Mysore
29
scattered clouds

Social Media

ಮಂಗಳವಾರ, 10 ನವೆಂಬರ್ 2026
Light
Dark

ಓದುಗರ ಪತ್ರ: ಮೈಸೂರಿಗೆ ಮತ್ತೊಂದು ಪ್ರಶಸ್ತಿಯ ಗರಿ

dgp murder case

೨೦೨೫-೨೬ ರ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಕೊಡಮಾಡುವ ಸ್ವಚ್ಛ ಸರ್ವೇಕ್ಷಣ್ ರಾಷ್ಟ್ರೀಯ ಪ್ರಶಸ್ತಿಗೆ ಮೈಸೂರು ಭಾಜನವಾಗಿರುವುದು ಶ್ಲಾಘನೀಯ.

ಈ ಪ್ರಶಸ್ತಿಯನ್ನು ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರ ಉಪಸ್ಥಿತಿಯಲ್ಲಿ ಸ್ವೀಕರಿಸಲು ಅಧಿಕೃತ ಆಹ್ವಾನ ಬಂದಿದ್ದು, ಮೈಸೂರಿನ ಸ್ವಚ್ಛತೆಯ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ಸಂಸದ ಯದುವೀರ್ ಚಾಮರಾಜ ಒಡೆಯರ್ ತಿಳಿಸಿ,ಸ್ವಚ್ಛತೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರನ್ನು ಅಭಿನಂದಿಸಿರುವುದು ಒಳ್ಳೆಯದು. ನಗರದ ಸ್ವಚ್ಛತೆ ಕಾಪಾಡುವಲ್ಲಿ ಕೈಜೋಡಿಸಿರುವ ಪೌರಕಾರ್ಮಿಕರು, ಸಂಘ – ಸಂಸ್ಥೆಗಳು, ಸಾರ್ವಜನಿಕರು ಹಾಗೂ ಈ ಸ್ವಚ್ಛತಾ ಅಭಿಯಾನದಲ್ಲಿ ಭಾಗಿದಾರರಾದ ಪ್ರತಿಯೊಬ್ಬರಿಗೂ ಮಹಾನಗರ ಪಾಲಿಕೆ ಕೃತಜ್ಞತೆ ಸಲ್ಲಿಸುತ್ತದೆ ಎಂದು ಆಯುಕ್ತೆ ಎಂ. ಕೆ. ಸವಿತಾ ಅವರು ಹೇಳಿರುವುದು ಒಪ್ಪತಕ್ಕದ್ದೇ ಆಗಿದೆ.

– ಬೆಸಗರಹಳ್ಳಿ ರವಿಪ್ರಸಾದ್ , ಮೈಸೂರು

Tags:
error: Content is protected !!