Mysore
22
light rain

Social Media

ಶುಕ್ರವಾರ, 23 ಅಕ್ಟೋಬರ್ 2026
Light
Dark

ಓದುಗರ ಪತ್ರ: ಆಂತರಿಕ ಕ್ಷೋಭೆಗಳಿಗೆ ಬುದ್ಧನ ವಿಚಾರಗಳೇ ಮದ್ದು

ಓದುಗರ ಪತ್ರ

ಚಾಮರಾಜನಗರದ ಡಾ. ಬಿ. ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಕ್ಟೋಬರ್ ೨೪ ಮತ್ತು ೨೫ ರಂದು ನಡೆಯಲಿರುವ ಅಂತರರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನ ಗಮನಸೆಳೆಯುವಂತಾಗಬೇಕು.

ಗೌತಮ ಬುದ್ಧನ ತತ್ವ ಸಿದ್ಧಾಂತಗಳು, ವಿಚಾರಧಾರೆಗಳು, ಭಾರತದ ಮಣ್ಣಿನಹುಟ್ಟಿ ಬೆಳೆದ ಬೌದ್ಧ ಧರ್ಮದ ಆಚಾರ, ವಿಚಾರಮತ್ತು ಸಂಸ್ಕೃತಿಯನ್ನ ಮನೆ-ಮನೆಗೂ ತಿಳಿಸುವಂತಹ ಮತ್ತು ಶಾಂತಿ, ಕರುಣೆ, ಪ್ರೀತಿ ಮಮತೆಯನ್ನು ಹರಡುವ ಮೂಲ ಆಶಯ ಹೊಂದಿರುವ ಈ ಒಂದು ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಳ್ಳಬೇಕಿದೆ. ಬುದ್ಧನ ಸ್ಮರಣೆ, ಪಂಚಶೀಲದ ಅನುಸರಣೆ ಕೇವಲ ಈ ಎರಡು ದಿನಗಳಿಗೆ ಸೀಮಿತವಾಗಿರದೇ ಪ್ರತಿನಿತ್ಯ ಪಂಚಶೀಲ ತತ್ವವನ್ನು ಪಾಲಿಸುವಂತಾಗಬೇಕು. ನಮ್ಮ ಸಂವಿಧಾನದಲ್ಲಿ ಅಡಕಗೊಂಡಿರುವ ಸಮಾನತೆ, ನ್ಯಾಯ , ಭ್ರಾತೃತ್ವ ಹಾಗೂ ವೈಜ್ಞಾನಿಕತೆ, ಪರಸ್ಪರ ವ್ಯಕ್ತಿ ಗೌರವ, ಶಾಂತಿ, ಅಹಿಂಸೆ ಇವೆಲ್ಲವೂ ಸಾಕಾರಗೊಳ್ಳಲು ಪ್ರಸ್ತುತ ಭಾರತಕ್ಕೆ ಬುದ್ಧನ ಚಿಂತನೆಗಳ ಅನಿವಾರ್ಯತೆ ಇದೆ.

ಮಾನವರ ಆಂತರಿಕ ಕ್ಷೋಭೆಗಳಿಗೆ ಬುದ್ಧನ ವಿಚಾರಗಳೇ ಮದ್ದು. ಹಾಗಾಗಿ ಧಮ್ಮವನ್ನು ಸಾರುವ ಇಂತಹ ಸಮ್ಮೇಳನಗಳು ಯಶಸ್ವಿಯಾಗಿ ಅರ್ಥ ಪೂರ್ಣವಾಗಿ ಜರುಗಬೇಕು.

 – ಎಂ. ಪಿ. ದರ್ಶನ್ ಚಂದ್ರ ಮುಕ್ಕಡಹಳ್ಳಿ, ಚಾಮರಾಜನಗರ ತಾ.

Tags:
error: Content is protected !!