ಬೆಂಗಳೂರು: ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರ ಧರಣಿಗೆ ತೆರೆ ಬಿದ್ದಿದೆ. ಮಾಸಿಕ ಗೌರವಧನವನ್ನು ಎರಡು ಸಾವಿರ ರೂಪಾಯಿ ಹೆಚ್ಚಿಸಲು ರಾಜ್ಯ ಸರ್ಕಾರ ಲಿಖಿತ ಒಪ್ಪಿಗೆ ನೀಡಿದೆ. ಇದರ ಜೊತೆಗೆ, ಗುಂಪು ಆಧಾರಿತ ಪ್ರೋತ್ಸಾಹಧನವಾಗಿ ಒಂದು ಸಾವಿರ ರೂಪಾಯಿ ನೀಡಲು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಸರ್ಕಾರದ ಲಿಖಿತ ಭರವಸೆ ಬಳಿಕ ಸಭೆ ನಡೆಸಿದ ಆಶಾ ಕಾರ್ಯಕರ್ತೆಯರ ಸಂಘ, ಧರಣಿ ಹಿಂಪಡೆಯಲು ನಿರ್ಧರಿಸಿತು. ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಧರಣಿ ವೇದಿಕೆಯಿಂದ ಈ ನಿರ್ಧಾರ ಪ್ರಕಟಿಸಿದರು.
ಗೌರವಧನ ಹೆಚ್ಚಳವನ್ನು ಹೋರಾಟಕ್ಕೆ ಸಂದ ಮೊದಲ ಜಯ ಎಂದು ಸಂಘ ಬಣ್ಣಿಸಿದೆ. ಮುಂಬರುವ ಬಜೆಟ್ನಲ್ಲಿ ಗೌರವಧನ ಇನ್ನೂ ಒಂದು ಸಾವಿರ ರೂಪಾಯಿ ಹೆಚ್ಚುವ ನಿರೀಕ್ಷೆಯಿದೆ.



