Mysore
28
light rain

Social Media

ಮಂಗಳವಾರ, 24 ನವೆಂಬರ್ 2026
Light
Dark

ಚಳಿಯ ನಡುವೆ ಮಳೆಯ ಮುನ್ಸೂಚನೆ: ಬೆಂಗಳೂರು ಸೇರಿ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ಬೆಂಗಳೂರು: ರಾಜ್ಯದಲ್ಲಿ ಮೈ ಕೊರೆವ ಚಳಿಯ ನಡುವೆ ಮಳೆಯ ಮುನ್ಸೂಚನೆಯೂ ಬಂದಿದೆ. ನವೆಂಬರ್‌ 24 ಮತ್ತು 25ರಂದು ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿರುವುದಾಗಿ ವರದಿಯಾಗಿದೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಬೆಂಗಳೂರು ದಕ್ಷಿಣ, ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ.

ಹೊರಗೆ ತೆರಳುವವರು ಮಳೆಯ ಸಿದ್ಧತೆಯೊಂದಿಗೆ ಪ್ರಯಾಣಿಸಿ, ಸ್ಥಳೀಯ ಹವಾಮಾನ ಇಲಾಖೆಯ ಮುಂದಿನ ಸೂಚನೆಗಳನ್ನು ಗಮನಿಸಿ.

Tags:
error: Content is protected !!