Mysore
29
broken clouds

Social Media

ಬುಧವಾರ, 18 ನವೆಂಬರ್ 2026
Light
Dark

‘ಭಾರತ ಆರ್ಥಿಕ ವಿಪತ್ತಿನ ಅಂಚಿನಲ್ಲಿದೆ’ — ಅಮೆರಿಕದಲ್ಲಿ ರಾಹುಲ್‌ ಗಾಂಧಿ ಆರೋಪ

rahulgandhi

ನ್ಯೂಯಾರ್ಕ್‌: ಭಾರತ ಆರ್ಥಿಕ ವಿಪತ್ತಿನ ಅಂಚಿನಲ್ಲಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ನವೆಂಬರ್‌ 17ರಂದು ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಬೋಧಕರೊಂದಿಗೆ ನಡೆದ ಸಂವಾದದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ದೇಶದಲ್ಲಿ ನಿರುದ್ಯೋಗ ಗಂಭೀರ ಸಮಸ್ಯೆಯಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲೂ ಆಳವಾದ ಸಮಸ್ಯೆಗಳಿವೆ. ಉತ್ಪಾದನಾ ವಲಯ ದುರ್ಬಲಗೊಂಡಿದೆ ಎಂದು ರಾಹುಲ್‌ ಗಾಂಧಿ ಹೇಳಿದರು. ಭಾರತದ ಆರ್ಥಿಕ ಮಾದರಿ ಸುಮಾರು ಒಂದು ದಶಕದಿಂದ ಫಲ ನೀಡುತ್ತಿಲ್ಲ ಎಂದು ಅವರು ವಾದಿಸಿದರು.

‘ಮೇಕ್‌ ಇನ್‌ ಇಂಡಿಯಾ’ ಮತ್ತು ‘ಸ್ಟಾರ್ಟ್‌ಅಪ್‌ ಇಂಡಿಯಾ’ ಯೋಜನೆಗಳಿಂದ ಉತ್ಪಾದನಾ ವಲಯ ಚೇತರಿಕೆ ಕಂಡಿಲ್ಲ ಎಂದು ಟೀಕಿಸಿದ ಅವರು, ಇದೇ ಆರ್ಥಿಕ ಹಾದಿಯಲ್ಲಿ ಸಾಗಿದರೆ ದೇಶಕ್ಕೆ ಗಂಭೀರ ತೊಂದರೆ ಎದುರಾಗಬಹುದು ಎಂದು ಎಚ್ಚರಿಸಿದರು.

Tags:
error: Content is protected !!