Mysore
27
overcast clouds

Social Media

ಬುಧವಾರ, 21 ಅಕ್ಟೋಬರ್ 2026
Light
Dark

ಜಂಬೂಸವಾರಿ ಮೆರವಣಿಗೆಗೆ ಮೆರುಗು ನೀಡಿದ ಸ್ತಬ್ಧಚಿತ್ರಗಳು

ಮೈಸೂರು:  ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಗೆ ವೈವಿಧ್ಯಮಯ ಸ್ತಬ್ಧಚಿತ್ರಗಳು ಹಾಗೂ ಜಾನಪದ ಕಲಾತಂಡಗಳು ವಿಶೇಷ ಮೆರುಗು ನೀಡಿವೆ. ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಅನಾವರಣಗೊಳಿಸಿದ ಸ್ತಬ್ಧಚಿತ್ರಗಳ ಮೆರವಣಿಗೆ ನೋಡುಗರ ಕಣ್ಮನ ಸೆಳೆದಿದೆ.

ಜಿಲ್ಲೆಗಳ ವೈಶಿಷ್ಟ್ಯಗಳನ್ನು ಪರಿಚಯಿಸುವ ಸ್ತಬ್ಧಚಿತ್ರಗಳೊಂದಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳೂ ಪ್ರದರ್ಶನಗೊಂಡವು. ಹೊರರಾಜ್ಯಗಳ ಸ್ತಬ್ಧಚಿತ್ರಗಳಿಗೂ ಅವಕಾಶ ಕಲ್ಪಿಸಲಾಗಿದ್ದು, ವೈವಿಧ್ಯಮಯ ವಿನ್ಯಾಸಗಳು ಪ್ರೇಕ್ಷಕರ ಗಮನ ಸೆಳೆದವು.

ಸ್ತಬ್ಧಚಿತ್ರಗಳ ಜೊತೆಗೆ ಸಾಗಿದ ಜಾನಪದ ಕಲಾತಂಡಗಳು ಮೆರವಣಿಗೆಯ ಸಂಭ್ರಮವನ್ನು ಹೆಚ್ಚಿಸಿದವು. ಕೀಲುಕುದುರೆ, ಗೊರವರ ಕುಣಿತ, ಡೊಳ್ಳು ಕುಣಿತ, ಯಕ್ಷಗಾನ, ಕೀಲುಗೊಂಬೆ, ಮರಗಾಲು, ವೀರಗಾಸೆ ಹಾಗೂ ಹಾಡಿಮಕ್ಕಳ ನೃತ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಪ್ರದರ್ಶನಗಳು ಜನರನ್ನು ರಂಜಿಸಿದವು.

ಡೊಳ್ಳಿನ ಸದ್ದು, ಕಲಾವಿದರ ಹೆಜ್ಜೆ ಹಾಗೂ ಆಕರ್ಷಕ ವೇಷಭೂಷಣಗಳು ಮೆರವಣಿಗೆಗೆ ವಿಶೇಷ ಕಳೆ ತಂದವು. ರಸ್ತೆ ಬದಿಗಳಲ್ಲಿ ನೆರೆದಿದ್ದ ಜನರು ಸ್ತಬ್ಧಚಿತ್ರಗಳ ಸೊಬಗು ಮತ್ತು ಕಲಾವಿದರ ಪ್ರದರ್ಶನಗಳನ್ನು ಕಣ್ತುಂಬಿಕೊಂಡರು. ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾರಿದ ಈ ಮೆರವಣಿಗೆ ದಸರಾ ವೈಭವಕ್ಕೆ ಮತ್ತಷ್ಟು ರಂಗು ತುಂಬಿತು. ೧೬ ಜಿಲ್ಲೆಗಳ ಸ್ತಬ್ಧಚಿತ್ರಗಳು ಸೇರಿದಂತೆ ಒಟ್ಟು ೬೦ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪ್ರದರ್ಶನಗೊಂಡವು.

ಮೆರವಣಿಗೆಯಲ್ಲಿ 16 ಜಿಲ್ಲೆಗಳ, ರಾಜ್ಯ ಸರ್ಕಾರದ 18 ಮತ್ತು ಕೇಂದ್ರ ಸರ್ಕಾರದ 11 ಸೇರಿ ಒಟ್ಟು 60 ಸ್ತಬ್ಧಚಿತ್ರಗಳು ಪ್ರದರ್ಶನಗೊಂಡಿವೆ. ದಸರಾ ಮೆರವಣಿಗೆಯಲ್ಲಿ ಹೊರ ರಾಜ್ಯದ ಸ್ತಬ್ಧ ಚಿತ್ರಗಳಿಗೂ ಅವಕಾಶ ನೀಡಲಾಗಿದ್ದು, ಕೀಲುಕುದುರೆ, ಗೊರವರ ಕುಣಿತ, ಡೊಳ್ಳು ಕುಣಿತ, ಯಕ್ಷಗಾನ, ಕೀಲುಗೊಂಬೆ, ಮರಗಾಲು, ವೀರಗಾಸೆ, ಹಾಡಿಮಕ್ಕಳ ನೃತ್ಯ ಸೇರಿ ಹಲವು ಸಾಂಸ್ಕೃತಿಕ ಪ್ರದರ್ಶನಗಳು ನೆರವೇರಿವೆ.

Tags:
error: Content is protected !!