Mysore
27
broken clouds

Social Media

ಬುಧವಾರ, 18 ನವೆಂಬರ್ 2026
Light
Dark

ಓದುಗರ ಪತ್ರ: ಅಧಿಕಾರಿಗಳಿಗೆ ತಪಾಸಣಾ ಸ್ವಾತಂತ್ರ್ಯ ಇಲ್ಲವೇ?!

ಆಹಾರ ಮತ್ತು ಕಾನೂನು ಮಾಪನ ಶಾಸ ಇಲಾಖೆ ಅಧಿಕಾರಿಗಳು ರಾಜ್ಯದ ೯ ಎಪಿಎಂಸಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಸಚಿವ ರಿಜ್ವಾನ್ ಅರ್ಷದ್ ಸ್ವತಃ ಮೈಸೂರು ಎಪಿಎಂಸಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿ ‘ಬಿಸಿ’ ಮುಟ್ಟಿಸಿದ್ದಾರೆ.

ಅಕ್ಕಿ ಅಕ್ರಮ ದಾಸ್ತಾನು ಮಾಡದಂತೆ ಎಚ್ಚರಿಸಿದ್ದಾರೆ. ಆದರೆ ಜನರು ಹೆಚ್ಚಾಗಿ ಬಳಸುವ ಊಟದ ಅಕ್ಕಿ, ಅದರಲ್ಲೂ ಸೋನಾ ಮಸೂರಿನಲ್ಲಿ ಅಕ್ಕಿ ಬೆಲೆ ಕೆ.ಜಿ.ಗೆ ೧೨೬ ರೂ ಆಗಿದೆ. ಸಚಿವರು ಬೆಲೆ ಏರಿಕೆ ಬಗ್ಗೆ ಗಮನ ಹರಿಸಬೇಕು.ಇತ್ತೀಚೆಗೆ ಬಂಕ್‌ಗಳಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣದ ಬಗ್ಗೆಯೂ ಪರೀಕ್ಷೆ ಮಾಡಿಸಿ ಸಚಿವರು ವರದಿ ಮಾಡಿದ್ದರು. ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಔಷಧ ಸಗಟು ಮಾರಾಟ ಮಳಿಗೆ ಗಳಿಗೆ ಭೇಟಿ ನೀಡಿ ಔಷಧಿ ತಯಾರಿಕ ದರಕ್ಕೂ, ಮಾರಾಟ ದರಕ್ಕೂ ಅಜ -ಗಜ ವ್ಯತ್ಯಾಸವಿರುವುದನ್ನು ಪತ್ತೆ ಹಚ್ಚಿ, ಕೇಂದ್ರ ಸರ್ಕಾರಕ್ಕೆ ವರದಿ ಮಾಡಿದ ನಂತರ ಲಾಭವನ್ನು ಶೇ.೩೦ ಕ್ಕೆ ನಿಗದಿ ಪಡಿಸುವಂತೆ ಸೂಚಿಸಲಾಗಿದೆ. ಹಾಗೆಯೇ ಸಚಿವರು, ಹೋಟೆಲ, ಬೇಕರಿಗಳಿಗೆ ಭೇಟಿ ನೀಡಿ ಅಲ್ಲಿನ ಶುಚಿತ್ವ, ಎಣ್ಣೆ ಬಳಕೆ, ಬಗ್ಗೆ ವರದಿ ಮಾಡಿದ್ದರು. ಹೀಗೆ ಸಚಿವರೇ ಭೇಟಿ ನೀಡುವುದು, ಪರಿಶೀಲಿಸುವುದು, ದಾಳಿ ಮಾಡುವುದು ಆದರೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಎಪಿಎಂಸಿಯಲ್ಲಿ ೧೨ ತೂಕದ ಯಂತ್ರಗಳು ತೂಕದಲ್ಲಿ ವ್ಯತ್ಯಾಸ ತೋರಿಸುತ್ತಿದ್ದುದನ್ನು ಇಲಾಖೆಯ ಅಧಿಕಾರಿಗಳು ಈವರೆವಿಗೂ ಏಕೆ ಪರಿಶೀಲನೆ ಮಾಡಿರಲಿಲ್ಲ? ಸಚಿವರು ಸಂಬಂಧಪಟ್ಟ ಅಧಿಕಾರಿ,ನೌಕರನ್ನು ಅಮಾನತ್ತುಪಡಿಸಿ ವಿಚಾರಣೆಗೆ ಗುರಿಪಡಿಸಲಿ. ಇಲ್ಲದಿದ್ದರೆ ವ್ಯವಸ್ಥೆ ಹಾಗೆಯೇ ಮುಂದುವರಿಯಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ.

-ಮುಳ್ಳೂರು ಪ್ರಕಾಶ್, ಮೈಸೂರು

 

 

Tags:
error: Content is protected !!