ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ
Sattva Apartment ಹಿಂದಿನ ಜನ ಓಡಾಡದ ಜಾಗದಲ್ಲಿ ಹೆಣ ಬಿಸಾಡಲು ನಿರ್ಧಾರ
ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶವನ್ನು ನೋಡಿದ ನಂತರ ನಾನು ಲಕ್ಷ್ಮಣ್ ಗಾಡಿಯನ್ನು ತಿರುಗಿಸಿ ಪಟ್ಟಣಗೆರೆ ಶೆಡ್ ಕಡೆಗೆ ಹೋಗಲು ಹೇಳಿದೆ. ಅದರಂತೆ ವಾಹನವನ್ನು ಚಾಲನೆ ಮಾಡಿಕೊಂಡು ನಾಯಂಡಳ್ಳಿ ಹತ್ತಿರ ಬಂದಾಗ, ಲಕ್ಷ್ಮಣ್ ‘ಏನ್ ಅಣ್ಣ ಆ ಜಾಗಕ್ಕೆ ಹೋಗಿದ್ದು ಏಕೆ?’ ಎಂದು ಕೇಳಿದರು. ಅಷ್ಟರಲ್ಲಿ ನನ್ನ ಸ್ನೇಹಿತ ಕಾರ್ತಿಕ್ ಗೆ ಫೋನ್ ಮಾಡಿ ‘ನಾನು ಬರುವುದು ಇನ್ನು ಅರ್ಧ ಮುಕ್ಕಾಲು ಗಂಟೆಯಾಗುತ್ತದೆ’ ಎಂದ. ಅದಕ್ಕೆ ನಾನು ಆಯ್ತು ನನ್ನ ಕಾರನ್ನು ಆರ್.ಆರ್. ನಗರದಿಂದ ತೆಗೆದುಕೊಂಡು ನಾಯಂಡಹಳ್ಳಿ ಹತ್ತಿರ ನಮ್ಮ ಮನೆಯ ಕಡೆ ಹೋಗುವ ದಿಕ್ಕಿಗೆ ಮುಖ ಮಾಡಿ ಕಾರನ್ನು ನಿಲ್ಲಿಸಿಕೊಂಡಿರು ಎಂದು ಹೇಳಿದೆ.
ದರ್ಶನ್ ಗನ್ ಎಲ್ಲಿ ಇಟ್ಟಿರುತ್ತಾರೆ?:
ನಂತರ ಹೋಗಿದ್ದ ಜಾಗದ ಬಗ್ಗೆ ಕೇಳಿದ್ದ ಲಕ್ಷ್ಮಣ್ಗೆ, ನಾವು ನೋಡಿದ ಸ್ಥಳದಲ್ಲಿ ಮೃತದೇಹವನ್ನು ತೆಗೆದುಕೊಂಡು ಬಂದು ಹಾಕೋಣ (dispose) ಎಂದು ಹೇಳಿದೆ. ಆ ಮೃತದೇಹವನ್ನು ಬಿಸಾಕಿದ (dispose) ನಂತರ ಹೇಗೂ ಮೂವರು ಸರೆಂಡರ್ ಆಗಲು ಒಪ್ಪಿದ್ದಾರೆ. ದರ್ಶನ್ ಅವರು ಕೊಟ್ಟ ಹಣದಿಂದ ಕೇಸನ್ನು ಮುಚ್ಚಿ ಹಾಕಬಹುದು ಎಂದು ಲಕ್ಷ್ಮಣ್ಗೆ ಹೇಳಿದೆ. ಹಾಗೆ ಮಾತನಾಡುತ್ತಾ ದರ್ಶನ್ ಅವರು ಗನ್ ಅನ್ನು ಎಲ್ಲಿ ಇಟ್ಟಿರುತ್ತಾರೆ ಎಂದು ಲಕ್ಷ್ಮಣ್ ಕೇಳಿದೆ. ಲಕ್ಷ್ಮಣ್ ಏತಕ್ಕೆ ಎಂದರು. ಇಲ್ಲ ಸುಮ್ಮನೆ ಕೇಳಿದೆ ಎಂದೆ. ಅದಕ್ಕೆ ಅವರು ದರ್ಶನ್ ಅವರ ಗನ್ಅನ್ನು ಕಾರಿನಲ್ಲಿ ಸೇಫ್ ಆಗಿ ಇಟ್ಟಿದ್ದೇನೆ ಎಂದರು.
