ಮೈಸೂರಿನ ವಿಜಯನಗರ ರೈಲ್ವೆ ಬಡಾವಣೆಯ ಹತ್ತನೇ ಕ್ರಾಸ್ ಮತ್ತು ಇತರೆ ಕ್ರಾಸ್ ರಸ್ತೆಗಳಲ್ಲಿ ಮನೆಗಳ ಮುಂದೆ ಕಾರುಗಳನ್ನು ನಿಲ್ಲಿಸುತ್ತಿದ್ದು, ಕಳೆದ ಒಂದು ತಿಂಗಳಿನಿಂದ ಇಲ್ಲಿ ಕೆಲವು ಕಿಡಿಗೇಡಿಗಳ ಹಾವಳಿ ಮಿತಿಮೀರಿದೆ. ನಿಲ್ಲಿಸಿರುವ ಕಾರಿನ ಬಾಗಿಲನ್ನು ತೆಗೆಯುವ ಧಾವಂತದಲ್ಲಿ ಕಿಡಿಗೇಡಿಗಳು ತಾವು ತಂದಿದ್ದ ಡುಪ್ಲಿಕೇಟ್ ಕೀಯನ್ನು ಕಾರಿನ ಮೇಲೆಯೇ ಬಿಟ್ಟು ತೆರಳಿರುವ ಘಟನೆಗಳೂ ನಡೆದಿವೆ. ಕೆಲವು ಮನೆಗಳ ಮುಂದೆ ನಿಲ್ಲಿಸಿರುವ ಕಾರಿನ ಬಾಗಿಲನ್ನು ಜಜ್ಜಿ, ತೆರೆಯವ ಪ್ರಯತ್ನ ನಡೆಸಿದ್ದರೆ, ಮತ್ತೆ ಕೆಲವು ಕಡೆ ಕಾರಿನ ಗಾಜನ್ನು ಒಡೆದು ಒಳಗಿರುವ ಸ್ಪೀಕರ್ ಮತ್ತು ಇತರೆ ಕಾರಿನ ಬಿಡಿಭಾಗಗಳನ್ನು ದೋಚಿದ್ದಾರೆ. ಪೊಲೀಸ್ ಇಲಾಖೆಯವರು ಕೂಡಲೇ ಮನೆಯ ಮುಂದೆ ನಿಲ್ಲಿಸಿರುವ ಕಾರುಗಳಿಗೆ ಹಾನಿ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ.
-ವಿಜಯ್ ಹೆಮ್ಮಿಗೆ, ಮೈಸೂರು



