Mysore
29
scattered clouds

Social Media

ಮಂಗಳವಾರ, 10 ನವೆಂಬರ್ 2026
Light
Dark

ಓದುಗರ ಪತ್ರ: ಆರೋಪಗಳ ಸುರಿಮಳೆಯೇ ರಾಜಕಾರಣಿಗಳ ಆದ್ಯತೆಯೇ?

ಸದಾಶಿವನಿಗೆ ಅದೇ ಧ್ಯಾನ ಅನ್ನುವ ಹಾಗೆ ಕೆಲವು ರಾಜಕಾರಣಿಗಳು ವರ್ತಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಇತ್ತೀಚೆಗೆ ಹಾಸನಾಂಬೆ ದರ್ಶನ ಪಡೆಯಲು ಹಾಸನಕ್ಕೆ ಭೇಟಿ ನೀಡಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಹಾಸನದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಸನಾಂಬೆ ದರ್ಶನ ಮಾಡಿದ ನಂತರ ದೇವರು, ಧರ್ಮ, ಸಾಮಾಜಿಕ ಕಳಕಳಿಯ ಮಾತುಗಳನ್ನಾಡಿದ್ದರೆ ಚೆನ್ನಾಗಿತ್ತು. ಈ ರೀತಿಯ ಆರೋಪಗಳನ್ನು ಮಾಡುವುದಕ್ಕೆ ಬೇರೆ ಸಮಯವಿದೆ. ಈ ಧಾರ್ಮಿಕ ಸೂಕ್ಷ್ಮವನ್ನು ರಾಜಕಾರಣಿಗಳು ಅರಿತುಕೊಳ್ಳಬೇಕು.

ಕೆ.ವಿ.ವಾಸು, ಮೈಸೂರು

Tags:
error: Content is protected !!