ಬೆಂಗಳೂರಿನಿಂದ ಸುಮಾರು ೯೦ ಕಿ.ಮೀ. ದೂರದಲ್ಲಿರುವ ಕಾವೇರಿ ಮತ್ತು ಅರ್ಕಾವತಿ ಸಂಗಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ೯,೦೦೦ ಕೋಟಿ ರೂ. ವೆಚ್ಚದ ಮೇಕೆದಾಟು ಸಮತೋಲಿತ ಜಲಾಶಯ ಯೋಜನೆಯು ದಕ್ಷಿಣ ಕರ್ನಾಟಕದ ಭವಿಷ್ಯಕ್ಕೆ ಅತ್ಯಗತ್ಯವಾಗಿದೆ. ಬೆಂಗಳೂರು ಮಹಾ ನಗರಕ್ಕೆ ೪.೭೫ ಟಿಎಂಸಿ ಕುಡಿಯುವ ನೀರು ಒದಗಿಸುವ ಮತ್ತು ೪೦೦ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿ ಸುವ ಈ ಯೋಜನೆಯು ಮಳೆಗಾಲದಲ್ಲಿ ವ್ಯರ್ಥವಾಗಿ ಸಮುದ್ರ ಸೇರುವ ಹೆಚ್ಚುವರಿ ನೀರನ್ನು ಸಂಗ್ರಹಿಸುವ ಗುರಿ ಹೊಂದಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ತಮಿಳುನಾಡಿಗೆ ನಿಗದಿಯಾಗಿರುವ ೧೭೭ ಟಿಎಂಸಿ ನೀರನ್ನು ಹರಿಸಿದ ನಂತರವೂ ಈ ಯೋಜನೆ ಕರ್ನಾಟಕದ ಹಕ್ಕಾಗಿದೆ ಎಂಬುದು ಜನಜನಿತ.
ಆದರೆ ತಮಿಳುನಾಡಿನ ರಾಜಕೀಯ ವಿರೋಧ ಹಾಗೂ ಕಾವೇರಿ ವನ್ಯಜೀವಿ ಅಭಯಾರಣ್ಯದ ಮುಳುಗಡೆಗೆ ಸಂಬಂಽಸಿದಂತೆ ಕಾವೇರಿ ನೀರು ನಿರ್ವಹಣಾ ಪ್ರಾಽಕಾರ, ಕೇಂದ್ರ ಜಲ ಆಯೋಗ ಮತ್ತು ಪರಿಸರ ಸಚಿವಾಲಯದ ಅನುಮತಿಗಳು ಬಾಕಿ ಉಳಿದಿರುವುದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ಪರಿಸರಕ್ಕೆ ಧಕ್ಕೆಯಾಗದಂತೆ ಅರಣ್ಯೀಕರಣ ದಂತಹ ನವೀನ ಕ್ರಮಗಳನ್ನು ಕೈಗೊಂಡು, ಕಾನೂನು ತೊಡಕುಗಳನ್ನು ನಿವಾರಿಸಿ ಈ ಯೋಜನೆಯನ್ನು ಶೀಘ್ರವಾಗಿ ಜರಿಗೊಳಿಸಬೇಕಿದೆ.
-ಡಾ.ಎಚ್. ಕೆ.ವಿಜಯಕುಮಾರ್, ಬೆಂಗಳೂರು



