Mysore
26
scattered clouds

Social Media

ಶನಿವಾರ, 28 ನವೆಂಬರ್ 2026
Light
Dark

ವರ್ತಮಾನದ ಕಣ್ಣಲ್ಲಿ ಸತ್ಯಾನ್ವೇಷಕ ಗಾಂಧಿ

ಆದರ್ಶ ಜೀವನಕ್ಕೆ ಪ್ರೇರಣೆ: ಮಹಾತ್ಮ ಗಾಂಧೀಜಿ ಬಗ್ಗೆ ಪ್ರಬಂಧ ಬರೆಯಲು ನಮ್ಮ ಶಾಲೆಯ ಶಿಕ್ಷಕರಾದ ಯಶೋಧ ಮಿಸ್ ನನಗೆ ಪ್ರೇರಣೆ ನೀಡಿದರು. ಗಾಂಧಿ ಅಧ್ಯಯನದ ನಂತರ ನನಗೆ ಆದರ್ಶ ಜೀವನ ನಡೆಸಬೇಕು ಎಂಬ ಪ್ರೇರಣೆ ಲಭಿಸಿದೆ. ಗಾಂಧಿಜಿ ತಮ್ಮ ಸ್ವಾರ್ಥವನ್ನು ಮರೆತು ದೇಶದ ಬಡವರು, ದೀನ- ದಲಿತರು, ಶೋಷಿತರ ಉದ್ಧಾರಕ್ಕಾಗಿ ಹಗಲಿರುಳೂ ದುಡಿದದ್ದು ನನಗೆ ಮಾದರಿಯಾಗಿದೆ. ಅವರ ಮಾರ್ಗದಲ್ಲಿ ನಾನೂ ದೇಶಸೇವೆ ಮಾಡಬೇಕು ಎಂದು ನಿರ್ಧರಿಸಿದ್ದೇನೆ.

-ಪ್ರೀತಿ ಆರ್., ೯ನೇ ತರಗತಿ, ಮರಿಮಲ್ಲಪ್ಪ ಪ್ರೌಢಶಾಲೆ, ಮೈಸೂರು

ಗಾಂಧಿ ಅಧ್ಯಯನದಿಂದ ಬದಲಾವಣೆ:  ಗಾಂಧೀಜಿ ಅವರ ಕುರಿತು ನನಗೆ ಪ್ರಬಂಧ ಬರೆಯಲು ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾದ ಬೊಮ್ಮಯ್ಯ ಸರ್ ಮತ್ತು ಸಮಾಜ ವಿಜ್ಞಾನ ಶಿಕ್ಷಕರಾದ ಸತ್ಯ ಸರ್ ಪ್ರೇರಣೆ ನೀಡಿದರು. ಗಾಂಧಿ ಅಧ್ಯಯನದ ನಂತರ ನನ್ನ ಬದುಕಿನಲ್ಲಿ ಅನೇಕ ಬದಲಾವಣೆಗಳು ಆಗಿವೆ. ಗಾಂಧಿ ಅವರಂತೆ ಸತ್ಯ, ಅಹಿಂಸೆ, ತ್ಯಾಗಗಳನ್ನು ನನ್ನ ಜೀವನದ ಉಸಿರಾಗಿಸಿಕೊಳ್ಳಬೇಕು ಎಂದು ನಿರ್ಧರಿಸಿದ್ದೇನೆ.

-ತನೋಜ್ ಎನ್., ೯ನೇ ತರಗತಿ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಹಾಲಹಳ್ಳಿ ಬಡಾವಣೆ, ಮಂಡ್ಯ

ಯುವಜನತೆಗೆ ಗಾಂಧಿ ಮಾರ್ಗ ಅಗತ್ಯ: ಮಹಾತ್ಮ ಗಾಂಧೀಜಿ ಅವರ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನನಗೆ ನಮ್ಮ ಶಾಲೆಯ ಮುಖ್ಯೋ ಪಾಧ್ಯಾಯರಾದ ನಾಗರಾಜು ಸರ್ ಹಾಗೂ ಸಮಾಜ ವಿಜ್ಞಾನ ಶಿಕ್ಷಕರಾದ ಛಾಯಾಕುಮಾರಿ ಮೇಡಂ ಪ್ರೇರಣೆ ನೀಡಿದರು. ಗಾಂಧೀ ಅಭಿಯಾನದ ನಂತರ ನನಗೆ ಉತ್ತಮ ಜೀವನ ನಡೆಸುವ ಪ್ರೇರಣೆ ದೊರೆತಿದೆ. ಗಾಂಧಿಜಿ ಅವರ ನಿಸ್ವಾರ್ಥ ಬದುಕು ನನ್ನಲ್ಲಿ ಗುಣಾತ್ಮಕ ಬದಲಾವಣೆಗಳನ್ನು ಉಂಟುಮಾಡಿದೆ. ಅವರ ಜೀವನದ ತತ್ವ-ಆದರ್ಶಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಿದ್ದೇನೆ.

