Mysore
24
overcast clouds

Social Media

ಭಾನುವಾರ, 25 ಅಕ್ಟೋಬರ್ 2026
Light
Dark

ಓದುಗರ ಪತ್ರ: ದಸರಾ ಮುಗಿದರೂ ಹೆಚ್ಚುವರಿ ಬಸ್ ಟಿಕೆಟ್ ದರ ವಸೂಲಿ ನಿಂತಿಲ್ಲ!

ಕಾರ್ಯನಿಮಿತ್ತ ಅ.೨೩ರಂದು ಮುಂಜಾನೆ ೮ ಗಂಟೆಗೆ ಮೈಸೂರಿನಿಂದ ಬೆಂಗಳೂರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮದ ತಡೆರಹಿತ ಬಸ್‌ನಲ್ಲಿ ತೆರಳಿದಾಗ ನಿರ್ವಾಹಕ ೨೪೦ ರೂ. ಟಿಕೆಟ್ ನೀಡಿದರು. ಸಾಮಾನ್ಯವಾಗಿ ೨೧೦ ರೂ. ಇರುತ್ತಿದ್ದ ಟಿಕೆಟ್ ದರ ಏಕೆ ಹೆಚ್ಚಾಗಿದೆ ಎಂದು ನಿರ್ವಾಹಕನನ್ನು ಕೇಳಿದರೆ ದಸರಾ ಸ್ಪೆಷಲ್, ಹಾಗಾಗಿ ೩೦ ರೂ. ಹೆಚ್ಚಳ ಮಾಡಿದ್ದಾರೆ ಎಂದರು.

ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಅದೇ ದಿನ ರಾತ್ರಿ ೮.೩೦ಕ್ಕೆ ಬೆಂಗಳೂರಿನಿಂದ ಮೈಸೂರಿಗೆ ಕೆಎಸ್‌ಆರ್‌ಟಿಸಿ ತಡೆರಹಿತ ಬಸ್ ಹತ್ತಿದಾಗ ನಿರ್ವಾಹಕ ೨೧೦ ರೂ. ಟಿಕೆಟ್ ನೀಡಿದರು. ಬೆಳಿಗ್ಗೆ ೨೪೦ ರೂ. ಟಿಕೆಟ್ ದರ ಪಡೆಯಲಾಗಿತ್ತು. ಈಗ ೨೧೦ ರೂ. ದರವಿದೆ ಎಂದು ಕೇಳಿದಾಗ ನಮಗೇನು ಗೊತ್ತು ಸರ್ ಡಿಪೋದಲ್ಲಿ ಟಿಕೆಟ್ ಮೆಷಿನ್‌ಗೆ ದರ ನಿಗದಿ ಮಾಡಿರುತ್ತಾರೆ. ನಮ್ಮದೇನೂ ಇಲ್ಲ ಎಂದು ಹೇಳಿದರು.

ರಾಜ್ಯ ರಸ್ತೆ ಸಾರಿಗೆ ನಿಗಮದವರು ಒಂದೇ ದಿನ ನಿಗದಿತ ಪ್ರಯಾಣಕ್ಕೆ ಎರಡೆರಡು ರೀತಿಯ ದರವನ್ನು ಪಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು. ದಸರಾ ಮುಗಿದ ಬಳಿಕವೂ ಪ್ರಯಾಣಿಕರಿಂದ ಹೆಚ್ಚುವರಿಯಾಗಿ ಟಿಕೆಟ್ ದರ ಪಡೆಯವುದನ್ನು ಕೂಡಲೇ ನಿಲ್ಲಿಸಬೇಕು.

-ಸುನಿಲ್, ಭೇರ್ಯ

Tags:
error: Content is protected !!