Mysore
29
clear sky

Social Media

ಗುರುವಾರ, 29 ಅಕ್ಟೋಬರ್ 2026
Light
Dark

ಓದುಗರ ಪತ್ರ: ಖರ್ಗೆಯವರ ಮಾತುಗಳು ಖಂಡನೀಯ

ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಂದೆಯನ್ನು ಕುರಿತಂತೆ ಅವಹೇಳನಾಕಾರಿ ಮಾತುಗಳನ್ನು ಆಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿರುವ ಖರ್ಗೆ ಸಾರ್ವಜನಿಕ ಬದುಕಿನಲ್ಲಿ ಸುಮಾರು ೬ ದಶಕಗಳ ದೀರ್ಘಮ ಕಾಲದ ಅನುಭವ ಹೊಂದಿದ್ದಾರೆ. ಅವರ ನಡೆ ನುಡಿಗಳನ್ನು ದೇಶದ ಪ್ರಜ್ಞಾವಂತ ನಾಗರಿಕರು ಗಮನಿಸುತ್ತಾರೆ. ಪ್ರಧಾನ ಮಂತ್ರಿಯಂತಹ ಉನ್ನತ ಹುದ್ದೆಯನ್ನು ಅಲಂಕರಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ತಂದೆಯ ಬಗ್ಗೆ ಖರ್ಗೆಯವರು ಲಘುವಾಗಿ ಮಾತನಾಡಿರುವುದು ಖಂಡನೀಯ. ಇನ್ನು ಮುಂದಾದರೂ ಖರ್ಗೆಯವರು ಇಂತಹ ಪ್ರಮಾದಗಳನ್ನು ಎಸಗದಿರಲಿ.

-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು

Tags:
error: Content is protected !!