Mysore
21
heavy intensity rain

Social Media

ಗುರುವಾರ, 15 ಅಕ್ಟೋಬರ್ 2026
Light
Dark

ಹೆಣ ಇದ್ದ ಸ್ಕಾರ್ಪಿಯೋ ಓಡಿಸಲು ಯಾರೂ ಸಿದ್ಧರಿಲ್ಲ

ಶೆಡ್‌ನಿಂದ ಹೆಣ ಹಾಕಿಕೊಂಡು ಬಂದ ದೀಪಕ್, ಗೇಟ್ ತನಕ ಬಂದು ಮುಂದಕ್ಕೆ ಹೋಗಲು ಆಗಲ್ಲ ಎಂದು ನಿರಾಕರಣೆ

ಹೆಣ ಬಿಸಾಡುವ ಸ್ಥಳಕ್ಕೆ ಬಿಳಿ ಬಣ್ಣದ ಸ್ಥಾರ್ಪಿಯೋ ಗಾಡಿಯನ್ನು ಸಿದ್ಧಗೊಳಿಸಿದ ಮೇಲೆ ಗಾಡಿಗೆ ಹೆಣವನ್ನು ತಂದು ಹಾಕಿ ಎಂದು ಹೇಳಿದೆ. ಆಗ ಗೇಟ್ ಬಳಿ ಇದ್ದ ಗಾಡಿಯನ್ನು ರೇಣುಕಾಸ್ವಾಮಿಯ ಮೃತದೇಹ ಇದ್ದ
ಪಟ್ಟಣಗೆರೆ ಶೆಡ್ ಇರುವ ಹೋಗಲು ಯಾರೂ ಸಿದ್ದರಿರಲಿಲ್ಲ. ನಂತರ ದೀಪಕ್, ‘ನಾನೇ ಗಾಡಿಯನ್ನು ತೆಗೆದುಕೊಂಡು ಹೋಗಿ ಹೆಣವನ್ನು ಹಾಕಿಕೊಂಡು ಬರುತ್ತೇನೆ’ ಎಂದು ಒಪ್ಪಿಕೊಂಡರು. ಅದರಂತೆ ಗಾಡಿಯನ್ನು ಮನೆಯ ಹತ್ತಿರ ತೆಗೆದುಕೊಂಡು ಹೋಗಿ, ಹಣವನ್ನು ಗಾಡಿಯ ಹಿಂಭಾಗದಲ್ಲಿ ಹಾಕಿಕೊಂಡು ವಾಪಸ್ಸು ಗೇಟ್ ಹತ್ತಿರ ಬಂದ ದೀಪಕ್ ಮೃತದೇಹವನ್ನು dispose ಮಾಡಲು ಅಲ್ಲಿಯವರೆಗೆ ಬರುವುದಿಲ್ಲ ಎಂದರು.
ಚಿತ್ರದುರ್ಗದಿಂದ ಬಂದಿದ್ದ ಕ್ಯಾಬ್ ಡ್ರೈವರ್‌ಗೆ ಗಾಡಿ ಓಡಿಸಲು ಬೇಡಿಕೊಂಡೆವು: ಶೆಡ್‌ನಿಂದ ಹೆಣ ಬಿಸಾಡುವ ಸ್ಥಳಕ್ಕೆ ಗಾಡಿಯನ್ನು ಯಾರು ಓಡಿಸಿಕೊಂಡು ಹೋಗುವುದು ಎಂಬ ವಿಚಾರದಲ್ಲಿ ಗೊಂದಲ ವಾಯಿತು. ಆಗ ನಾನು ಚಿತ್ರದುರ್ಗದಿಂದ ಬಂದ ರವಿಗೆ ನೀನೇ ಓಡಿಸು ಎಂದು ಕೇಳಿಕೊಂಡೆ. ಅದಕ್ಕೆ ಆತ ಆಗುವುದಿಲ್ಲ ಎಂದ, ನಾನು ಮತ್ತೊಮ್ಮೆ ಆತನಿಗೆ ಇದೊಂದು ನನಗೋಸ್ಕರ ಸಹಾಯ ಮಾಡು ಎಂದು ಕೇಳಿಕೊಂಡೆ. ನಾನು ರಿಕ್ವೆಸ್ಟ್ ಮಾಡಿದ್ದರಿಂದ ರವಿ ಸ್ಥಾರ್ಪಿಯೋ ಗಾಡಿಯ ಚಾಲಕನ ಸೀಟ್‌ನಲ್ಲಿ ಕುಳಿತುಕೊಂಡ. ಆ ಸಮಯದಲ್ಲಿ ಅನುಕುಮಾರ್‌ ಮತ್ತು ಜಗದೀಶ್ ಕಾರಿನ ಪಕ್ಕದಲ್ಲಿ ನಿಂತಿದ್ದರು. ಆಗ ನಾಗರಾಜ್, ನೀವಿಬ್ಬರು ಇಲ್ಲೇ ಇರಿ ಎಂದು ಹೇಳಿದರು. ಆದರೆ ಅವರಿಬ್ಬರೂ ನಮಗೆ ಭಯ ಆಗುತ್ತಿದೆ ಎಂದು ಹೇಳಿ, ಮುಂದಿನ ಸೀಟ್‌ನಲ್ಲಿ ಅಂದರೆ ಚಾಲಕನ ಪಕ್ಕದಲ್ಲಿ ಕುಳಿತುಕೊಂಡರು. ನಂತರ ಗಾಡಿಯನ್ನು ಶೆಡ್‌ನ ಗೇಟಿನ ಆಚೆ ತೆಗೆದುಕೊಂಡು ಬಂದಾಗ, ಮಧ್ಯದ ಸೀಟಿನಲ್ಲಿ ಕಾರ್ತಿಕ್, ರಾಘವೇಂದ್ರ ಮತ್ತು ನಿಖಿಲ್ ನಾಯ್ಕ ಕುಳಿತುಕೊಂಡರು. ಆಗ ಗಾಡಿ ಓಡಿಸುತ್ತಿದ್ದ ರವಿ ಎಲ್ಲಿಗೆ ಹೋಗಬೇಕು ಎಂದು ಕೇಳಿದಾಗ, ನಾನು ನಾಯಂಡಳ್ಳಿ ಹತ್ತಿರ ಹೋಗಿ, ಅಲ್ಲಿಂದ ನಾಗರಭಾವಿ ಕಡೆಗೆ ಮಾಗಡಿ ರೋಡ್ ನಲ್ಲಿ ಇರುವ Sattva Apartment ತೆಗೆದುಕೊಂಡು ಹೋಗಿ ಎಂದೆ.
ನಮ್ಮ ಗಾಡಿಯನ್ನು ಫಾಲೋ ಮಾಡಿ:  ಆಗ ರವಿ,’ನನಗೆ ಆ ವಿಳಾಸ ಗೊತ್ತಿಲ್ಲ’ ಎಂದು ಹೇಳಿದ. ಆಗ ಮಧ್ಯದ ಸೀಟಿನಲ್ಲಿ ಕುಳಿತಿದ್ದ, ಕಾರ್ತಿಕ್ ನನಗೆ ಗೊತ್ತು, ಅಲ್ಲಿ ಎಲ್ಲಿ ಎಂದು ಕೇಳಿದ. ಅದಕ್ಕೆ ನಾವು, ನೀವು ನಡಿಯಿರಿ, ನಾವು ತೋರಿಸುತ್ತೇವೆ ಎಂದು ಹೇಳಿದೆವು. ಆಗ ನಾನು ವಿನಯ್‌ಗೆ ನೀವು ನಿಮ್ಮ ಕಾರನ್ನು ತೆಗೆದುಕೊಳ್ಳಿ, ನಮ್ಮ ಗಾಡಿಯನ್ನು ಇವರ ಗಾಡಿ ಫಾಲೋ ಮಾಡಲಿ ಎಂದು ಹೇಳಿದೆ. ಆಗ ಸಮಯ ಮಧ್ಯರಾತ್ರಿ 12ರಿಂದ 1 ಗಂಟೆಯಾಗಿತ್ತು. ವಿನಯ್ ಹೋಗಿ ತಮ್ಮ ವಾಹನವನ್ನು ತೆಗೆದುಕೊಂಡು ಬಂದರು.
