ಹಾಸನ: ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಬದಲಿಸಿರುವ ಸರಕಾರ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ಮುಸ್ಲಿಂ ವಿರೋಧಿ ಕೆಲಸ ಮಾಡುತ್ತಿದೆ ಎಂದು ಜೆಡಿಎಸ್ ಶಾಸಕ ಎಚ್.ಡಿ ರೇವಣ್ಣ ಆರೋಪಿಸಿದರು. ಮೈಸೂರು ಒಡೆಯರ್ ಅವರ ಹೆಸರನ್ನು ಬೇರೆ ರೈಲಿಗೆ ಇಡಬಹುದಾಗಿತ್ತು. ಚುನಾವಣೆ ಸಮೀಪ ಇರುವಾಗ ಒಡೆಯರ್ ಹಾಗೂ ಕುವೆಂಪು ಹೆಸರು ನೆನಪಾಗುತ್ತಿದೆ ಎಂದು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ
ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಬದಲಾವಣೆ ಸರ್ಕಾರದ ವಿರುದ್ದ ಎಚ್‌ಡಿ ರೇವಣ್ಣ ಕಿಡಿ



