Mysore
30
broken clouds

Social Media

ಗುರುವಾರ, 19 ನವೆಂಬರ್ 2026
Light
Dark

ಇಬ್ಬರ ಸಾವಿನ ಬಳಿಕ ಸಕಲೇಶಪುರದಲ್ಲಿ ಜೋಡಿ ಸಲಗಗಳ ಸೆರೆ, ಅರಣ್ಯ ಇಲಾಖೆ ಕಾರ್ಯಾಚರಣೆ ಯಶಸ್ವಿ

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಗುಡಿಬೆಟ್ಟ ಎಸ್ಟೇಟ್‌ನಲ್ಲಿ ಎರಡು ಕಾಡಾನೆಗಳನ್ನು ಅರಣ್ಯ ಇಲಾಖೆ ಸೆರೆಹಿಡಿದಿದೆ.

ನವೆಂಬರ್ 14ರಂದು ಬೇಲೂರು ತಾಲೂಕಿನ ಕುಶಾವರ ಬಳಿ ಕಾಡಾನೆ ದಾಳಿಗೆ ಜಯಮ್ಮ ಮೃತಪಟ್ಟಿದ್ದರು. ಎರಡು ದಿನಗಳ ಬಳಿಕ ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳುತ್ತಿದ್ದ ಹಫೀಜ್‌ ಕೂಡ ಕಾಡಾನೆ ದಾಳಿಗೆ ಬಲಿಯಾಗಿದ್ದರು. ಈ ಎರಡು ಘಟನೆಗಳ ಬಳಿಕ ಅರಣ್ಯ ಇಲಾಖೆ ಜೋಡಿ ಸಲಗಗಳ ಸೆರೆಗೆ ಕಾರ್ಯಾಚರಣೆ ಆರಂಭಿಸಿತ್ತು.

ಡ್ರೋನ್‌ ಕ್ಯಾಮರಾದಲ್ಲಿ ಜೊತೆಜೊತೆಯಾಗಿ ಓಡಾಡುತ್ತಿದ್ದ ಸಲಗಗಳು ಪತ್ತೆಯಾಗಿದ್ದವು. ಕ್ಯಾಪ್ಟನ್ ಪ್ರಶಾಂತ ನೇತೃತ್ವದ ಏಳು ಕುಮ್ಕಿ ಆನೆಗಳ ನೆರವಿನಿಂದ, ಎರಡೂ ಕಾಡಾನೆಗಳಿಗೆ ಅರಿವಳಿಕೆ ನೀಡಿ ನವೆಂಬರ್ 19ರಂದು ಸೆರೆಹಿಡಿಯಲಾಯಿತು.

ಹಾಸನ ಜಿಲ್ಲೆಯಲ್ಲಿ ಒಂದೇ ಕಾರ್ಯಾಚರಣೆಯಲ್ಲಿ ಎರಡು ಕಾಡಾನೆಗಳನ್ನು ಸೆರೆಹಿಡಿದಿರುವುದು ಇದೇ ಮೊದಲು ಎಂದು ವರದಿಯಾಗಿದೆ.

Tags:
error: Content is protected !!