ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ವಿಶೇಷವಾಗಿ ಹಿರಿಯ ನಾಗರಿಕರು ಆನ್‌ಲೈನ್ ವಂಚನೆಗೆ ಒಳಗಾಗಿ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಳ್ಳುತ್ತಿರುವ ಸುದ್ದಿಗಳು ನೋವುಂಟುಮಾಡುತ್ತಿವೆ. ಮೊಬೈಲ್ ಆಪ್‌ಗಳು, ಅಪರಿಚಿತ ಕರೆಗಳು, ನಕಲಿ ಲಿಂಕ್‌ಗಳು, ಒಟಿಪಿ ವಂಚನೆ ಹಾಗೂ ಆನ್‌ಲೈನ್ ಸಾಲದ ಆಪ್‌ಗಳ ಕಿರುಕುಳದಿಂದ ಜನಸಾಮಾನ್ಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಆದ್ದರಿಂದ ಪೊಲೀಸ್ ಇಲಾಖೆ ಹಾಗೂ ಸೈಬರ್ ಕ್ರೈಂ ವಿಭಾಗದ ವತಿಯಿಂದ ಜನಸಾಮಾನ್ಯರಿಗೆ, ವಿಶೇಷವಾಗಿ ಹಿರಿಯ ನಾಗರಿಕರಿಗೆ ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸುವ ಜಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅತ್ಯಂತ ಅವಶ್ಯವಾಗಿದೆ. ಅಗತ್ಯ ಮುನ್ನೆಚ್ಚರಿಕೆಗಳ ಬಗ್ಗೆ ಸರಳವಾಗಿ ತಿಳಿಸಿಕೊಡಬೇಕು. ಸೈಬರ್ ವಂಚನೆಗೆ ಒಳಗಾದವರು ತಕ್ಷಣ ೧೯೩೦ ಸಹಾಯವಾಣಿಗೆ ಕರೆ ಮಾಡುವ ಬಗ್ಗೆಯೂ ಜಗೃತಿ ಮೂಡಿಸುವುದು ಅಗತ್ಯ.
-ಮಹದೇವ ಎಂ. ಕರಿಯನಪುರ, ಕೊಳ್ಳೇಗಾಲ ತಾ



