Mysore
28
light rain

Social Media

ಮಂಗಳವಾರ, 24 ನವೆಂಬರ್ 2026
Light
Dark

ಕೆಆರ್‌ಎಸ್‌ನಿಂದ ಹೆಚ್ಚಿದ ನೀರು ಬಿಡುಗಡೆ: ಕುಡಿಯುವ ನೀರಿನ ಕೊರತೆ ಆತಂಕದಲ್ಲಿ ರೈತರು!

KRS Dam

ಬೆಂಗಳೂರು: ಕೆಆರ್‌ಎಸ್‌ ಜಲಾಶಯದ ಒಳಹರಿವು ಕ್ಷೀಣಿಸಿರುವ ನಡುವೆಯೇ ಹೊರಹರಿವು ಹೆಚ್ಚಳವಾಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.

ತಮಿಳುನಾಡಿಗೆ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಹೊರಹರಿವನ್ನು 3,834ರಿಂದ 5,333 ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ. ಆದರೆ ಜಲಾಶಯಕ್ಕೆ ಹರಿದುಬರುತ್ತಿರುವ ನೀರು ಕೇವಲ 483 ಕ್ಯೂಸೆಕ್‌ ಎಂದು ವರದಿಯಾಗಿದೆ.

ಜಲಾಶಯದಲ್ಲಿ ಒಟ್ಟು 20.006 ಟಿಎಂಸಿ ನೀರಿದ್ದು, ಬಳಕೆಗೆ ಯೋಗ್ಯ ನೀರು ಸುಮಾರು 13 ಟಿಎಂಸಿ ಎಂದು ತಿಳಿಸಲಾಗಿದೆ.

ತಮಿಳುನಾಡಿಗೆ 15 ದಿನಗಳ ಕಾಲ ನಿತ್ಯ 2,000 ಕ್ಯೂಸೆಕ್‌ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚಿಸಿದೆ. ಈ ಕುರಿತು ನವೆಂಬರ್‌ 25ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದೆ.

ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಪೂರೈಕೆಗೆ ತೊಂದರೆಯಾಗಬಹುದೆಂಬ ಆತಂಕ ವ್ಯಕ್ತವಾಗಿದೆ.

Tags:
error: Content is protected !!