ಮತ್ತೆ ಪಟ್ಟಣಗೆರೆ ಶೆಡ್ ಗೆ ಎಂಟ್ರಿ: ನಂತರ ನಾವು ಪಟ್ಟಣಗೆರೆ ಶೆಡ್ಗೆ ಹೋದೆವು. ಅಲ್ಲಿ ನಾಗರಾಜ್, ವಿನಯ್, ದೀಪಕ್, ರಾಘವೇಂದ್ರ, ಪವನ್, ಅನುಕುಮಾರ್, ಜಗದೀಶ್, ರವಿ ಇದ್ದರು. ನಾವು ತೆಗೆದುಕೊಂಡು ಹೋಗಿದ್ದ ವಿನಯ್ ಅವರ ಕಾರನ್ನು ಒಳಗೆ ಹೋಗಿ ನಿಲ್ಲಿಸಿದ ನಂತರ, ದೀಪಕ್, ವಿನಯ್ ಮತ್ತು ನಾಗರಾಜ್ ಅವರನ್ನು ಪಕ್ಕಕ್ಕೆ ಕರೆದು, ನಾನು ಮತ್ತು ಲಕ್ಷ್ಮಣ್ ಮಾಗಡಿ ರಸ್ತೆಯಲ್ಲಿ ಒಂದು ಜಾಗವನ್ನು ನೋಡಿಕೊಂಡು ಬಂದಿದ್ದೇವೆ. ಅದು Sattva Apartment ಹತ್ತಿರ ಇದ್ದು, ಅಲ್ಲಿ ಮೃತ ದೇಹವನ್ನು ಬಿಸಾಕಬಹುದು (dispose) ಎಂದು ತಿಳಿಸಿದೆ. ಅದಕ್ಕೆ ವಿನಯ್ ಕ್ಯಾಮೆರಾಗಳು ಇರುತ್ತವೆ ಎಂದರು. ಅದಕ್ಕೆ ನಾನು ಅಪಾರ್ಟ್ ಮೆಂಟ್ ಮುಂದೆ ಮಾತ್ರ ಒಂದು ಕ್ಯಾಮೆರಾ ಇದೆ. ಅದರ ಹಿಂದೆ ಯಾವುದೇ ಬೆಳಕಿಲ್ಲ. ಸಂಪೂರ್ಣ ಕತ್ತಲಿನಿಂದ ಕೂಡಿದ ನಿರ್ಜನ ಪ್ರದೇಶವಾಗಿದೆ ಎಂದು ಹೇಳಿದೆ. ಅದಕ್ಕೆ ವಿನಯ್ ‘ಹಾಗೇ ಮಾಡೋಣ, ನನ್ನ ಶೆಡ್ ಹೆಸರು ಮಾತ್ರ ಬರಬಾರದು’ ಎಂದರು. ಈ ವೇಳೆ ವಿನಯ್, “ಏನ್ ಸರ್ ಬಾಸ್ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಾರೆ’ ಅಂತ ನನಗೆ ಕೇಳಿದರು. ಆಗ ನಾನು ಏನು ಆಗಲ್ಲ ಸರ್, ಈಗ ಸಮಸ್ಯೆ ಪರಿಹಾರವಾಗುತ್ತದೆ
ಸದರಿ ಸ್ಥಳ, ಮಾಗಡಿ ರೋಡ್ ಹತ್ತಿರ ಇರುವ ಕಾರಣ, ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ
ಯಾರಾದರು ಗೊತ್ತೆ ಎಂದು ಕೇಳಿದಾಗ, ಅವರು ವಿಚಾರಿಸೋಣ ಬಿಡಿ ಎಂದು ಹೇಳಿದರು.
