ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ತಲ್ಲಣ ಉಂಟು ಮಾಡಿರುವ ಸ್ಟಿಂಗ್ ಆಪರೇಷನ್ ( ಮಾರುವೇಷದ ಕಾರ್ಯಾಚರಣೆ) ಬಗ್ಗೆ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಮಾತನಾಡಿದ್ದಾರೆ. ರಾಜ್ಯದಲ್ಲಿ ದೀರ್ಘಕಾಲ ಮುಖ್ಯಮಂತ್ರಿಯಾಗಿದ್ದ, ಅಹಿಂದ ವರ್ಗದ ನಾಯಕನಿಗೆ ಕಾಂಗ್ರೆಸ್ ಪಕ್ಷದ ನಾಯಕರುಗಳೇ ಸ್ಟಿಂಗ್ ಆಪರೇಷನ್ ಮಾಡಿ, ಸಿದ್ದರಾಮಯ್ಯ ಅವರು ಇಂದು ಮನೆಯಲ್ಲಿ ಕುಳಿತು ಕೊಳ್ಳುವ ಸ್ಥಿತಿಗೆ ತಂದಿದ್ದಾರೆ, ಅವರು ಹಿಂದೆ ನಮ್ಮ ಪಕ್ಷದ ಇದ್ದವರು, ಅಗತ್ಯ ಬಿದ್ದರೆ ಸಿದ್ದರಾಮಯ್ಯ ಅವರ ಮನೆಗೆ ಹೋಗಲು ಸಿದ್ಧ ಎಂದೆಲ್ಲ ಸಹಾನುಭೂತಿ ತೋರಿಸಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಅವರು ಶುಕ್ರವಾರ ಮೈಸೂರಿನಲ್ಲಿ, ಕುಮಾರಸ್ವಾಮಿ ಅವರು ನನ್ನ ಪರ ನಿಲ್ಲುವುದು ಬೇಕಾಗಿಲ್ಲ, ಅವರ ಬೆಂಬಲ ಯಾರಿಗೆ ಬೇಕು? ನ್ಯಾಯ ಸಮ್ಮತವಾಗಿ ತನಿಖೆ ನಡೆದು, ಈ ಪ್ರಕರಣದ ಹಿಂದೆ ಯಾರಿzರೆ ಎಂಬುದು ತಿಳಿಯ ಬೇಕು ಎಂದು ಹೇಳಿ ಒಂದು ರೀತಿಯಲ್ಲಿ ಕುಮಾರಸ್ವಾಮಿ ಅವರಿಗೆ ಅವಮಾನ ಮಾಡಿzರೆ. ಇದು ಕುಮಾರಸ್ವಾಮಿ ಅವರಿಗೆ ಬೇಕಿತ್ತಾ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಕುಮಾರಸ್ವಾಮಿ ಅವರು ಪದೇ ಪದೇ ಸಣ್ಣ-ಪುಟ್ಟ ವಿಷಯಗಳಿಗೂ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವುದು ಅವರು ಒಂದು ರೀತಿಯಲ್ಲಿ ತಮ್ಮ ವರ್ಚಸ್ಸನ್ನು ಕಳೆದುಕೊಳ್ಳುತ್ತಿದ್ದಾರೆ ಎನಿಸುತ್ತದೆ. ಇದು ಅವರ ರಾಜಕೀಯ ಬೆಳವಣಿಗೆಗೆ ಒಳ್ಳೆಯದಲ್ಲ.
-ಬೂಕನಕೆರೆ ವಿಜೇಂದ್ರ, ಮೈಸೂರು

