Mysore
27
broken clouds

Social Media

ಬುಧವಾರ, 18 ನವೆಂಬರ್ 2026
Light
Dark

ಓದುಗರ ಪತ್ರ: ಗ್ರಂಥಾಲಯ ಸಪ್ತಾಹ ಜ್ಞಾನದ ಹಬ್ಬವಾಗಲಿ

dgp murder case

ಪುಸ್ತಕವೆಂದರೆ ಕೇವಲ ಕಾಗದದ ಮೇಲಿನ ಅಕ್ಷರಗಳಲ್ಲ; ಅದು ಬದುಕಿಗೆ ಬೆಳಕು ನೀಡುವ eನದ ಜ್ಯೋತಿ. ಇಂತಹ ಪುಸ್ತಕಗಳ ಭಂಡಾರವಾಗಿರುವ ಗ್ರಂಥಾಲಯಗಳು ಪ್ರತಿಯೊಬ್ಬ ವಿದ್ಯಾರ್ಥಿಯ, ಓದುಗನ ಹಾಗೂ ಪುಸ್ತಕ ಪ್ರೇಮಿಯ ಬದುಕಿನಲ್ಲಿ ಮಹತ್ವದ ಸ್ಥಾನ ಹೊಂದಿವೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವತಿಯಿಂದ ನ.೧೪ ರಿಂದ ೨೦ರವರೆಗೆ ನಡೆಯುವ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವು ಎ ಜಿ ಹಾಗೂ ನಗರ ಕೇಂದ್ರ ಗ್ರಂಥಾಲಯಗಳಲ್ಲಿ ಸಂಭ್ರಮದಿಂದ ನಡೆಯಬೇಕು. ಪ್ರಬಂಧ, ನಾಟಕ, ಚಿತ್ರಕಲಾ ಸ್ಪರ್ಧೆ, ಪುಸ್ತಕ ಪರಿಚಯ ಸೇರಿದಂತೆ ಸಾಹಿತ್ಯಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು.

ಗ್ರಂಥಾಲಯದಲ್ಲಿ ಸೇವೆ ಸಲ್ಲಿಸುವ ಗ್ರಂಥಪಾಲಕರನ್ನು ಗೌರವಿಸುವುದರ ಜೊತೆಗೆ ಪುಸ್ತಕಗಳನ್ನು ಪ್ರೀತಿಸುವ, ನಿರಂತರವಾಗಿ ಓದುವ ಹವ್ಯಾಸ ಬೆಳೆಸಿಕೊಂಡಿರುವ ಓದುಗರಿಗೂ ಉತ್ತಮ ಓದುಗ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸಬೇಕು. ಒಂದು ವಾರವಾದರೂ ಗ್ರಂಥಾಲಯಗಳು ಹಬ್ಬದ ಮನೆಯಂತೆ ಕಂಗೊಳಿಸಬೇಕು. ಪುಸ್ತಕಗಳಿಂದ ದೂರವಾಗುತ್ತಿರುವ ಇಂದಿನ ಪೀಳಿಗೆಯನ್ನು ಮತ್ತೆ ಗ್ರಂಥಾಲಯಗಳತ್ತ ಕರೆತರುವ ಪವಿತ್ರ ಪ್ರಯತ್ನಕ್ಕೆ ಸರ್ಕಾರ ಮುಂದಾಗಲಿ. ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವು ಕೇವಲ ದಿನಾಚರಣೆಯಾಗಬಾರದು. ಪುಸ್ತಕ ಪ್ರೇಮಿಗಳ ಪಾಲಿಗೆ ಮರೆಯಲಾಗದ eನದ ಹಬ್ಬವಾಗಲಿ!

-ಮಹದೇವ ಎಂ. ಕರಿಯನಪುರ, ಕೊಳ್ಳೇಗಾಲ ತಾ.

 

 

Tags:
error: Content is protected !!