Mysore
28
light rain

Social Media

ಸೋಮವಾರ, 02 ನವೆಂಬರ್ 2026
Light
Dark

ನೇಪಾಳದಲ್ಲಿ ಭಾರೀ ಹಿಮಪಾತ: ಸಂಕಷ್ಟದಲ್ಲಿ ಆರು ಮಂದಿ ಭಾರತೀಯರು

ಕಠ್ಮಂಡು: ನೇಪಾಳದಲ್ಲಿ ಭಾರೀ ಹಿಮಪಾತದಿಂದಾಗಿ ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಭಾರತೀಯ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರಲು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ.

ಡೋಲ್ಪಾ ಜಿಲ್ಲೆಯ ಶೇ–ಫೋಕ್ಸುಂಡೋ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಧೋ ಪ್ರದೇಶಕ್ಕೆ ತೆರಳಿದ್ದ ಪ್ರವಾಸಿಗರು, ಭಾರೀ ಹಿಮಪಾತದಿಂದಾಗಿ ಅಲ್ಲಿಂದ ಹೊರಬರಲು ಸಾಧ್ಯವಾಗದೆ ಸಿಲುಕಿಕೊಂಡಿದ್ದಾರೆ.

ಪ್ರವಾಸಿಗರು ಇರುವ ಸ್ಥಳವನ್ನು ಈಗಾಗಲೇ ಪತ್ತೆಹಚ್ಚಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ಸೇನೆಯ ಹೆಲಿಕಾಪ್ಟರ್‌ ನೆರವು ಪಡೆಯಲಾಗುತ್ತಿದೆ ಎಂದು ಡೋಲ್ಪಾ ಜಿಲ್ಲೆಯ ಮುಖ್ಯ ಜಿಲ್ಲಾ ಅಧಿಕಾರಿ ಜುನೂ ಧಕಾಲ್‌ ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಭದ್ರತಾ ಸಿಬ್ಬಂದಿ ಹಾಗೂ ನೇಪಾಳಿ ಮಾರ್ಗದರ್ಶಿ ನೀಡಿದ್ದ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಪ್ರವಾಸಿಗರು ಮುಂದೆ ಸಾಗಿದ್ದರು ಎನ್ನಲಾಗಿದೆ. ಭಾರೀ ಹಿಮಪಾತದ ನಡುವೆಯೂ ಮಾರ್ಗದರ್ಶಿಯನ್ನು ಬಿಟ್ಟು ಶೇ–ಫೋಕ್ಸುಂಡೋ ಸರೋವರದ ಕಡೆಗೆ ತೆರಳಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಆರು ಮಂದಿಯನ್ನೂ ಸುರಕ್ಷಿತವಾಗಿ ಕರೆತರಲು ಪ್ರಯತ್ನ ನಡೆಯುತ್ತಿದೆ ಎಂ ಮಾಹಿತಿ ಲಭ್ಯವಾಗಿದೆ.

 

Tags:
error: Content is protected !!