Mysore
26
broken clouds
Light
Dark

ಆಂದೋಲನ ನಮ್ಮ ನಡುವಣ ಆಶಾ ಕಿರಣ : ಎಚ್. ವಿಶ್ವನಾಥ್

ಮೈಸೂರು: ಆಂದೋಲನ ಪತ್ರಿಕೆಯ 50 ವರ್ಷಗಳ ಸಾರ್ಥಕ ಪಯಣದ ಅಂಗವಾಗಿ ಕೆ.ಆರ್. ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳ ಅಭಿವೃದ್ಧಿ ಮುನ್ನೋಟದ ಬಗ್ಗೆ ಇಂದು ಅರ್ಥ ಪೂರ್ಣ ಸಂವಾದ ಕಾರ್ಯಕ್ರಮ ನಡೆಯಿತು.
ಕೆ. ಆರ್. ನಗರದ ಚೀರನಹಳ್ಳಿ ರಸ್ತೆಯ ಸಾಯಿ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಸಂವಾದ ಕಾರ್ಯಕ್ರಮವನ್ನು ಪುರಸಭೆ ಕೋಳಿ ಪ್ರಕಾಶ್, ಹರದನಹಳ್ಳಿ ಗ್ರಾಮಪಂಚಾಯಿ ಅಧ್ಯಕ್ಷೆ ನಂದಿನಿ ರಮೇಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಮಾತನಾಡಿ ಆಂದೋಲನ ಸಂಸ್ಥಾಪಕ ಸಂಪಾದಕ ರಾಜಶೇಖರ ಕೋಟಿ ಅವರ ಜತೆಗಿನ ಒಡನಾಟವನ್ನು ಸ್ಮರಿಸಿದರು. ಪತ್ರಿಕೆಯನ್ನು ಕಟ್ಟಿ ಬೆಳೆಸಲು ಅವರು ಪಟ್ಟ ಶ್ರಮವನ್ನು ಸಭಿಕರ ಮುಂದೆ ತೆರೆದಿಟ್ಟರು. ತಾವೂ ಪತ್ರಿಕೆಗೆ ಬರೆಯುತ್ತಿದ್ದುದನ್ನು ಸ್ಮರಿಸಿದರು. ಆಂದೋಲನ ಪತ್ರಿಕೆ ಗ್ರಾಮೀಣ ಜನರ ಕಷ್ಟ ಕಾರ್ಪಣ್ಯಗಳನ್ನು ಬಿಂಬಿಸಿ ಜನಸ್ನೇಹಿಯಾಗಿ ಬೆಳೆದ ಪತ್ರಿಕೆ ಎಂದು ಬಣ್ಣಿಸಿದರು. ಮಾಧ್ಯಮಗಳು ಇಂದು ರಾಜಕಾರಣಿಗಳು, ಮಠಗಳು ಮತ್ತು ಮಠಾಧಿಪತಿಗಳ ಅಡಿಯಾಳಾಗುತ್ತಿವೆ. ಎಲ್ಲವನ್ನೂ ಓಟಿನಿಂದ ಅಳೆಯುವ ಪ್ರವೃತ್ತಿ ಬಂದಿದೆ. ಈ ನಡುವೆ ಆಂದೋಲನದಂತಹ ಪತ್ರಿಕೆ ನಮ್ಮ ನಡುವಣ ಆಶಾಕಿರಣ ಎಂದರು. ದೇವರಾಜ ಅರಸು, ತುಳಸಿದಾಸಪ್ಪ ಅವರಂತಹ ಧೀಮಂತರನ್ನು ಕಂಡ‌ ಮೈಸೂರು ಎಂದವರು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಸಾ.ರಾ ಮಹೇಶ್ ಪುತ್ರ ಜಯಂತ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಾಂಗ್ರೆಸ್ ಮುಖಂಡ ಡಿ ರವಿಶಂಕರ್, ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಅಚ್ಚುತಾ ನಂದ್, ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ ಎನ್ ಬಸಂತ್, ಪ್ರಖ್ಯಾತ ಮೂಳೆ ತಜ್ಞರಾದ ಡಾಕ್ಟರ್ ಮೆಹಬೂಬ್ ಖಾನ್, ರಾಜ್ಯ ರೈತ ಸಂಘದ ವಿಭಾಗಿಯ ಸಂಘಟನಾ ಕಾರ್ಯದರ್ಶಿ ಸರಗೂರು ನಟರಾಜ್ ಮತ್ತಿತರರು ಭಾಗವಹಿಸಿದ್ದರು.

ಸಾಹಿತಿ, ಪತ್ರಕರ್ತ  ಭೇರ್ಯ ರಾಮಕುಮಾರ್ ಅವರು ಕೆ ಆರ್ ನಗರ ಮತ್ತು ಸಾಲಿಗ್ರಾಮ ತಾಲೂಕಿನ 50 ವರ್ಷಗಳ ಅಭಿವೃದ್ಧಿ ಮುನ್ನೋಟದ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು. ಇದೆ ವೇಳೆ ಸಾಧಕರಾದ ಕೆ ಎಲ್ ಹೇಮಂತ್ ಕುಮಾರ್, ಹಾಗೂ ಎಚ್ ಆರ್ ನವೀನ್ ಕುಮಾರ್ ಅವರಿಗೆ ಪತ್ರಿಕೆವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