿಶ್ವವಿಖ್ಯಾತಿ ಪಡೆದಿರುವ ವಿಶ್ವವಾಣಿ ಕ್ಲಬ್ ಹೌಸ್ ನ ರೂವಾರಿಯಾಗಿ ಎಂ.ಎನ್.ಮೋಹನ್ ಕುಮಾರ್ ಅವರು ನಂಜನಗೂಡು ಮೋಹನ್ ಎಂದೇ ಪ್ರಖ್ಯಾತಿ ಪಡೆದಿದ್ದಾರೆ.
ವಿಜಯವಾಣಿ ಹಿರಿಯ ಉಪಸಂಪಾದಕರಾಗಿ ಮುಳ್ಳೂರು ರಾಜು, ಉದಯವಾಣಿ ಹಿರಿಯ ಉಪಸಂಪಾದಕರಾಗಿ ಅ.ಮ.ಸುರೇಶ್ ಆಂದೋಲನ ಹಿರಿಯ ಉಪಸಂಪಾದಕರಾಗಿ ಮುಳ್ಳೂರು ಜಿ.ಶಿವಪ್ರಸಾದ್ ಮೈಸೂರು ದಿಗಂತ ಹಿರಿಯ ಉಪಸಂಪಾದಕರಾಗಿ ಶೇಖರ್ ಕಿರುಗುಂದ, ಶ್ರೀಧರ್ ಆರಂಭದ ‘ಆಂದೋಲನ’ ದಿನಪತ್ರಿಕೆಯಲ್ಲಿ ಮಂಡ್ಯ, ಮಡಿಕೇರಿಯಲ್ಲಿ ಕಾರ್ಯ ನಿರ್ವಹಿಸಿ ಈಗ ಮೈಸೂರು ಕಚೇರಿಯಲ್ಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹುಲ್ಲಹಳ್ಳಿ ಚಿರಂಜೀವಿ, ನಾಗೇಶ್ ಉಮಾಶಂಕರ್ ಕಪ್ಪಸೋಗೆ ಸಿದ್ದರಾಜು ಹೀಗೆ ಅನೇಕರು ವಿವಿಧ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದಾರೆ.
ಮರೆಯಾದ ಪತ್ರಕರ್ತರು
ಸುದೀರ್ಘ ವರ್ಷಗಳ ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಜನವಾನಸದಲ್ಲಿ ಮನೆಮಾಡಿ ದವರನ್ನು ನಾವು ಸ್ಮರಿಸಲೇ ಬೇಕು. ‘ಆಂದೋಲನ’ ದಿನಪತ್ರಿಕೆಯ ಮೊದಲ ವರದಿಗಾರರಾಗಿದ್ದ ಕೆ.ಬಿ.ಜಯದೇವಪ್ಪ, ಪ್ರಜಾವಾಣಿಯ ಕೆ.ಆರ್ ಸತ್ಯನಾರಾಯಣ, ಕನ್ನಡಪ್ರಭ ಇ.ಆರ್.ಕೃಷ್ಣಮೂರ್ತಿ, ಸಂಕ್ರಾಂತಿಯ ಕಾಳಶೆಟ್ಟಿ, ಪ್ರಜಾವಾಣಿಯ ರಂಗಸ್ವಾಮಿ, ವಿಜಯ ಕರ್ನಾಟಕ ನಾಗರಾಜು, ಕುಪ್ಪರವಳ್ಳಿಯ ವಿಶ್ವನಾಥ, ಮೈಸೂರು ಮಿತ್ರ ರವಿಶಂಕ… ಸುದೀರ್ಘ ವರ್ಷಗಳ ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಕಾಲವಾದವರು.