Mysore
25
moderate rain

Social Media

ಶುಕ್ರವಾರ, 06 ನವೆಂಬರ್ 2026
Light
Dark

ಎಲ್ ನಿನೊ ಬಿಸಿ ಅಡುಗೆ ಮನೆಗೂ ತಟ್ಟುತ್ತಾ? ಅಕ್ಕಿ, ಬೇಳೆ, ಎಣ್ಣೆ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ

karnataka weather report

ಬೆಂಗಳೂರು: ಮುಂಗಾರು ಮಳೆ ಕೈಕೊಟ್ಟರೆ, ಅದರ ಪರಿಣಾಮ ನಮ್ಮ ಅಡುಗೆ ಮನೆಯ ಬಜೆಟ್‌ ಮೇಲೂ ಬೀಳುತ್ತಾ? ಎಲ್ ನಿನೊ ಪ್ರಭಾವದಿಂದ ಈ ಬಾರಿ ಮಳೆ ಕೊರತೆಯಾಗಿದ್ದು, ಭತ್ತ, ಸೋಯಾಬೀನ್ ಮತ್ತು ಶೇಂಗಾದಂತಹ ಪ್ರಮುಖ ಬೆಳೆಗಳ ಬಿತ್ತನೆ ವಿಸ್ತೀರ್ಣ ಕುಸಿದಿದೆ ಎಂದು ಕೃಷಿ ವರದಿಗಳು ತಿಳಿಸಿವೆ.

ಮಳೆಯ ಕೊರತೆಯಿಂದ ಕೆಲವು ರೈತರು ಕಡಿಮೆ ನೀರು ಬೇಕಾಗುವ ತೊಗರಿ, ಉದ್ದು ಮತ್ತು ಹೆಸರು ಕಾಳಿನಂತಹ ಬೆಳೆಗಳತ್ತ ಮುಖ ಮಾಡಿದ್ದಾರೆ. ಇದೇ ವೇಳೆ, ನೀರಿನ ಕೊರತೆ ಮುಂದುವರಿದರೆ ಹಿಂಗಾರಿನ ಗೋಧಿ, ಸಾಸಿವೆ ಮತ್ತು ಕಡಲೆ ಬಿತ್ತನೆಗೂ ಹೊಡೆತ ಬೀಳುವ ಸಾಧ್ಯತೆಯಿದೆ.

ಭತ್ತದ ಉತ್ಪಾದನೆ ಕುಸಿದರೆ ಅಕ್ಕಿ ಪೂರೈಕೆ ಮೇಲೆ ಒತ್ತಡ ಬೀಳಬಹುದು. ಸೋಯಾಬೀನ್ ಮತ್ತು ಶೇಂಗಾ ಫಸಲು ಕಡಿಮೆಯಾದರೆ ಅಡುಗೆ ಎಣ್ಣೆ ಬೆಲೆಯ ಮೇಲೂ ಪರಿಣಾಮ ಬೀರಬಹುದು. ಅಕ್ಕಿ, ಬೇಳೆ ಮತ್ತು ಎಣ್ಣೆ ಎಷ್ಟು ದುಬಾರಿಯಾಗಬಹುದು ಎಂಬುದು ಅಂತಿಮ ಇಳುವರಿ ಮತ್ತು ಮಾರುಕಟ್ಟೆಗೆ ಬರುವ ಪೂರೈಕೆಯನ್ನು ಅವಲಂಬಿಸಿದೆ.

Tags:
error: Content is protected !!