Mysore
24
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ನನ್ನನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕುವುದು ಪಕ್ಷಕ್ಕೆ ಬಿಟ್ಟ ವಿಚಾರ : ಪ್ರಣಯ್‌

ಗುಂಡ್ಲುಪೇಟೆ : ಕಾಂಗ್ರೆಸ್‌ ಪಕ್ಷದ ವತಿಯಿಂದ ಆಯೋಜನೆ ಮಾಡಲಾಗಿರುವ ಭಾರತ್‌ ಜೋಡೊ ಯಾತ್ರೆಯು ನಾಳೆ  ಗುಂಡ್ಲುಪೇಟೆಯ ಮೂಲಕ ರಾಜ್ಯವನ್ನು ಪ್ರವೇಶ ಮಾಡಲಿದ್ದು, ಈ ಸಂಬಂಧವಾಗಿ ಕಾಂಗ್ರೆಸ್‌ ನಾಯಕರ ಫ್ಲೆಕ್ಸ್ ಗಳನ್ನು ಪಟ್ಟಣದಾದ್ಯಂತ ಹಾಕಲಾಗಿದ್ದು, ಇಂದು ಬೆಳ್ಳಂಬೆಳಿಗ್ಗೆ ಕಿಡಿಗೇಡಿಗಳು ಫ್ಲೆಕ್ಸ್​ ಹಾಕುವ ಮೂಲಕ ಹರಿದು ಹಾಕಲಾಗಿತ್ತು.
ಈ ಸಂಬಂಧವಾಗಿ ಚಾಮರಾಜನಗರ ಜಿಲ್ಲೆಯ ಬಿಜೆಪಿ ಜಿಲ್ಲಾ ಯೂವ ಮೋರ್ಚಾಅಧ್ಯಕ್ಷ ಪ್ರಣಯ್‌ ಅವರು ಕುಮ್ಮಕ್ಕು ನೀಡುತಲಿದ್ದು, ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಪ್ರಣಯ್‌ ಅವರ ಮೇಲೆ ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ  ಬಿಜೆಪಿ ಜಿಲ್ಲಾಧ್ಯಕ್ಷ ಪ್ರಣಯ್‌ ಅವರು ಫ್ಲೆಕ್ಸ್​ಗಳಿಗೆ ಬ್ಲೇಡ್ ಹಾಕಿರುವ ಸಂಬಂಧ  ದೂರು ದಾಖಲಾಗಿರವುದರ ಕುರಿತು ಪೊಲೀಸಿನವರು ಕ್ರಮ ಕೈಗೊಂಡು ಕಿಡಿಗೇಡಿಗಳನ್ನು ಬಂಧಿಸುತ್ತಾರೆ, ಅವರ ಮೇಲೆ ಸೂಕ್ತ ಕಾನೂಕು ಕ್ರಮಗಳನ್ನು ಕೈಗೊಳ್ಳುತ್ತಾರೆ, ಅಂತಹ ಹೇಯ ಹಾಗೂ ಲಜ್ಜೆಗೆಟ್ಟ ಕೆಲಸವನ್ನು ಸಾಮಾನ್ಯ ಕಾರ್ಯಕರ್ತರು ಮಾಡುವುದಿಲ್ಲ. ಫ್ಲೆಕ್ಸ್​ಗಳನ್ನು ಹರಿದು ಹಾಕಿರುವ ಕೆಲಸ ಯಾರೇ ಮಾಡಿದರು ಅದು ತಪ್ಪು ಅಂತವರಿಗೆ ಶಿಕ್ಷೆಯಾಗಲಿ,ಅದು ಬಿಟ್ಟು ಆರೋಪವನ್ನು ಮಾಡುವುದು, ಕುಮ್ಮಕ್ಕು ಮಾಡುತ್ತಿದ್ದಾರೆನ್ನುವುದು ತಪ್ಪು, ನನ್ನನ್ನು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಮತ್ತು ಉಳಿಸುವ ಬಗ್ಗೆ ನನ್ನ ಪಕ್ಷ ತೀರ್ಮಾನ ಮಾಡುತ್ತದೆ. ಅದು ಪಕ್ಷಕ್ಕೆ ಬಿಟ್ಟ ವಿಚಾರ ಎಂದು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!