Mysore
24
overcast clouds

Social Media

ಭಾನುವಾರ, 25 ಅಕ್ಟೋಬರ್ 2026
Light
Dark

ಓದುಗರ ಪತ್ರ: ದಡದಹಳ್ಳಿ -ಬ್ಯಾತಹಳ್ಳಿ ರಸ್ತೆ ದುರಸ್ತಿಪಡಿಸಿ

ಮೈಸೂರು ಜೆಪಿ ನಗರ ರಿಂಗ್ ರಸ್ತೆಯ ರೈಲ್ವೆ ಅಂಡರ್‌ಬ್ರಿಡ್ಜ್ ಬಳಿಯ ಶ್ರೀನಗರ ಬಡಾವಣೆಗೆ ಹೋಗುವ ರಸ್ತೆಯು ರೈಲ್ವೆ ಕ್ರಾಸಿಂಗ್ ದಾಟಿ ದಡದಹಳ್ಳಿ, ಬ್ಯಾತಹಳ್ಳಿ(ಟಿವಿಎಸ್ ಫ್ಯಾಕ್ಟರಿ )ಯಿಂದ ಕಡಕೊಳ ಮೂಲಕ ನಂಜನಗೂಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಇದಕ್ಕೆ ಕಾರಣವೇನೆಂದರೆ, ಮೈಸೂರು-ನಂಜನಗೂಡು ರಸ್ತೆ ಯ ಕಡಕೊಳ ಬಳಿ ಟೋಲ್ ಇದೆ. ನಿಯಮದ ಪ್ರಕಾರ ಟೋಲ್ ಕಟ್ಟಲು ಇಷ್ಟವಿಲ್ಲದಿದ್ದವರಿಗೆ ಸರ್ವಿಸ್ ರಸ್ತೆ ನಿರ್ಮಿಸಿ ಅನುಕೂಲ ಮಾಡಿಕೊಡಬೇಕಿತ್ತು. ಆದರೆ ಅದಾಗಿಲ್ಲ.

ಟೋಲ್ ಕಟ್ಟದ ಬಹಳಷ್ಟು ಕಾರುಗಳು, ಮಿನಿ ಗೂಡ್ಸ್ ಆಟೋಗಳು, ಕೆಲ ಲಾರಿಗಳು ಹಾಗೂ ನಂಜನಗೂಡಿನಿಂದ ಬರುವ ವಾಹನಗಳು ಕಡಕೊಳ ರೈಲ್ವೆ ಅಂಡರ್‌ಬ್ರಿಡ್ಜ್ ಬಳಿ ಎಡಕ್ಕೆ ತಿರುವು ತೆಗೆದುಕೊಂಡು ಈ ರಸ್ತೆಯ ಮೂಲಕವೇ ಸಂಚರಿಸುತ್ತವೆ.  ಆದರೆ ಈ ರಸ್ತೆಯು ದಡದಹಳ್ಳಿಯಿಂದ ಮುಂದೆ ಬ್ಯಾತಹಳ್ಳಿಯ ಹತ್ತಿರ ಎಣ್ಣೆ ಹೊಳೆ ಎಂಬ ಚಿಕ್ಕ ನದಿ ಹರಿಯುತ್ತಿದ್ದು ಈ ಹಳ್ಳದ ಎರಡೂ ಕಡೆ ರಸ್ತೆ ತೀರ ಹದಗೆಟ್ಟಿದೆ. ಈ ರಸ್ತೆ ದುರಸ್ತಿ ಹಾಗೂ ಈ ಎಣ್ಣೆ ಹೊಳೆ ಹಳ್ಳದ ಸೇತುವೆಯನ್ನು ಎತ್ತರಿಸಿ ನಿರ್ಮಿಸುವ ಕಾಮಗಾರಿ ಮಂಜೂರಾಗಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಆದರೆ ಇನ್ನು ಕಾಮಗಾರಿ ಆರಂಭವಾಗಿರುವುದಿಲ್ಲ. ಆದ್ದರಿಂದ ಜಿಡಳಿತ, ಗ್ರಾಮ ಪಂಚಾಯಿತಿಗಳು ಈ ಬಗ್ಗೆ ತುರ್ತು ಗಮನ ಹರಿಸಿ, ರಸ್ತೆ ದುರಸ್ತಿ ಹಾಗೂ ಸೇತುವೆ ನಿರ್ಮಾಣ ಮಾಡಲು ಕ್ರಮಕೈಗೊಳ್ಳಬೇಕು.

-ಮುಳ್ಳೂರು ಪ್ರಕಾಶ್, ಮೈಸೂರು

Tags:
error: Content is protected !!