ವಿರಾಜಪೇಟೆ: ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಕ್ರೀಡಾ ಚಟುವಟಿಕೆಗಳಿಗೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸದಿದ್ದಲ್ಲಿ ನ.೭ರಂದು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಕ್ರೀಡಾಪಟುಗಳ ಪರ ಮಾಜಿ ಅಂತರರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಎಚ್ಚರಿಕೆ ನೀಡಿದರು.
ಪಟ್ಟಣದ ತಹಸಿಲ್ದಾರ್ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಕಳೆದ ೨೦ ವರ್ಷಗಳಿಂದ ಇಲ್ಲಿ ಕ್ರೀಡೆಗೆ ಯಾವುದೇ ಸೌಕರ್ಯಗಳು ಇಲ್ಲ. ನಾವು ಹೊರ ರಾಜ್ಯದಲ್ಲಿ ಕ್ರೀಡೆಯ ತರಬೇತಿ ಪಡೆದೆವು. ಕೊಡಗು ಕ್ರೀಡಾ ಜಿಲ್ಲೆ ಎಂದು ಹೇಳಿಕೊಂಡರೂ ಇಲ್ಲಿ ಕ್ರೀಡೆಗೆ ಅಗತ್ಯ ಸೌಲಭ್ಯವಿಲ್ಲ. ಈ ನಡುವೆ ಇರುವ ತಾಲ್ಲೂಕು ಮೈದಾನವನ್ನು ಪಾರ್ಕಿಂಗ್‌ಗೆ ಒದಗಿಸದೆ ಆಟದ ಮೈದಾನವಾಗಿ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಇನ್ನು ಮುಂದೆ ಪುರಸಭೆಯಲ್ಲಿ ನಡೆಯುವ ಸಭೆಯಲ್ಲಿ ಕ್ರೀಡಾ ಬಜೆಟ್ ಅಳವಡಿಸಿ ಕ್ರೀಡಾ ಚಟುವಟಿಕೆಗಳಿಗೆ ಸೂಕ್ತ ಧನಸಹಾಯ ನೀಡಬೇಕು. ವಿರಾಜಪೇಟೆುಂಲ್ಲಿ ಹಿರಿಯ ನಾಗರಿಕರು, ಮಕ್ಕಳು ಹಾಗೂ ಮಹಿಳೆಯರಿಗೆ ವಾಯುವಿಹಾರಕ್ಕೆ ಉದ್ಯಾನದ ಅಗತ್ಯವಿದ್ದು, ಇದರ ನಿರ್ಮಾಣಕ್ಕೆ ಜಾಗ ಗುರುತಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪಟ್ಟಣದ ತೆಲುಗರ ಬೀದಿಯ ಮಾರಿಯಮ್ಮ ದೇವಾಲುಂದಿಂದ ಗಡಿಯಾರ ಕಂಬಕ್ಕಾಗಿ ಮಿನಿ ವಿಧಾನಸೌಧದವರೆಗೆ ಜಾಥಾ ನಡೆಸಲಾಯಿತು. ಏಜಾಸ್ ಅಹಮ್ಮದ್, ರಾಜೇಶ್, ಕೂತಂಡ ಗಣೇಶ್, ವಾಲಿಬಾಲ್ ಆಟಗಾರ ಅಂದಾಯಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.





