Mysore
26
broken clouds

Social Media

ಬುಧವಾರ, 13 ಮೇ 2026
Light
Dark

ಪ್ರವಾಸಿತಾಣಗಳಲ್ಲಿ ಭಾರೀ ನೂಕು ನುಗ್ಗಲು; ಚಾಮುಂಡಿಬೆಟ್ಟ, ಕೆಆರ್‌ಎಸ್, ಮೃಗಾಲಯದಲ್ಲಿ ಜನವೋ ಜನ

ಮೈಸೂರು: ಜಂಬೂಸವಾರಿ ಮುಗಿದರೂ ಮೈಸೂರಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಪ್ರವಾಸಿಗರ ದಂಡು ಆಗಮಿಸುತ್ತಿದೆ. ಎಲ್ಲಿ ನೋಡಿದರೂ ಜನಜಂಗುಳಿ ಕಾಣಿಸುತ್ತಿತ್ತು. ದಸರೆಯ ಮಾರನೇ ದಿನವಾದ ಗುರುವಾರ ಅರಮನೆಗೆ ಭೇಟಿ ನೀಡುವ ಜನರ ಸಂಖ್ಯೆ ಹೆಚ್ಚಾಗಿತ್ತು. 

ಮೃಗಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಟಿಕೆಟ್ ಕೌಂಟರ್ ಬಳಿ ನೂಕುನುಗ್ಗಲು ಉಂಟಾಗಿತ್ತು. ಚಾಮುಂಡಿ ಬೆಟ್ಟ ಪ್ರವಾಸಿಗರಿಂದ ತುಂಬಿತ್ತು. ಸಾಲು ಸಾಲು ವಾಹನಗಳಿಂದ ಬೆಟ್ಟದ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ಪರದಾಡುವಂತಾಯಿತು. ಸಂಚಾರ ನಿರ್ವಹಣೆಗೆ ಪೊಲೀಸರು ಹರಸಾಹಸಪಟ್ಟರು.

ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಜಗನ್ಮೋಹನ ಅರಮನೆ ವೀಕ್ಷಿಸಿದ ಜನರು ದಸರಾ ವಸ್ತು ಪ್ರದರ್ಶನಕ್ಕೆ ಲಗ್ಗೆ ಇಟ್ಟಿದ್ದರು. ಸಂಜೆ ಐದು ಗಂಟೆಯ ನಂತರ ವಸ್ತುಪ್ರದರ್ಶನ ಆವರಣ ಜನರಿಂದ ತುಂಬಿ ತುಳುಕುತಿತ್ತು. ಮೈಸೂರಿನ ಪ್ರವಾಸಿ ತಾಣಗಳನ್ನು ವೀಕ್ಷಿಸಿದ ಜನರು ರಾತ್ರಿ ಕೆಆರ್‌ಎಸ್‌ಗೆ ಭೇಟಿ ನೀಡಿ ಚಿಮ್ಮುವ ಕಾರಂಜಿ ನೋಡಿದರು.

ಟ್ರಾಫಿಕ್ ಜಾಮ್ 

ಅರಮನೆ ಸುತ್ತಮುತ್ತಲ ಮಾರ್ಗದಲ್ಲಿ ನೂರಾರು ವಾಹನಗಳು ಓಡಾಡುತ್ತಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿ ಸಾರ್ವಜನಿಕರು ಪರದಾಡುವಂತಾಯಿತು. ಕೆ.ಆರ್.ವೃತ್ತ, ಹಾರ್ಡಿಂಜ್ ವೃತ್ತ, ವಸ್ತು ಪ್ರದರ್ಶನದ ಬಳಿ ಸಾಲು ಸಾಲು ವಾಹನಗಳು ಬರುತ್ತಿದ್ದರಿಂದ ಜಾಮ್ ಆಗುತ್ತಿತ್ತು. ನಿನ್ನೆ ಪೂರ್ತಿ ಕೆಲಸ ಮಾಡಿ ದಣಿದಿದ್ದ ಸಂಚಾರಿ ಪೊಲೀಸರು ಕರ್ತವ್ಯಕ್ಕೆ ನಿೋಂಜನೆಗೊಂಡಿದ್ದರೂ ನಿರ್ವಹಣೆ ಬಗ್ಗೆ ಗಮನಹರಿಸದ ಕಾರಣ ಕೆಲವು ಕಡೆ ಬಹು ಹೊತ್ತಿನ ತನಕ ಕಾದು ಮುಂದೆ ಸಾಗಬೇಕಾಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!