Mysore
29
scattered clouds

Social Media

ಭಾನುವಾರ, 29 ನವೆಂಬರ್ 2026
Light
Dark

140ನೇ ‘ಮನ್ ಕಿ ಬಾತ್’ | ಡ್ರಗ್ಸ್ ವಿರುದ್ಧ ಜಾಗೃತಿ, ಮೊಬೈಲ್ ಸುರಕ್ಷತೆಗೆ ಪ್ರಧಾನಿ ಮೋದಿ ಒತ್ತು

ನವದೆಹಲಿ: ಮೊಬೈಲ್ ಕಳೆದುಹೋದರೆ ಏನು ಮಾಡಬೇಕು? 140ನೇ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಸಂಚಾರ್ ಸಾಥಿ’ ಬಳಸುವಂತೆ ಸಲಹೆ ನೀಡಿದ್ದಾರೆ.

ಮೊಬೈಲ್ ಕಳೆದುಹೋದರೆ ಅಥವಾ ಕಳುವಾದರೆ, ಅದರ ಐಎಂಇಐ ಸಂಖ್ಯೆ ಬಳಸಿ ಸಾಧನವನ್ನು ಬ್ಲಾಕ್ ಮಾಡಲು ಈ ಪೋರ್ಟಲ್‌ನಲ್ಲಿ ಮನವಿ ಸಲ್ಲಿಸಬಹುದು. ಇದು ಪೊಲೀಸರ ಪತ್ತೆ ಕಾರ್ಯಕ್ಕೂ ನೆರವಾಗುತ್ತದೆ ಎಂದು ಮೋದಿ ಹೇಳಿದ್ದಾರೆ.

ಇದೇ ವೇಳೆ, ಮಾದಕ ವ್ಯಸನದಿಂದ ದೂರವಿರಲು ಯುವಜನರಿಗೆ ಕರೆ ನೀಡಿದ ಅವರು, ವ್ಯಸನದಿಂದ ಹೊರಬರಲು ಪ್ರಯತ್ನಿಸುವವರಿಗೆ ಕುಟುಂಬ ಮತ್ತು ಸಮಾಜ ಬೆಂಬಲ ನೀಡಬೇಕು ಎಂದರು. ಸರ್ಕಾರಿ ನೌಕರರು ಹೊಸ ಕೌಶಲ್ಯಗಳನ್ನು ಕಲಿಯಲು ‘ಐಗಾಟ್ ಕರ್ಮಯೋಗಿ’ ವೇದಿಕೆಯನ್ನು ಬಳಸಿಕೊಳ್ಳುತ್ತಿರುವುದನ್ನೂ ಪ್ರಸ್ತಾಪಿಸಿದರು.

Tags:
error: Content is protected !!