Mysore
21
overcast clouds

Social Media

ಶುಕ್ರವಾರ, 30 ಅಕ್ಟೋಬರ್ 2026
Light
Dark

ಹಾಲಿನ ದರ ಏರಿಕೆ ಬೆನ್ನಲ್ಲೇ ಬಸ್‌ ಪ್ರಯಾಣವೂ ದುಬಾರಿಯಾಗುತ್ತಾ?

big shocking for ksrtc transport unions

ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯದಲ್ಲಿ ಸರ್ಕಾರಿ ಬಸ್‌ ಟಿಕೆಟ್‌ ದರವೂ ಹೆಚ್ಚಾಗುವ ಸಾಧ್ಯತೆ ಎದುರಾಗಿದೆ.

ಅಕ್ಟೋಬರ್‌ 29ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬಸ್‌ ಪ್ರಯಾಣ ದರ ಪರಿಷ್ಕರಣೆ ಕುರಿತು ಚರ್ಚಿಸಲಾಗಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್‌ ತಿಳಿಸಿದ್ದಾರೆ. ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಜವಾಬ್ದಾರಿಯನ್ನು ಸಾರಿಗೆ ಇಲಾಖೆಗೆ ವಹಿಸಲಾಗಿದೆ ಎಂದಿದ್ದಾರೆ.

ನವೆಂಬರ್‌ 3ರಂದು ನಾಲ್ಕೂ ಸಾರಿಗೆ ನಿಗಮಗಳ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ನವೆಂಬರ್‌ 4ರಂದು ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಸಚಿವರು ಮಾಹಿತಿ ನೀಡಿದ್ದಾರೆ.

ಸಾರಿಗೆ ನಿಗಮಗಳ ಆರ್ಥಿಕ ಸಂಕಷ್ಟ ಹಾಗೂ ಹೆಚ್ಚುತ್ತಿರುವ ನಿರ್ವಹಣಾ ವೆಚ್ಚದ ಹಿನ್ನೆಲೆಯಲ್ಲಿ ದರ ಏರಿಕೆಯ ಪ್ರಸ್ತಾವ ಮುಂದಕ್ಕೆ ಬಂದಿದೆ.

ಆದರೆ, ಟಿಕೆಟ್‌ ದರ ಎಷ್ಟು ಹೆಚ್ಚಾಗಲಿದೆ? ಪರಿಷ್ಕೃತ ದರ ಯಾವಾಗ ಜಾರಿಗೆ ಬರಲಿದೆ? ಎಂಬುದು ಇನ್ನೂ ಘೋಷಣೆಯಾಗಿಲ್ಲ. ಸರ್ಕಾರದ ಅಂತಿಮ ನಿರ್ಧಾರದತ್ತ ಪ್ರಯಾಣಿಕರ ಗಮನ ನೆಟ್ಟಿದೆ.

Tags:
error: Content is protected !!