ಈ ವರ್ಷದ ದಸರಾ ಮಹೋತ್ಸವದಲ್ಲಿನ ವಿದ್ಯುತ್ ದೀಪಾಲಂಕಾರಗಳು ಪ್ರತಿ ವರ್ಷದಂತೆ ಈ ವರ್ಷವೂ ಜನರ ಮನಸ್ಸನ್ನು ಆಕರ್ಷಿಸುತ್ತಿದೆ. ಅದರಲ್ಲೂ ದೇವರಾಜ ಅರಸು ರಸ್ತೆಯಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಹಾರುತ್ತಿರುವ ಹಕ್ಕಿಗಳ ಚಿತ್ರಗಳು ಪಕ್ಷಿ ಲೋಕವನ್ನೇ ಸೃಷ್ಟಿಸಿದ್ದು ನೋಡುಗರ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತಿದೆ.
ಜೀವಂತ ಪಕ್ಷಿಗಳೇ ಆಗಸದಲ್ಲಿ ಹಾರಾಡುತ್ತಿವೆಯೇನೋ ಎಂಬ ಅನುಭವ ನೀಡುತ್ತದೆ. ದಸರಾ ಮಹೋತ್ಸವದ ದೀಪಾಲಂಕಾರಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತಿದ್ದು, ಇಡೀ ದಸರಾ ಮಹೋತ್ಸವಕ್ಕೆ ಮುಕುಟಪ್ರಾಯವಾಗಿದೆ ಎನ್ನಬಹುದು. ಇಂತಹ ಅತ್ಯದ್ಭುತವನ್ನು ದೀಪಗಳ ಮೂಲಕ ಸೃಷ್ಟಿಸಿರುವ ದೀಪಾಲಂಕಾರ ಸಮಿತಿಗೆ ಧನ್ಯವಾದಗಳು.
-ಕೆ.ವಿ.ವಾಸು, ಮೈಸೂರು




