ನಾಗರಹೊಳೆ: ರಸ್ತೆ ಬದಿಯಲ್ಲಿ ಕಾಡಾನೆ ಕಾಣುತ್ತಿದ್ದಂತೆ ಸ್ಕೂಟರ್ ನಿಲ್ಲಿಸಿದ ಇಬ್ಬರು ಸವಾರರಲ್ಲಿ ಓರ್ವ ಹಿಂಬದಿ ಸವಾರ ಕೆಳಗಿಳಿದು ಆನೆಯತ್ತ ಕಲ್ಲೆಸೆದಿದ್ದಾನೆ.
ಈ ಘಟನೆ ನಡೆದಿದ್ದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ. ಆನೆ ತಮ್ಮತ್ತ ಬರುತ್ತಿರುವಂತೆ ಕಂಡಾಗ ಇಬ್ಬರೂ ಸ್ಕೂಟರ್ನಲ್ಲಿ ಅಲ್ಲಿಂದ ತೆರಳಿದ್ದಾರೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
ಕೃತ್ಯವನ್ನು ಖಂಡಿಸಿದ ಸಚಿವ ರಾಮಲಿಂಗಾ ರೆಡ್ಡಿ, ಸ್ಕೂಟರ್ ಮತ್ತು ಇಬ್ಬರು ಸವಾರರನ್ನು ಪತ್ತೆಹಚ್ಚಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.




