Mysore
25
overcast clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಬಹಳ ವರ್ಷಗಳ ಬಳಿಕ ಮೈದುಂಬಿದ ಹಲಗೂರು ಕೆರೆ

ತ್ಯಾಜ್ಯದ ತಾಣವಾದ ಕೆರೆ ಇಂದು ಅಭದ್ರತೆುಂಲ್ಲಿ; ಅಭಿವೃದ್ಧಿಗೆ ಸ್ಥಳೀಯರ ಆಗ್ರಹ

ಉಮೇಶ್ ಹಲಗೂರು

ಹಲಗೂರು: ಇಲ್ಲಿಗೆ ಸಮೀಪದ ಭೀಮನ ಕಿಂಡಿ ಅರಣ್ಯ ಪ್ರದೇಶದಲ್ಲಿ ಅತಿಯಾಗಿ ಸುರಿದ ಮಳೆಯಿಂದಾಗಿ ಹಲಗೂರು ದೊಡ್ಡ ಕೆರೆಗೆ ಯಥೇಚ್ಛವಾಗಿ ನೀರು ಹರಿದು ಬರುತ್ತಿರುವುದರಿಂದ ಕೆರೆ ಭರ್ತಿಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟವರಿಗೆ ಮನವಿ ವಾಡಿದ್ದರೂ ಕೆರೆಗೆ ನೀರು ತುಂಬಿಸುವ ವಿಚಾರದಲ್ಲಿ ಯಾರೂ ಸ್ಪಂದಿಸಿರಲಿಲ್ಲ. ಇಲ್ಲಿಯ ಜನರ ಮಿಡಿತಕ್ಕೆ ಸ್ಪಂದಿಸಿದ ಪ್ರಕೃತಿ ನಿರಂತರ ಮಳೆ ಸುರಿಸುವ ಮೂಲಕ ಸ್ಪಂದಿಸಿದೆ.

ಕೆರೆಯ ನಿರ್ವಹಣೆ, ಅಭಿವೃದ್ಧಿ ಹಾಗೂ ಕೆರೆಗೆ ನೀರು ತುಂಬಿಸುವ ವಿಚಾರವಾಗಿ, ಒತ್ತುವರಿ ಜಾಗವನ್ನು ತೆರವು ವಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿನ ಸಾರ್ವಜನಿಕರು ಮತ್ತು ಜನಪರ ಸಂಘಟನೆಗಳು ಹಲವಾರು ಹೋರಾಟ ವಾಡಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದ್ದರೂ ಯಾವುದೇ ಪ್ರೋಯೋಜನವಾಗಿಲ್ಲ. ಇದೀಗ ಹಲಗೂರು ಕೆರೆ ತುಂಬಿ ನಿಂತಿದ್ದು, ಕೋಡಿ ಒಡೆದು ಗ್ರಾಮಕ್ಕೆ ನುಗ್ಗಿದರೆ ಹೆಚ್ಚಿನ ಸಮಸ್ಯೆ ಉಂಟಾಗಲಿದೆ. ಆದ್ದರಿಂದ ಕೂಡಲೇ ತಾಲ್ಲೂಕು ಆಡಳಿತ ಸುರಕ್ಷತಾ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!