Mysore
24
overcast clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಗ್ರೇಟ್ ಬಾಂಬೆ ಸರ್ಕಸ್ ವಿರುದ್ಧ ಪೇಟಾ ದೂರು

ಮೈಸೂರು: ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್(ಪೇಟಾ) ಇಂಡಿಯಾದ ವತಿಯಿಂದ ದಿ ಗ್ರೇಟ್ ಬಾಂಬೆ ಸರ್ಕಸ್ ವಿರುದ್ಧ ದೂರು ದಾಖಲಾಗಿದೆ.
ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾ(ಎಡಬ್ಲ್ಯೂಬಿಐ)ದಲ್ಲಿ ನೋಂದಾಯಿಸದ ಸರ್ಕಸ್ ಆಟಗಳನ್ನು ಪ್ರದರ್ಶಿಸಲು ನಾಯಿಗಳು ಮತ್ತು ಪಕ್ಷಿಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿ ಗ್ರೇಟ್ ಬಾಂಬೆ ಸರ್ಕಸ್ ವಿರುದ್ಧ ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ನಾಯಿಗಳು ರಿಂಗಿನ ಅಂಚಿನಲ್ಲಿ ತಮ್ಮ ಮುಂಭಾಗದ ಕಾಲುಗಳ ಮೇಲೆ ನಡೆಯುವಂತೆ ಮಾಡುವುದು. ಪಕ್ಷಿಗಳು ಒಂದು ಚಿಕ್ಕ ಬಂಡಿಯನ್ನು ಎಳೆಯುವಂತೆ ಮಾಡುವುದಕ್ಕೆ ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾ (ಎಡಬ್ಲ್ಯೂಬಿಐ)ನಲ್ಲಿ ನೋಂದಾಯಿಸಲಾಗಿಲ್ಲ. ಹೀಗಾಗಿ, ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೇಟಾ) ಇಂಡಿಯಾ ದೂರು ದಾಖಲಿಸಿದೆ.
ಸೆಕ್ಷನ್ ೪೨೯ರ ಅಡಿಯಲ್ಲಿ ಪಕ್ಷಿಗಳನ್ನು ಅಂಗವಿಕಲಗೊಳಿಸಿದ್ದಕ್ಕಾಗಿ, ಐಪಿಸಿ ಸೆಕ್ಷನ್ 3 ಮತ್ತು 11(1)(ಎ) (ಪ್ರಾಣಿಗಳಿಗೆ ಅನಗತ್ಯ ಮತ್ತು ನೋವು ಮತ್ತು ನೋವನ್ನು ಉಂಟು ಮಾಡುವುದಕ್ಕಾಗಿ, 11(1)(ಎಲ್) (ಪಕ್ಷಿಗಳನ್ನು ವಿರೂಪಗೊಳಿಸುವುದಕ್ಕಾಗಿ), ಮತ್ತು ಸೆಕ್ಷನ್ 26 ಮತ್ತು 28 (3) ನಿಯಮ ಉಲ್ಲಂಘನೆ, ಪಿಸಿಎ 1960 ರ ನೋಂದಣಿಯಾಗದ ಸರ್ಕಸ್ ಆಟಗಳನ್ನು ಆಡಿಸುವುದು ಇವುಗಳ ಅಡಿಯಲ್ಲಿ ಪೇಟಾದ ಸಂಯೋಜಕಿ ಮುಂಬೈನ ಶಿಲ್ವಾ ಚೌಧರಿ ಅವರು ದೂರು ದಾಖಲಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!