-ವರ್ಷಿಣಿ, ೧೦ನೇ ತರಗತಿ, ಸರ್ಕಾರಿ ಪ್ರೌಢಶಾಲೆ, ಉಮ್ಮಡಿಹಳ್ಳಿ, ಮಂಡ್ಯ ತಾಲ್ಲೂಕು

ಶಾಂತಿಯುತ ಜೀವನಕ್ಕೆ ಪ್ರೇರಣೆ ಮಹಾತ್ಮ ಗಾಂಧೀಜಿ ಕುರಿತು ಪ್ರಬಂಧ:  ಸ್ಪರ್ಧೆಯಲ್ಲಿ ಭಾಗವಹಿ ಸಲು ನನಗೆ ನಮ್ಮ ಶಾಲೆಯ ಚಾಂದಿನಿ ಮಿಸ್ ಸಲಹೆ ನೀಡಿದರು. ಗಾಂಧಿ ಅಧ್ಯಯನದ ನಂತರ ನನಗೆ ಶಾಂತಿಯುತ ಜೀವನ ನಡೆಸಬೇಕುಎಂಬ ಪ್ರೇರಣೆ ದೊರೆಯಿತು. ಅಹಿಂಸೆ, ಸತ್ಯ ನುಡಿಯುವುದು ಹಾಗೂ ಉತ್ತಮ ನಡವಳಿಕೆ ಮೈಗೂಡಿಸಿಕೊಳ್ಳುವ ಮನಸ್ಸು ಮಾಡಿದ್ದೇನೆ. ಇದಕ್ಕೆಲ್ಲ ನನಗೆ ಗಾಂಧಿಜಿ ಅವರೇ ಪ್ರೇರಣೆ. ಗಾಂಧಿ ಬಗ್ಗೆ ಬರೆಯುವ ಸಂದರ್ಭದಲ್ಲಿ ನನಗೆ ಒಂದು ರೀತಿಯ ರೋಮಾಂಚನಕಾರಿ ಅನುಭವವಾಯಿತು.

-ಸೂರ್ತಿ ಎಂ., ದೀನಬಂಧು ಶಾಲೆ, ಚಾಮರಾಜನಗರ

ದೇಶಕ್ಕೆ ಕೊಡುಗೆ ನೀಡಬೇಕು ಅನಿಸಿದೆ:  ನಮ್ಮ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಾದ ನಾಗಿನಿ ಮಿಸ್ ನನಗೆ ಪ್ರಬಂಧ ಬರೆಯಲು ಪ್ರೇರಣೆ ನೀಡಿದರು. ಗಾಂಧಿಜಿ ಅವರನ್ನು ಕುರಿತು ಅಧ್ಯಯನ ಮಾಡಿದ ನಂತರ ನನಗೆ ಆದರ್ಶ ಜೀವನ ನಡೆಸುವ ನಿರ್ಧಾರ ಮಾಡುವ ಮನಸ್ಸಾಗಿದೆ. ಅವರ ಜೀವನದ ತತ್ವ-ಆದರ್ಶಗಳನ್ನು ಮೈಗೂಡಿಸಿಕೊಂಡು ದೇಶಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು ಅನ್ನಿಸಿದೆ. ದೇಶ ನನಗೆ ಏನು ಕೊಟ್ಟಿತು ಎನ್ನುವುದಕ್ಕಿಂತ ನಾನು ದೇಶಕ್ಕೆ ಏನು ಕೊಡುಗೆ ನೀಡಿದ್ದೇನೆ ಎಂಬುದು ಪ್ರಮುಖವಾಗಬೇಕು.

-ಸ್ನೇಹ, ಜೆಎಸ್‌ಎಸ್ ಪ್ರೌಢಶಾಲೆ, ಡಾ. ರಾಜ್‌ಕುಮಾರ್ ರಸ್ತೆ, ಜೆಎಸ್‌ಎಸ್ ಬಡಾವಣೆ, ಮೈಸೂರು

ಭಾರತ ದರ್ಶನವಾದಂತಾಯಿತು:  ನಮ್ಮ ಶಾಲೆಯ ಕನ್ನಡ ಶಿಕ್ಷಕರಾದ ವಿ. ನೇತ್ರಾ ಅವರು ನನಗೆ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೇರಣೆ ನೀಡಿದರು. ಗಾಂಧಿ ಅಧ್ಯಯನದ ಬಳಿಕ ಜೀವನದಲ್ಲಿ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಅನ್ನಿಸಿತು. ಗಾಂಧೀಜಿ ಅವರ ಹಾಗೆ ಸತ್ಯವನ್ನೇ ಹೇಳಬೇಕು. ಅಹಿಂಸೆಯನ್ನು ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು. ದೇಶಸೇವೆ ಮಾಡಬೇಕು ಎಂದು ನನಗೆ ಅನಿಸಿತು. ಗಾಂಧಿ ಬಗ್ಗೆ ಬರೆಯುವ ಸಂದರ್ಭದಲ್ಲಿ ನನಗೆ ಇಡೀ ಭಾರತವನ್ನೇ ಒಮ್ಮೆ ದರ್ಶನ ಮಾಡಿದ ಅನುಭವವಾಯಿತು.

