Mysore
31
light rain

Social Media

ಶನಿವಾರ, 24 ಅಕ್ಟೋಬರ್ 2026
Light
Dark

ಓದುಗರ ಪತ್ರ: ಮಲ್ಲಿಗೆಯ ಮೈಸೂರಲಿ…

ಮಲ್ಲಿಗೆಯ ಮೈಸೂರಲಿ…

ತಾಯಿ ಚಾಮುಂಡಿ ಮಡಿಲಲಿ

ಮಲ್ಲಿಗೆಯ ಮೈಸೂರಲಿ

ಅದ್ಧೂರಿ ಜಂಬೂ ಸವಾರಿ

ಈ ಬಾರಿ, ಅಂಬಾರಿ ಹೊತ್ತ

ಮೊದಲ ಬಾರಿಗೆ ಪ್ರಶಾಂತ!

ಒಂದಕ್ಕಿಂತ ಒಂದು ಅಂದ- ಚಂದ!

ಬರೆದು ಬಣ್ಣಿಸಲಾಗದ ಆನಂದ!

ಝಗಮಗಿಸುವ ದೀಪಾಲಂಕಾರ

ಫಲ ಪುಷ್ಪ ಪ್ರದರ್ಶನ,

ಯುವ ಸಂಭ್ರಮ, ರೈತ ದಸರಾ

ಆಹಾರ ಮೇಳ, ಕವಿಗೋಷ್ಠಿ,ಕಂಬಳ

ವಸ್ತುಪ್ರದರ್ಶನ, ಪಂಜಿನ ಕವಾಯಿತು.

ಮುಗಿಯಿತು ಮೈಸೂರು ದಸರಾ

ಜಗಕೆಲ್ಲ ಸಾರಿತು ಮೈಸೂರು ಹೆಸರ !

-ಮ.ಗು.ಬಸವಣ್ಣ , ಮೈಸೂರು

Tags:
error: Content is protected !!