Mysore
27
light rain

Social Media

ಭಾನುವಾರ, 18 ಅಕ್ಟೋಬರ್ 2026
Light
Dark

ಓದುಗರ ಪತ್ರ: ದನಗಳ ಪ್ರದರ್ಶನಕ್ಕೆ ಬಂದ ರೈತರೂ ಪ್ರತಿಭಟಿಸಬೇಕಾಯಿತಲ್ಲ…

ರೈತ ದಸರಾ ಅಂಗವಾಗಿ ಮೈಸೂರಿನ ಕುಕ್ಕರಹಳ್ಳಿಯ ಬೋಽಸತ್ವ ಹಾಸ್ಟೆಲ್ ಮುಂಭಾಗದಲ್ಲಿ ಏರ್ಪಡಿಸಲಾಗಿದ್ದ ಹಳ್ಳಿಕಾರ್ ತಳಿಯ ಜೋಡಿ ದನಗಳ ಪ್ರದರ್ಶನವನ್ನು ಗಮನಿಸಿದರೆ ಜಿಡಳಿತದಿಂದ ಯಾವುದೇ ಪೂರ್ವ ಸಿದ್ಧತೆ ಇರಲಿಲ್ಲ ಎಂಬುದು ಕಂಡುಬರುತ್ತದೆ.

ರೈತರಿಗೆ ಮತ್ತು ರಾಸುಗಳಿಗೆ ಯಾವುದೇ ಕನಿಷ್ಠ ಸೌಲಭ್ಯಗಳೂ ಇರಲಿಲ್ಲ. ಇದರಿಂದ ರೈತರು ಪರದಾಡುವಂತಾಯಿತು. ಇದರ ಪರಿಣಾಮ ಶನಿವಾರ ಬೆಳಿಗ್ಗೆ ೯ ಗಂಟೆಯಿಂದ ಸುಮಾರು ಒಂದು ಗಂಟೆಯ ಕಾಲ ರೈತರು ಕುಕ್ಕರಹಳ್ಳಿ ಕೆರೆಯ ಕೆಳಭಾಗದ ಮುಖ್ಯ ರಸ್ತೆಯನ್ನು ಬಂದ್ ಮಾಡಿ ರಾಸುಗಳನ್ನು ರಸ್ತೆಯಲ್ಲಿ ಕಟ್ಟಿಹಾಕಿ ಪ್ರತಿಭಟನೆ ನಡೆಸಿದ್ದು, ಕಳೆಗಟ್ಟಿದ ದಸರಾ ಮಹೋತ್ಸವ ಸಂದರ್ಭದಲ್ಲೂ ಇಂತಹ ಪರಿಸ್ಥಿತಿ ನಿರ್ಮಾಣವಾಯಿತಲ್ಲ ಎಂಬುದು ಬೇಸರದ ಸಂಗತಿ.

ಮೊದಲು ಬಂದ ಸುಮಾರು ೬೦ ಜೋಡಿ ದನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಈ ರಾಸುಗಳ ಮಾಲೀಕರು ಮತ್ತು ಸಹಾಯಕರು ಸೇರಿದಂತೆ ಸುಮಾರು ೨೦೦ ರಿಂದ ೩೦೦ ಜನಕ್ಕೆ ಕನಿಷ್ಠ ಶೌಚಾಲಯದ ವ್ಯವಸ್ಥೆ ಇಲ್ಲದೇ ಪರದಾಡಿದರು.

ಕುಡಿಯುವ ನೀರಿಗೆ ಬ್ಲೀಚಿಂಗ್ ಪೌಡರ್ ಹಾಕಿದ್ದರಿಂದ, ಯಾವುದೇ ರಾಸುಗಳು ಈ ನೀರನ್ನು ಕುಡಿಯದೇ ಆ ಪ್ರದೇಶದ ಅಕ್ಕ ಪಕ್ಕದ ಮನೆಯವರ ನೀರನ್ನು ರೈತರು ಆಶ್ರಯಿಸಬೇಕಾಯಿತು. ಮೈಸೂರು ದಸರಾದಲ್ಲಿ ಕಂಬಳ ನಡೆಸಲು ಭಾರಿ ಖರ್ಚು ಮಾಡಲಾಗುತ್ತಿದೆ. ಆದರೆ ನಮ್ಮ ರೈತರ ಜೀವನಾಡಿ ಹಳ್ಳಿಕಾರ್ ತಳಿಯ ರಾಸುಗಳ ಪ್ರದರ್ಶನಕ್ಕೆ ತಕ್ಕ ವ್ಯವಸ್ಥೆ ಮಾಡಲು ಸಂಬಂಧಪಟ್ಟವರು ಗಮನಹರಿಸಲಿಲ್ಲ ಎಂಬ ಭಾವನೆ ಹಲವರಲ್ಲಿ ಮೂಡುತ್ತದೆ. ಇದು ಜಿಡಳಿತದ ಬೇಜವಾಬ್ದಾರಿತನಕ್ಕೆ ಸಾಕ್ಷಿ ಎನ್ನದೆ ವಿಧಿಯಿಲ್ಲ.

 -ಬೂಕನಕೆರೆ ವಿಜೇಂದ್ರ, ಮೈಸೂರು

Tags:
error: Content is protected !!