ಸರೆಂಡರ್ ಗೆ ಪರಿಚಯದ ಇಬ್ಬರು ಹುಡುಗರನ್ನು ಶೆಡ್ಗೆ ಕರೆಸಿದ ದೀಪಕ್: ಆ ಸಮಯದಲ್ಲಿ ದೀಪಕ್ ತಮಗೆ ಪರಿಚಯ ಇದ್ದ ಇಬ್ಬರು ಹುಡುಗರನ್ನು ಶೆಡ್ಗೆ ಕರೆಸಿದರು. (15ನೇ ಆರೋಪಿ ಕಾರ್ತಿಕ್, 17ನೇ ಆರೋಪಿ ನಿಖಿಲ್ ನಾಯ್ಕ) ಆ ಇಬ್ಬರು ಹುಡುಗರು ಯಾರು ಎಂದು ನನಗೆ ಆಗ ಪರಿಚಯ ಇರಲಿಲ್ಲ. ಆ ಇಬ್ಬರು ಹುಡುಗರು ಶೆಡ್ ಒಳಗಡೆ ಬರದೆ ಹೊರಗಡೆ ನಿಂತಿದ್ದರು. ಆ ಹುಡುಗರು ನಿಂತಿದ್ದ ಸ್ಥಳಕ್ಕೆ ನಾನು, ದೀಪಕ್, ನಾಗರಾಜ್ ಮತ್ತು ವಿನಯ್ ಹೋದೆವು. ಆಗ ದೀಪಕ್ ಇಬ್ಬರು ಹುಡುಗರ ಜೊತೆ ಮಾತನಾಡಿ, ಇಲ್ಲಿ ಆಕಸ್ಮಿಕವಾಗಿ ಒಬ್ಬ ವ್ಯಕ್ತಿ ಸತ್ತುಹೋಗಿದ್ದಾನೆ ಎಂದರು. ಅದಕ್ಕೆ ಆ ಹುಡುಗರು ಏನಾಗಿದೆ ಎಂದು ಕೇಳಿದಾಗ, ದೀಪಕ್ ‘ಒಂದು ಸಣ್ಣ ಹಣಕಾಸಿನ ವ್ಯವಹಾರಕ್ಕಾಗಿ ವಿವಾದವಾಗಿ ಈಗಾಗಿದೆ. ಘಟನೆಯಲ್ಲಿ ಇದ್ದ ಒಬ್ಬ ವ್ಯಕ್ತಿಯೂ ಕೂಡ ನಿಮ್ಮೊಂದಿಗೆ ಬರುತ್ತಾನೆ, ಮೂವರು ಸೇರಿ ಸರೆಂಡರ್ ಆಗಿ ನಿಮ್ಮ ಮನೆಗೆ ಹಣ ತಲುಪಿಸುತ್ತೇವೆ, ಪೊಲೀಸ್ ಠಾಣೆಯಲ್ಲಿ ಹೊಡೆಯದೇ ಇರುವ ಹಾಗೆ ನೋಡಿಕೊಳ್ಳುತ್ತೇವೆ. ಹಾಗೆಯೇ ನಿಮಗೆ ಬೇಲ್ ಮಾಡಿಸುತ್ತೇವೆ, ತಲೆ ಕೆಡಿಸಿಕೊಳ್ಳಬೇಡಿ’ ಎಂದು ಹೇಳಿದರು.
ಠಾಣೆಗೆ ಹೋದಾಗ ಏನು ಅಂತ ಹೇಳಿ ಸರೆಂಡ ಆಗಬೇಕು?:
ಆಗ ನಾಗರಾಜ್, ರಾಘವೇಂದ್ರನನ್ನು ಬಾ ಇಲ್ಲಿ ಎಂದು ಕರೆದು, ಆ ಇಬ್ಬರು ಹುಡುಗರನ್ನು ರಾಘವೇಂದ್ರನಿಗೆ ಪರಿಚಯ ಮಾಡಿಸಿ, ನೀವು ಮೂರು
ಎಂದು ಹೇಳಿದೆ. ಜನ ಸರೆಂಡರ್ ಆಗ ಬೇಕು ಎಂದು ಹೇಳಿದರು. ಆಗ ನಂತರ ನಾನು ವಿನಯ್ಗೆ ಹೆಣ ಹಾಕಬೇಕೆಂದಿರುವ ಕಾರ್ತಿಕ್ ಎಂಬ ಹುಡುಗ ‘ನಾವು ಠಾಣೆಗೆ ಹೋದಾಗ ಕಾರ್ತಿಕ್ ಎಂಬ ಹುಡುಗ ‘ನಾವು ಠಾಣೆಗೆ ಹೋದಾಗ ಏನು ಅಂತ ಹೇಳಿ ಸರೆಂಡರ್ ಆಗಬೇಕು’ ಎಂದು ನಾಗರಾಜ್ ಅವರನ್ನು ಕೇಳಿದ. ಅದಕ್ಕೆ ನಾಗರಾಜ್, ‘ಸತ್ತುಹೋದ ವ್ಯಕ್ತಿ ರಾಘವೇಂದ್ರನಿಗೆ 5 ಲಕ್ಷ ರೂಪಾಯಿ ಸಾಲ ವಾಪಸ್ ಕೊಡಬೇಕಿತ್ತು. ಅದಕ್ಕೆ ಆತ ಬೆಂಗಳೂರಿಗೆ ಕರೆದುಕೊಂಡು ಹೋದರೆ ಅಲ್ಲಿ ನಾನು ಹಣವನ್ನು ಕೊಡುತ್ತೇನೆ ಎಂದು ರಾಘವೇಂದ್ರನಿಗೆ ಹೇಳಿದ್ದ. ಅದರಂತೆ ಆ ವ್ಯಕ್ತಿ ರಾಘವೇಂದ್ರ ಅವರೊಂದಿಗೆ ಚಿತ್ರದುರ್ಗದಿಂದ ಬೆಂಗಳೂರಿಗೆ ಬೆಳಿಗ್ಗೆಯಿಂದ