ಅವರ ಪಕ್ಕದ ಸೀಟ್‌ನಲ್ಲಿ ನಾನು ಕುಳಿತುಕೊಂಡೆ. ನನ್ನ ಹಿಂಬದಿಯ ಸೀಟಿನಲ್ಲಿ ಲಕ್ಷ್ಮಣ್, ಅವರ ಪಕ್ಕದಲ್ಲಿ ನಾಗರಾಜ್ ಕುಳಿತುಕೊಂಡಿರು. ಆ ಸಮಯದಲ್ಲಿ ಪವನ್ ನನ್ನ ಬಳಿ ಬಂದು ರೇಣುಕಾಸ್ವಾಮಿಯ ಮೊಬೈಲ್ ಮತ್ತು ಬೆಳ್ಳಿಯ ಕರಡಿಕೆಯನ್ನು ಏನು ಮಾಡಬೇಕು ಎಂದು ಕೇಳಿದ. ನಾನು ನಿನಗೆ ಏನು ತೋಚುತ್ತದೆ ಅದನ್ನು ಮಾಡು ಎಂದು ಹೇಳಿ ಗಾಡಿ ಹತ್ತಿ ಕುಳಿತುಕೊಂಡೆ. ಆಗ ಆತ ಆ ಮೊಬೈಲ್‌ನ್ನು ನನಗೆ ಕೊಡಲು ಬಂದ, ನಾನು ಅದನ್ನು ತೆಗೆದುಕೊಂಡೆ. ಅಲ್ಲದೆ ರಾಘವೇಂದ್ರನ ಫೋನ್ ಅನ್ನೂ ತೆಗೆದುಕೊಂಡು ಬಾ ಎಂದು ಪವನ್‌ಗೆ ಹೇಳಿದೆ. ಆತ ರಾಘವೇಂದ್ರನ ಮೊಬೈಲ್ ತೆಗೆದುಕೊಂಡು ಬಂದು ನನ್ನ ಕೈಗೆ ಕೊಟ್ಟ. ನಂತರ ನಮ್ಮ ವಾಹನ ಮುಂದೆಕ್ಕೆ ಹೊರಟಿತು. ಮೃತದೇಹ ಇದ್ದ ಸ್ಟಾರ್ಪಿಯೋ ನಮ್ಮನ್ನು (ಮುಂದುವರಿಯುತ್ತದೆ)
ಹಿಂಬಾಲಿಸಿತು.
ಹೆಣ ಇದ್ದ ರೂಂಗೆ ಹೋಗಿ ನೋಡಿ ದಂಗಾದೆವು: ರೇಣುಕಾಸ್ವಾಮಿ ಸತ್ತುಹೋಗಿದ್ದಾನೆ ಎಂದು ಗೊತ್ತಾದ ನಂತರ, ನಾನು ದರ್ಶನ್ ಮನೆಯಿಂದ ಶೆಡ್‌ಗೆ ಬಂದಾಗ, ಜಗದೀಶ್, ‘ಹೆಣವನ್ನು ಆ ಮನೆಯ ನೆಲಮಹಡಿಯ ರೂಂನಲ್ಲಿ ಇಟ್ಟಿದ್ದೇವೆ’ ಎಂದು ನನಗೆ ಹೇಳಿದರು. ಆಗ ನಾನು, ನಾಗರಾಜ್, ಲಕ್ಷ್ಮಣ್ ಮತ್ತು ಒಬ್ಬ ಸೆಕ್ಯುರಿಟಿ ಗಾರ್ಡ್ ನಮ್ಮೊಂದಿಗೆ ಬಂದಿದ್ದು, ನಾವೆಲ್ಲರೂ ಆ ಮನೆಯ ಒಳಗೆ ಹೋಗಿ ನೋಡಿದಾಗ, ಅಲ್ಲಿ ಸಂಪೂರ್ಣವಾಗಿ ಕತ್ತಲು ಇದ್ದ ಕಾರಣ, ನಾನು ನನ್ನ ಮೊಬೈಲ್ ಫೋನ್ ಟಾರ್ಚ್ ಆನ್ ಮಾಡಿಕೊಂಡು ಒಳಗೆ ಹೋದೆ. ಒಳಗಡೆ ರೇಣುಕಾಸ್ವಾಮಿಯ ಮೃತದೇಹ ಕಂಡಿತ್ತು. ಆ ದೇಹವನ್ನು ನೋಡಿದಾಗ, ಒಂದು ಕಾಲು ನೇರವಾಗಿ ಇತ್ತು, ಇನ್ನೊಂದು ಕಾಲು ಮಡಿಚಿತ್ತು. ಆತನ ಮರ್ಮಾಂಗ ಊದಿಕೊಂಡಿದ್ದು, ತೊಡೆಯ ಹತ್ತಿರ ರಕ್ತ ಬರುತ್ತಿತ್ತು. ಅದನ್ನು ನೋಡಿ ಅಲ್ಲಿಂದ ಆಚೆ ಬಂದೆವು.

Tags:
error: Content is protected !!