-ಬೃಂದಾ ಎಸ್., ಶ್ರೀ ಗೋಕುಲ ಶಾಲೆ, ಕುವೆಂಪು ನಗರ, ಮೈಸೂರು

ಸೇವಾ ಮನೋಭಾವನೆಗೆ ಗಾಂಧಿ ಪ್ರೇರಣೆ:  ನಮ್ಮ ಶಾಲೆಯ ಶಿಕ್ಷಕರಾದ ಪ್ರಜ್ವಲ್ ಮತ್ತು ಜ್ಯೋತಿ ಅವರು ನನಗೆ ಗಾಂಽಜಿ ಕುರಿತ ಪ್ರಬಂಧ ಬರೆಯಲು ಪ್ರೇರಣೆ ನೀಡಿದರು. ಗಾಂಧಿ ಅಧ್ಯಯನದ ಬಳಿಕ ನನಗೆ ಆದರ್ಶ ಜೀವನ ನಡೆಸಲು ಪ್ರೇರಣೆ ದೊರೆಯಿತು. ದೇಶ ಸೇವೆ ಮೈಗೂಡಿಸಿಕೊಳ್ಳಬೇಕು. ದೇಶದ ಬಡವರು, ದೀನ- ದಲಿತರ ಜೀವನದಲ್ಲಿ ಬದಲಾವಣೆ ತರಲು ಕೆಲಸ ಮಾಡಬೇಕು ಎಂಬ ಮನಸ್ಸಾಯಿತು. ಸೇವಾ ಮನೋಭಾವನೆ ಮೈಗೂಡಿಸಿಕೊಳ್ಳುವ ಮೂಲಕ ಜನರ ಬದುಕಿನಲ್ಲಿ ಬದಲಾವಣೆ ತರಲು ನನಗೆ ಪ್ರೇರಣೆ ಲಭಿಸಿದೆ.

-ಲಕ್ಷ್ಮೀ ಸನ್ನಿಧಿ ಆರ್., ನಟರಾಜ ಪಬ್ಲಿಕ್ ಶಾಲೆ, ಅಗ್ರಹಾರ, ಮೈಸೂರು

ಗಾಂಧಿಜಿ ಅವರೇ ಮಾದರಿ ವ್ಯಕ್ತಿ:  ನಮ್ಮ ಶಾಲೆಯ ಕನ್ನಡ ಶಿಕ್ಷಕರಾದ ಬಿ. ಆನಂದ್ ಅವರು ನನಗೆ ಗಾಂಧಿಜಿ ಕುರಿತ ಪ್ರಬಂಧ ಬರೆಯಲು ಪ್ರೇರಣೆ ನೀಡಿದರು. ಗಾಂಧಿ ಅಧ್ಯಯನದ ನಂತರ ನನಗೆ ಆದರ್ಶ ಜೀವನ ನಡೆಸಬೇಕು ಎಂಬ ಪ್ರೇರಣೆ ದೊರೆತಿದೆ. ಜೀವನದಲ್ಲಿ ಯಾವ ಸಂದರ್ಭದಲ್ಲಿಯೂ ಸುಳ್ಳು ಹೇಳಬಾರದು. ಅಹಿಂಸೆಯನ್ನು ತಪ್ಪದೇ ಆಚರಿಸಬೇಕು. ಒಳ್ಳೆಯ ದಾರಿಯಲ್ಲಿ ಜೀವನ ನಡೆಸಬೇಕು ಎಂದು ನನಗೆ ಅನಿಸಿದೆ. ಗಾಂಧಿ ಬಗ್ಗೆ ಬರೆಯುವ ಸಂದರ್ಭದಲ್ಲಿ ನನಗೆ ವಿಶಿಷ್ಟ ಅನುಭವವಾಯಿತು. ನನ್ನ ಜೀವನದಲ್ಲಿ ನನಗೆ ಗಾಂಧೀಜಿ ಅವರೇ ಮಾದರಿ ವ್ಯಕ್ತಿ.

-ವರುಣ್ ಸಿ.ವಿ., ಜೆಎಸ್‌ಎಸ್ ಪಬ್ಲಿಕ್ ಶಾಲೆ, ಶಿಕ್ಷಕರ ಬಡಾವಣೆ, ಮೈಸೂರು

Tags:
error: Content is protected !!