Mysore
28
scattered clouds

Social Media

ಸೋಮವಾರ, 16 ನವೆಂಬರ್ 2026
Light
Dark

ಸ್ಪೀಡ್‌ ಬೋಟ್‌ ದುರಂತ: ಹಾರಂಗಿಯಲ್ಲಿ ಜಲಕ್ರೀಡೆಗೆ ತಾತ್ಕಾಲಿಕ ಬ್ರೇಕ್‌!

ಕೊಡಗು: ಗುಜರಾತ್‌ ಮೂಲದ ದಂಪತಿಯನ್ನು ಬಲಿ ಪಡೆದ ಸ್ಪೀಡ್‌ ಬೋಟ್‌ ದುರಂತದ ಬೆನ್ನಲ್ಲೇ, ಕೊಡಗಿನ ಹಾರಂಗಿ ಹಿನ್ನೀರಿನಲ್ಲಿ ಜಲಸಾಹಸ ಕ್ರೀಡೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಮುಂದಿನ ಆದೇಶದವರೆಗೆ ಯಾವುದೇ ಜಲಕ್ರೀಡೆ ನಡೆಸದಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ನವೆಂಬರ್‌ 13ರಂದು ಸ್ಪೀಡ್‌ ಬೋಟ್‌ ಮಗುಚಿ ದಂಪತಿ ಮೃತಪಟ್ಟಿದ್ದರು. ತಿರುವಿನಲ್ಲಿ ಸಾಗುವಾಗ ನಿಯಂತ್ರಣ ತಪ್ಪಿ ಬೋಟ್‌ ಮಗುಚಿದೆ ಎಂದು ಕಂಪನಿಯ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ. ಬೋಟ್‌ ಅಡಿಯಲ್ಲಿ ಸಿಲುಕಿದ್ದ ದಂಪತಿಯನ್ನು ರಕ್ಷಿಸುವ ಪ್ರಯತ್ನ ಫಲಿಸಲಿಲ್ಲ.

ಅಪಘಾತದ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಘಟನೆ ಕುರಿತು ಸಮಗ್ರ ತನಿಖೆ ನಡೆಸಿ, ಕಾರಣ ಪತ್ತೆಹಚ್ಚುವ ಭರವಸೆಯನ್ನು ಶಾಸಕ ಡಾ. ಮಂತರ್‌ ಗೌಡ ನೀಡಿದ್ದಾರೆ.

Tags:
error: Content is protected !!