Mysore
24
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಶಿಕ್ಷಣದಿಂದ ಮಾತ್ರ ಬಡತನ ಮೆಟ್ಟಿ ನಿಲ್ಲಲು ಸಾಧ್ಯ : ಪ್ರತಿಬಿಂಬ ಟ್ರಸ್ಟ್ ಮುಖ್ಯಸ್ಥ ಮುರುಳಿ

ಹನೂರು : ಗ್ರಾಮೀಣ ಭಾಗದ ಮಕ್ಕಳು ಸಹ ಈಗಿನಿಂದಲೇ  ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಆ ನಿಟ್ಟಿನಲ್ಲಿ ಕಂಪ್ಯೂಟರ್ ಸದುಪಯೋಗ ಮಾಡಿಕೊಳ್ಳಿ  ಅಲ್ಲದೆ ಶಿಕ್ಷಣದಿಂದ ಮಾತ್ರ ಬಡತನ ಮೆಟ್ಟಿ ನಿಲ್ಲಲು ಸಾಧ್ಯ  ಎಂದು ಪ್ರತಿಬಿಂಬ ಟ್ರಸ್ಟ್ ನ ಮುಖ್ಯಸ್ಥರಾದ ಮುರುಳಿ ಹೇಳಿದರು..

ತಾಲ್ಲೂಕಿನ ಕುರಟ್ಟಿ ಹೊಸೂರು ಕಾಲೋನಿ ಶಾಲೆಗೆ ಉಚಿತವಾಗಿ ಕಂಪ್ಯೂಟರ್, ಹಾಗೂ ಬ್ಯಾಗ್, ಲೇಖನ ಸಾಮಾಗ್ರಿಗಳು,ಶಾಲಾ ಕಟ್ಟಡಗಳಿಗೆ ಬಣ್ಣದ ಸಾಮಗ್ರಿಗಳು  ವಿತರಣೆ ಮಾಡಿ ಮಾತನಾಡಿದರು..
ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿರುವ ನಮಗೆ ಕಂಪ್ಯೂಟರ್ ಜ್ಞಾನ ತುಂಬಾ ಅಗತ್ಯವಾಗಿದೆ.ಆ ನಿಟ್ಟಿನಲ್ಲಿ ಮಕ್ಕಳು ಈಗಿಂದಲೇ ಅಭ್ಯಾಸ ಮಾಡುವಂತವರಾಗಬೇಕು ಅಲ್ಲದೆ ಓದಿಗೆ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಲೇಖನ ಸಾಮಗ್ರಿಗಳು, ಬ್ಯಾಗ್ ನೀಡುತ್ತಿದ್ದು ಎಲ್ಲರೂ ಸಹ ಸದುಪಯೋಗ ಮಾಡಿಕೊಳ್ಳಿ ಎಂದು ಕರೆ ನೀಡಿದರು.ಅಲ್ಲದೆ ಮಕ್ಕಳು ಕಲಿಕೆಯಲ್ಲಿ ಮುಂದೆ ಬರಲು ಶಾಲಾ ವಾತಾವರಣ ಸಹ ತುಂಬಾ ಮುಖ್ಯ ಪಾತ್ರವಹಿಸಲಿದೆ ಆ ನಿಟ್ಟಿನಲ್ಲಿ ಶಾಲೆಗೆ ತುಂಬಾ ಅಗತ್ಯವಾದ ಬಣ್ಣ ಬಳಿಯುವ ಕೆಲಸ ಸಹ ಆಗಬೇಕಿದೆ. ಅದನ್ನು ಸಹ ನಾವು ಕೊಡುತ್ತೇವೆ ಒಟ್ಟಿನಲ್ಲಿ ಶಾಲಾ ಮಕ್ಕಳಿಗೆ ಅನುಕೂಲ ಆಗಬೇಕು ಓದಿನಲ್ಲಿ ಮುಂದೆ ಬಂದು ತಮ್ಮ ಜೀವನ ಸುಗಮವಾಗಿ ಕಟ್ಟಿಕೊಳ್ಳಲು ಅನುಕೂಲ ಆಗಬೇಕು ಎಂದರು..
ಕುರಟ್ಟಿ ಹೊಸೂರು ಕಾಲೋನಿ ಶಾಲೆಯ ಶಿಕ್ಷಕ ಭರತ್ ಮಾತನಾಡಿ ನಮ್ಮ  ಕಾಡಂಚಿನ  ಶಾಲೆ ಗುರುತಿಸಿ ಶಾಲೆಯಲ್ಲಿನ   ಮಕ್ಕಳು  ಓದಿನಲ್ಲಿ ಮುಂದೆ ಬರಲಿ ಎಂಬ ಉದ್ದೇಶದಿಂದ ಪ್ರತಿಬಿಂಬ ಟ್ರಸ್ಟ್ ಇಂದು ಸಾಕಷ್ಟು ವಸ್ತುಗಳನ್ನು ದಾನ ನೀಡಿದೆ  ನಮ್ಮ ಕಾಡಂಚಿನ ಶಾಲೆ ಗುರುತಿಸಿದ್ದಕ್ಕಾಗಿ ಹಾಗೂ ದಾನಿಗಳಾಗಿ ಸಾಕಷ್ಟು ವಸ್ತು ನೀಡಿದ್ದಕ್ಕಾಗಿ  ಟ್ರಸ್ಟ್ ನ ಎಲ್ಲ ಪದಾಧಿಕಾರಿಗಳು ಹಾಗೂ ಎಲ್ಲರಿಗೂ ಶಾಲೆಯ ಪರವಾಗಿ ಅಭಿನಂದನೆಗಳು ಎಂದರು.

ಇದೆ ಸಂದರ್ಭದಲ್ಲಿ ಶಿಕ್ಷಕ ರಾಮಕೃಷ್ಣ, ರಾಜೇಂದ್ರ ಬಾಬು, ಅತಿಥಿ ಶಿಕ್ಷಕರಾದ ಮಹೇಶ್, ವಸಂತ,  ಹಾಗೂ ಪ್ರತಿಬಿಂಬ ಟ್ರಸ್ಟ್ ನ ಪದಾಧಿಕಾರಿಗಳು, ಮಕ್ಕಳು, ಪೋಷಕರು  ಉಪಸ್ಥಿತರಿದ್ದರು..

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!