ಬಂದು ಮಧ್ಯಾಹ್ನದವರೆಗೂ ಸುತ್ತಾಡಿಸಿ, ಆನಂತರ ದುಡ್ಡು ಇಲ್ಲ ಎಂದು ಹೇಳಿದಾಗ, ರಾಘವೇಂದ್ರನಿಗೆ ಕೋಪ ಬಂದು ನಿಮ್ಮಿಬ್ಬರನ್ನು ಕರೆಸಿ ಹೊಡೆದಾಗ, ಆ ವ್ಯಕ್ತಿ ಸತ್ತು ಹೋಗಿದ್ದಾನೆಂದು ಹೇಳಿ’ ಎಂದು ನಾಗರಾಜ್ ಅವರು ಕಾರ್ತಿಕ್ಗೆ ಹೇಳಿಕೊಟ್ಟರು. ಆಗ ಆಯ್ತು ಎಂದು ರಾಘವೇಂದ್ರ, ಕಾರ್ತಿಕ್ ಮತ್ತು ನಿಖಿಲ್ ನಾಯ್ಕ ಒಪ್ಪಿಕೊಂಡರು.
ನನಗೆ ದೆವ್ವದ ಭಯ ಎಂದ ಕ್ಯಾಬ್ ಡ್ರೈವರ್: ನಂತರ ಕಾರ್ತಿಕ್, ‘ನನಗೆ ಠಾಣೆಯಲ್ಲಿ ಹೊಡೆಯಬಾರದು ಅಷ್ಟೆ’ ಎಂದ. ಅದಕ್ಕೆ ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡ, ಅದಕ್ಕೆ ನಾವು ಗ್ಯಾರಂಟಿ ಎಂದು ಹೇಳಿದೆ. ನಂತರ ಕಾರ್ತಿಕ್ ಮತ್ತು ನಿಖಿಲ್ ನಾಯ್ಕ ಅವರನ್ನು ಡ್ರಾಪ್ ಮಾಡಲು ಬಂದಿದ್ದ ಹುಡುಗನ ಕೈಗೆ ದೀಪಕ್ ಸ್ವಲ್ಪ ಹಣವನ್ನು ಕೊಟ್ಟು ಕಳುಹಿಸಿದರು. ಅದೆಷ್ಟು ಹಣ ಎಂದು ನನಗೆ ಗೊತ್ತಾಗಲಿಲ್ಲ. ನಂತರ ನಾವೆಲ್ಲರೂ, ಗೇಟ್ ಒಳಗಡೆ ಬಂದೆವು. ಆದರೆ ಕಾರ್ತಿಕ್ ಮತ್ತು ನಿಖಿಲ್ ನಾಯ್ಕ ಗೇಟ್ನ ಆಚೆಯೇ ನಿಂತಿದ್ದರು. ಚಿತ್ರದುರ್ಗದಿಂದ ಬಂದಿದ್ದ ಜಗದೀಶ್, ಅನುಕುಮಾರ್ ಮತ್ತು ರವಿ ಅವರನ್ನು ಉದ್ದೇಶಿಸಿ ಈ ಹೆಣವನ್ನು ನಿಮ್ಮ ವಾಹನದಲ್ಲಿ ಹಾಕಿಕೊಳ್ಳಿ; ಒಂದು ಜಾಗವನ್ನು ಹೇಳುತ್ತೇನೆ, ಅಲ್ಲಿ ಡೆಡ್ ಬಾಡಿಯನ್ನು ಬಿಸಾಕಿ (dispose) ನೀವು ಊರಿಗೆ ಹೊರಡಿ, ರಾಘವೇಂದ್ರ ಮತ್ತು ಇನ್ನಿಬ್ಬರು ಹುಡುಗರು ಸರೆಂಡರ್ ಆಗುತ್ತಾರೆ ಎಂದು ತಿಳಿಸಿದೆ. ಆಗ ಕ್ಯಾಬ್ ಡ್ರೈವರ್ ಆದ ರವಿ, ಇದಕ್ಕೆ ನಾನು ಒಪ್ಪುವುದಿಲ್ಲ, ನನಗೆ ದೆವ್ವದ ಭಯ ಇದೆ ಎಂದನು.
