ನವದೆಹಲಿ: ನಿಮ್ಮ ಖಾಸಗಿ ಕಾರು ಅಥವಾ ಬೈಕ್ ಬಿಎಸ್-6 ಮಾದರಿಯದ್ದೇ? ಹಾಗಿದ್ದರೆ ಮಾಲಿನ್ಯ ತಪಾಸಣೆಯ ಅವಧಿಯಲ್ಲಿ ನಿಮಗೊಂದು ಸಿಹಿಸುದ್ದಿ ಇದೆ.
ವರದಿ ಪ್ರಕಾರ, ಮೊದಲ ನೋಂದಣಿಯಿಂದ ಆರು ವರ್ಷಗಳವರೆಗಿನ ಬಿಎಸ್-6 ಖಾಸಗಿ ಕಾರು ಮತ್ತು ಬೈಕ್‌ಗಳಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರದ ಅವಧಿಯನ್ನು ಮೂರು ವರ್ಷಕ್ಕೆ ವಿಸ್ತರಿಸಲಾಗಿದೆ. ಅಂದರೆ, ಅರ್ಹ ವಾಹನಗಳಿಗೆ ಮೂರು ವರ್ಷಕ್ಕೊಮ್ಮೆ ಮಾಲಿನ್ಯ ತಪಾಸಣೆ ಮಾಡಿಸಿದರೆ ಸಾಕು.
ವಾಹನದ ಮೊದಲ ನೋಂದಣಿ ದಿನಾಂಕ, ಬಿಎಸ್ ಮಾನದಂಡ ಮತ್ತು ಬಳಕೆಯ ಆಧಾರದಲ್ಲಿ ಅರ್ಹತೆ ನಿರ್ಧಾರವಾಗಲಿದೆ. ಹಳೆಯ ಹಾಗೂ ವಾಣಿಜ್ಯ ವಾಹನಗಳಿಗೆ ಈ ಸೌಲಭ್ಯ ಅನ್ವಯಿಸುವುದಿಲ್ಲ ಎಂದು ವರದಿ ತಿಳಿಸಿದೆ.




