Mysore
25
moderate rain

Social Media

ಶುಕ್ರವಾರ, 06 ನವೆಂಬರ್ 2026
Light
Dark

ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಪ್ರತಾಪ್ ಗೌಡ ಸಾವು | ಬೆನ್ನಲ್ಲೇ ತಂದೆ ನಿಂಗರಾಜು ನಿಧನ

ಹಾಸನ: ಉತ್ತರಾಖಂಡದ ಹೆಲಿಕಾಪ್ಟರ್ ದುರಂತದಲ್ಲಿ ಉದ್ಯಮಿ ಪ್ರತಾಪ್ ಗೌಡ ಮೃತಪಟ್ಟ ಬೆನ್ನಲ್ಲೇ, ಅವರ ತಂದೆ ನಿಂಗರಾಜು ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 84 ವರ್ಷದ ನಿಂಗರಾಜು ಅವರು ನವೆಂಬರ್ 5ರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಹಾಸನ ತಾಲೂಕಿನ ಜೋಡಿ ಕೃಷ್ಣಾಪುರದಲ್ಲಿ ಟೈಲರ್ ಆಗಿ ವೃತ್ತಿ ಜೀವನ ಆರಂಭಿಸಿದ್ದ ನಿಂಗರಾಜು, ಬಳಿಕ ಸಕಲೇಶಪುರ ತಾಲೂಕಿನ ಬಾಚಿಹಳ್ಳಿ ಗ್ರಾಮದಲ್ಲಿ ನೆಲೆಸಿದ್ದರು. ಅವರ ಪುತ್ರ ಪ್ರತಾಪ್ ಗೌಡ ಉದ್ಯೋಗ ಅರಸಿ ಬೆಂಗಳೂರಿಗೆ ಬಂದು, ಗುತ್ತಿಗೆದಾರರಾಗಿ ಹಾಗೂ ಉದ್ಯಮಿಯಾಗಿ ಬೆಳೆದಿದ್ದರು.

ಇತ್ತೀಚೆಗೆ ಉತ್ತರಾಖಂಡದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಪ್ರತಾಪ್ ಗೌಡ ಮೃತಪಟ್ಟಿದ್ದರು. ಇದೀಗ ಅವರ ತಂದೆ ನಿಂಗರಾಜು ಅವರ ಅಂತ್ಯಕ್ರಿಯೆ ಇಂದು, ನವೆಂಬರ್ 6ರಂದು, ಬಾಚಿಹಳ್ಳಿ ಗ್ರಾಮದಲ್ಲಿ ನೆರವೇರಲಿದೆ ಎಂದು ವರದಿಯಾಗಿದೆ.

Tags:
error: Content is protected !!