Mysore
22
light rain

Social Media

ಶುಕ್ರವಾರ, 23 ಅಕ್ಟೋಬರ್ 2026
Light
Dark

ಓದುಗರ ಪತ್ರ: ಸ್ವಾತಂತ್ರ್ಯ ಹೋರಾಟಗಾರರ ಪುತ್ತಳಿಗೆ ಕಟ್ಟಡ ಅಡ್ಡ ಬರಬಾರದು

ಸ್ವಾತಂತ್ರ್ಯ ಹೋರಾಟಗಾರರು ಹಾಗೂ ತಗಡೂರು ಗಾಂಧಿ ಎಂದೇ ಕರೆಯಲ್ಪಟ್ಟ ಹಿರಿಯರಾದ ತಗಡೂರು ರಾಮಚಂದ್ರರಾಯರ ಗೌರವಾರ್ಥ ಮೈಸೂರು ನಗರದಲ್ಲಿ ಶ್ರೀಯುತರು ವಾಸವಾಗಿದ್ದ ಚಾಮುಂಡಿಪುರಂ ಬಡಾವಣೆಯಲ್ಲಿರುವ ಪ್ರಮುಖ ವೃತ್ತಕ್ಕೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಅಲ್ಲದೆ ಪಕ್ಕದಲ್ಲಿರುವ ಉದ್ಯಾನವನಕ್ಕೂ ತಗಡೂರು ರಾಮಚಂದ್ರರಾಯರ ಹೆಸರು ಇಡಲಾಗಿದ್ದು, ಉದ್ಯಾನದ ಆವರಣದಲ್ಲಿ ರಾಮಚಂದ್ರ ರಾಯರ ಪುತ್ತಳಿಯನ್ನು ಸ್ಥಾಪಿಸಿರುವುದು ಗೊತ್ತಿರುವ ವಿಷಯ. ಆದರೆ ಪುತ್ತಳಿಯು ಹಲವಾರು ವರ್ಷಗಳಿಂದ ಬಯಲಿನ ವಾತಾವರಣದಲ್ಲಿದ್ದರೂ ಚಾವಣಿ ವ್ಯವಸ್ಥೆಯನ್ನು ಮಾಡಲಾಗಿಲ್ಲ. ಇಂತಹ ಸಂದರ್ಭದಲ್ಲಿ ಪುತ್ತಳಿಯ ಪಕ್ಕಕ್ಕೆ ಹೊಂದಿಕೊಂಡಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಎತ್ತರದ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದು ಇದು ಸ್ವಾತಂತ್ರ್ಯ ಹೋರಾಟಗಾರರ ಪುತ್ತಳಿಯನ್ನು ಮರೆಮಾಡುವಂತಿದೆ.

ಈಗಲಾದರೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಗಮನಹರಿಸಿ ಸ್ವಾತಂತ್ರ್ಯಹೋರಾಟಗಾರರ ಪುತ್ತಳಿ ಮರೆಯಾದಂತೆ ಗಮನಹರಿಸಬೇಕಾಗಿದೆ. ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ. ಎಸ್. ಶ್ರೀವತ್ಸ ರವರು ಸಂಬಂಧಪಟ್ಟ ಅಧಿಕಾರಿಗಳೊಡನೆ ಸಮಾಲೋಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

– ಶ್ರೀಕಂಠ ಕುಮಾರ್, ಮೈಸೂರು

Tags:
error: Content is protected !!