ಮೈಸೂರು: ನೊಂದವರ ಪರವಾಗಿ ಸ್ಪಂದಿಸಿದ ಪತ್ರಿಕೆ ಆಂದೋಲನ: ಆರ್.ಧ್ರುವ ನಾರಾಯಣ್
ಮೈಸೂರು: ಬಡವರ, ಶೋಷಿತರ, ರೈತರ ಬಗ್ಗೆ, ನೊಂದವರ ಪರವಾಗಿ ಸ್ಪಂದಿಸಿ ಕೆಲಸ ಮಾಡಿದ ಪತ್ರಿಕೆ ಎಂದರೆ ಅದು ಆಂದೋಲನ ಪತ್ರಿಕೆ. ತನ್ನ ವಸ್ತುನಿಷ್ಠೆ ವರದಿಯಿಂದಲೇ ಜನಪ್ರಿಯತೆಯನ್ನು ಗಳಿಸಿತ್ತು ಮತ್ತು ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ವದಗಿಸುವ ನಿಟ್ಟಿನಲ್ಲಿ ಅವರ ಪರವಾಗಿ ನಿಂತು ದುಡಿದ ಪತ್ರಿಕೆ. ಎಲ್ಲಾ ಸಂದರ್ಭದಲ್ಲಿಯೂ ಮುಂಚೂಣಿಯಲ್ಲಿ ನಿಂತು ನಿಖರ ವರದಿಗಳನ್ನು ಜನರ ಮುಂದಿಡುತ್ತಿದೆ. ಮುಂದಿನ ದಿನಗಳಲ್ಲಿ ಈ ಪತ್ರಿಕೆ ರಾಜ್ಯವ್ಯಾಪಿ ಬೆಳವಣಿಗೆಯಾಗಲಿ ಎಂದು ಹಾರೈಸುತೇನೆ.
ಆರ್.ಧ್ರುವ ನಾರಾಯಣ್, ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದರು