ಕರ್ನಾಟಕ ಸರ್ಕಾರ ಇತ್ತೀಚೆಗೆ ಎರಡು ದರಗಳನ್ನು ಹೆಚ್ಚಿಸುವ ಮೂಲಕ ಜನರ ಮೇಲೆ ಹೆಚ್ಚಿನ ಹೊರೆ ಹೊರಿಸಿದೆ. ಒಂದು- ಹಾಲಿನ ದರ ಲೀಟರ್ಗೆ ಎಂಟು ರೂಪಾಯಿ ಏರಿಕೆ. ಜೊತೆಯ ಮೊಸರು, ಬೆಣ್ಣೆ, ತುಪ್ಪದ ದರ ಏರಿಕೆ. ಎರಡು- ಬಿಎಂಟಿಸಿ ವ್ಯಾಪ್ತಿಯಲ್ಲಿ ಶೇ.೩೫, ಉಳಿದ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಶೇ.೨೩ರಷ್ಟು ಬಸ್ ಪ್ರಯಾಣ ದರವನ್ನು ಹೆಚ್ಚಿಸಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿದೆ.
ಸರ್ಕಾರ ದಿಢೀರ್ ಎಂದು ಒಂದೇ ಬಾರಿಗೆ ಈ ಪ್ರಮಾಣದಲ್ಲಿ ದರ ಏರಿಸಿದ್ದು ಸರಿಯಲ್ಲ. ಈ ದರ ಏರಿಕೆ ಪರಿಣಾಮ ಸಹಜವಾಗಿ ಇತರ ಉತ್ಪನ್ನ, ಸೇವೆಗಳ ಮೇಲೆಯೂ ಬಿದ್ದಿದೆ. ಈಗಾಗಲೇ ಹೋಟೆಲ್ಗಳಲ್ಲಿ ಚಹ, ಕಾಫಿ ದರಗಳು ಹೆಚ್ಚಾಗಿವೆ. ಹಾಲಿನ ದರ ಏರಿಕೆಯನ್ನು ನೆಪವಾಗಿಟ್ಟುಕೊಂಡು ಕಾಫಿ, ಚಹ ಬೆಲೆಯನ್ನು ಕೆಲವು ಕಡೆ ಯದ್ವಾತದ್ವಾ ಏರಿಸಿರುವ ಉದಾಹರಣೆಗಳೂ ಇವೆ. ಇದಕ್ಕೆ ಕಡಿವಾಣ ಹಾಕಬೇಕು. ದರ ಏರಿಕೆಯನ್ನು ವಿರೋಧಿಸಿ ಜನರು ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯ ಸರ್ಕಾರದ ಖಜನೆ ಸೊರಗಿದೆ. ಕೆಎಸ್ಆರ್ಟಿಸಿ ಮೇಲೆ ಆರ್ಥಿಕ ಹೊರೆ ಬಿದ್ದಿದೆ. ಹೈನುಗಾರಿಕೆಯಲ್ಲಿ ಗೋವಿನ ಆಹಾರ ಸಾಮಗ್ರಿಗಳ ದರ ಏರಿಕೆಯಾಗಿದೆ. ಹೀಗಾಗಿ ಬೆಲೆ ಏರಿಕೆ ಅನಿವಾರ್ಯ ಎಂಬುದು ರಾಜ್ಯ ಸರ್ಕಾರದ ವಾದ. ಬೆಲೆ ಏರಿಕೆಗೆ ಸರ್ಕಾರದ ಬಳಿ ನೂರಾರು ಕಾರಣಗಳಿರುತ್ತವೆ. ಆದರೆ, ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳಬೇಕು. ಆಗ ಇಂತಹ ಅನೇಕ ಕಾರಣಗಳು ಇಲ್ಲವಾಗುತ್ತವೆ.
ಅಗತ್ಯ ವಸ್ತುಗಳು, ಸೇವೆಗಳು ಕೈಗೆಟಕುವಂತಿರಬೇಕು. ಜನ ಸಾಮಾನ್ಯರ ಜೀವನ ವೆಚ್ಚ ಇಳಿಮುಖವಾಗಬೇಕು. ಅದು ಬಿಟ್ಟು ಸರ್ಕಾರದ ಮೇಲಿನ ಆರ್ಥಿಕ ಹೊರೆಯನ್ನು ಜನರ ಮೇಲೆ ವರ್ಗಾಯಿಸುವುದು ಸರಿಯಲ್ಲ. ಪರ್ಯಾಯ ಮಾರ್ಗಗಳನ್ನು ಹುಡುಕಬೇಕು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸದ ಮೇಲೆ ಹೊರೆ ಬಿದ್ದಿರುವುದು ಎಲ್ಲರಿಗೂಗೊತ್ತಿರುವ ಸಂಗತಿ. ಮಹಿಳೆಯರಿಗೆ ಬಸ್ ಪ್ರಯಾಣ ಉಚಿತವಾಗಿದೆ. ಆದರೆ, ಇದರ ಹೊರೆಯನ್ನು ಪುರುಷರಿಂದ ತುಂಬಿಸಿಕೊಳ್ಳಲು ಪ್ರಯಾಣ ದರವನ್ನು ದುಪ್ಪಟ್ಟು ಮಾಡಿದರೆ ಹೇಗೆ? ಗ್ಯಾರಂಟಿ ಯೋಜನೆಗಳಲ್ಲಿ ಒಂದು ಕಡೆ ಉಚಿತವಾಗಿ ನೀಡಿ ಮತ್ತೊಂದು ಮೂಲದಿಂದ ಇದನ್ನು ವಸೂಲಿ ಮಾಡುವ ಬಗೆ ಸರಿಯೇ? ಹೀಗಾ ದಾಗ, ಸರ್ಕಾರ ಉಚಿತವಾಗಿ ಎಲ್ಲಿ ಕೊಟ್ಟಂತಾಯಿತು? ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಇನ್ನೂ ಹೊರೆ ಜಸ್ತಿಯಾದಂತಾಗುತ್ತದೆ.
ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಜನರು ಸಮೂಹ ಸಾರಿಗೆಯನ್ನು ಬಳಸಬೇಕು ಎಂದು ಒಂದು ಕಡೆ ಹೇಳುತ್ತಾರೆ. ಮತ್ತೊಂದು ಕಡೆ ಸಮೂಹ ಸಾರಿಗೆ ಪ್ರಯಾಣ ದರವನ್ನು ಏರಿಸಲಾಗುತ್ತದೆ. ಇದು ಯಾವ ನ್ಯಾಯ?
ಬೆಂಗಳೂರಿನಲ್ಲಿ ಕೆಲವು ಕಡೆ ಮೆಟ್ರೋ ರೈಲು ಪ್ರಯಾಣ ದರಕ್ಕಿಂತ ಸಾರಿಗೆ ಬಸ್ ಪ್ರಯಾಣ ದರವೇ ಹೆಚ್ಚಾಗಿದೆ. ಬೆಲೆಗಳು ಈಗ ಗಗನಕ್ಕೇರುತ್ತಿವೆ. ಈ ಏರಿಕೆಗೆ ತಕ್ಕಂತೆ ವರಮಾನ ಹೆಚ್ಚುತ್ತಿಲ್ಲ. ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಶಿಫಾರಸು ಮಾಡಲು ವೇತನ ಆಯೋಗವಿದೆ. ಆದರೆ, ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರ ವೇತನ ಹೀಗೆ ಹೆಚ್ಚಳ ಆಗುವುದಿಲ್ಲ.
ದರಗಳ ಏರಿಕೆಯಿಂದ ಬಡ ಹಾಗೂ ಮಧ್ಯಮ ವರ್ಗದವರ ಬದುಕು ಕಷ್ಟವಾಗಿದೆ. ಬಡವರು ಈಗಾಗಲೇ ಶಿಕ್ಷಣ, ಆರೋಗ್ಯ, ಆಹಾರ ಸಾಮಗ್ರಿಗಳ ದುಬಾರಿ ವೆಚ್ಚದಿಂದಾಗಿ ಹೈರಾಣಾಗಿzರೆ. ಯಾವುದೇ ಬೆಲೆಗಳು ಏರಿದಾಗಲೂ ಮೊದಲು ಸಂಕಷ್ಟಕ್ಕೀಡಾಗುವುದು ಬಡವರು ಹಾಗೂ ಮಧ್ಯಮವರ್ಗದವರು. ಸರ್ಕಾರ ಬೆಲೆ ಏರಿಸುವ ಮುನ್ನ ಹತ್ತು ಹಲವು ಬಾರಿ ಯೋಚಿಸಬೇಕು. ತನ್ನ ಖಜನೆಗೆ ಹೊರಬಿತ್ತೆಂದು ಇದನ್ನು ಜನರ ಮೇಲೆ ಹೊರಿಸುವುದು ಸಮರ್ಥನೀಯವಾಗುವುದಿಲ್ಲ
” ರಾಜ್ಯ ಸರ್ಕಾರದ ಖಜನೆ ಸೊರಗಿದೆ. ಕೆಎಸ್ಆರ್ಟಿಸಿ ಮೇಲೆ ಆರ್ಥಿಕ ಹೊರೆ ಬಿದ್ದಿದೆ. ಹೈನುಗಾರಿಕೆಯಲ್ಲಿ ಗೋವಿನ ಆಹಾರ ಸಾಮಗ್ರಿಗಳ ದರ ಏರಿಕೆಯಾಗಿದೆ. ಹೀಗಾಗಿ, ಬೆಲೆ ಏರಿಕೆ ಅನಿವಾರ್ಯ ಎಂಬುದು ರಾಜ್ಯ ಸರ್ಕಾರದವಾದ. ಬೆಲೆ ಏರಿಕೆಗೆ ಸರ್ಕಾರದ ಬಳಿ ನೂರಾರು ಕಾರಣಗಳಿರುತ್ತವೆ. ಆದರೆ, ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳಬೇಕು. ಆಗ ಇಂತಹ ಅನೇಕ ಕಾರಣಗಳು ಇಲ್ಲವಾಗುತ್ತವೆ. ಅಗತ್ಯ ವಸ್ತುಗಳು, ಸೇವೆಗಳು ಕೈಗೆಟಕುವಂತಿರಬೇಕು. ಜನಸಾಮಾನ್ಯರ ಜೀವನ ವೆಚ್ಚ ಇಳಿಮುಖವಾಗಬೇಕು. ಅದು ಬಿಟ್ಟು ಸರ್ಕಾರದ ಮೇಲಿನ ಆರ್ಥಿಕ ಹೊರೆಯನ್ನು ಜನರ ಮೇಲೆ ವರ್ಗಾಯಿಸುವುದು ಸರಿಯಲ್ಲ. ಪರ್ಯಾಯ ಮಾರ್ಗಗಳನ್ನು ಹುಡುಕಬೇಕು.”




