ಬೆಂಗಳೂರು: “ಗಾಳಿ, ನೀರಿನಲ್ಲಿ ಬಸ್ ಓಡಿಸೋಕೆ ಆಗಲ್ಲ!” ಎಂದು ಹೇಳುವ ಮೂಲಕ ಬಸ್ ಟಿಕೆಟ್ ದರ ಏರಿಕೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಸ್ಗಳನ್ನು ಓಡಿಸಲು ಇಂಧನ ಬೇಕು. ಕೇಂದ್ರ ಸರ್ಕಾರ ಮೊದಲು ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಲಿ ಎಂದು ಆಗ್ರಹಿಸಿದರು.
ರಷ್ಯಾದಿಂದ ಕಡಿಮೆ ದರದಲ್ಲಿ ಕಚ್ಚಾ ತೈಲ ಖರೀದಿಸುತ್ತಿದ್ದರೂ, ಅದರ ಲಾಭವನ್ನು ಜನರಿಗೆ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.
ಬಸ್ ದರ ಏರಿಕೆ ವಿರುದ್ಧ ಪ್ರತಿಭಟಿಸುತ್ತಿರುವ ಬಿಜೆಪಿ ನಾಯಕರು, ಪ್ರಧಾನಿ ಮೋದಿ ಮುಂದೆ ಹೋಗಿ ಇಂಧನ ಬೆಲೆ ಇಳಿಸುವಂತೆ ಒತ್ತಾಯಿಸಲಿ. ಇಂಧನ ದರ ಕಡಿಮೆಯಾದರೆ ಬಸ್ ದರವೂ ಕಡಿಮೆಯಾಗುತ್ತದೆ ಎಂದು ಹೇಳಿದರು.
ಮೆಟ್ರೋ ಮತ್ತು ಬಸ್ ದರ ಏರಿಕೆ ಕಾರಣವಿಲ್ಲದೆ ಆಗುವುದಿಲ್ಲ ಎಂದ ಖರ್ಗೆ, ಅಡುಗೆ ಎಣ್ಣೆ ಹಾಗೂ ಕಾಳುಗಳ ಬೆಲೆ ಹೆಚ್ಚಾದಾಗ ಬಿಜೆಪಿ ಏಕೆ ಪ್ರತಿಭಟಿಸಲಿಲ್ಲ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು.