ದರ್ಶನ್ ಜೊತೆ ಫೋಟೋ ತೆಗೆಸುತ್ತೇನೆಂದು ಕರೆಸಿ ಈ ರೀತಿ ಮಾಡುವುದು ಸರಿಯೇ?:
ಜಗದೀಶ್ ಎಂಬಾತ, ‘ರಾಘವೇಂದ್ರ ಅವರು ದರ್ಶನ್ ಅವರೊಂದಿಗೆ ಫೊಟೋ ತೆಗೆಸುತ್ತೇನೆ ಎಂದು ಹೇಳಿ ನಮ್ಮನ್ನು ಚಿತ್ರದುರ್ಗದಿಂದ ಕರೆದುಕೊಂಡು ಬಂದಿದ್ದು, ಈಗ ನೀವು ನಮಗೆ ಇದನ್ನೆಲ್ಲಾ ಮಾಡಿ ಎಂದು ಹೇಳುವುದು ಸರಿಯೇ?’ ಎಂದು ಕೇಳಿದನು. ಆಗ ಪಕ್ಕದಲ್ಲಿ ಇದ್ದ ನಾಗರಾಜ್, ‘ಸರಿ ನೀವೇನು ಮಾಡುವುದು ಬೇಡ, ನೀವು ಚಿತ್ರದುರ್ಗಕ್ಕೆ ಹೊರಟುಬಿಡಿ’ ಎಂದರಲ್ಲದೆ, ತಮ್ಮ ಬಿಳಿ ಬಣ್ಣದ ಸ್ಕಾರ್ಪಿಯೋ (KA03-MU8821) ಹೆಣವನ್ನು ಹಾಕಿಕೊಂಡು dispose ಮಾಡಲು ಹೋಗೋಣ ಎಂದು ತಿಳಿಸಿದರಲ್ಲದೆ, ಅದರಂತೆ ತಮ್ಮ ಸ್ಥಾರ್ಪಿಯೋ ಕಾರಿನ ಹಿಂದಿನ ಡೋರ್ ತೆರೆದರು. ಗಾಡಿಯ ಒಳಗಡೆ ಕ್ರಿಕೆಟ್ ಬ್ಯಾಟು, ಹೂವಿನ ಹಾರ, ಇನ್ನು ಬೇರೆ ಬೇರೆ ವಸ್ತುಗಳು ಹಾಗೂ ಲಗೇಜ್ ಇತ್ತು. ಜೊತೆಗೆ ಕುರಿಯ ವಾಸನೆ ಬರುತ್ತಿತ್ತು.
ಗಾಡಿಯ ನಂಬರ್ ಪ್ಲೇಟ್, ಈ BOSS ಸ್ಟಿಕ್ಟರ್ ಮುಚ್ಚಲು ಪ್ಲಾನ್:
ನಂತರ ನಾಗರಾಜ್ ಅವರು, ‘ನನ್ನ ವಾಹನವನ್ನು ಉಪಯೋಗಿಸಿಕೊಳ್ಳಿ. ಆದರೆ ಗಾಡಿಯ ನಂಬರ್ ಪ್ಲೇಟ್ ಹಾಗೂ ಗಾಡಿಯ ಹಿಂದೆ D BOSS ಎಂದು ಬರೆದಿರುವುದನ್ನು ಮುಚ್ಚಬೇಕು ಅಥವಾ ತೆಗೆದುಹಾಕಬೇಕು. ಈ ಗಾಡಿಯು The Companyಯ ಪುನಿ (ಪುನೀತ್ ಚಾ.ಸಾ.71) ಅವರದು. ಈ ಗಾಡಿಯನ್ನು ನಾನು ಮೈಸೂರಿನ ತೋಟಕ್ಕೆ ಕುರಿಗಳನ್ನು ತರಲು ಪಡೆದಿದ್ದೆ. ಈಗ ಈ ಗಾಡಿಯನ್ನು ಈ ರೀತಿ ಉಪಯೋಗ ಮಾಡಿಕೊಂಡಿ ದ್ದೇನೆ ಎಂದು ತಿಳಿದರೆ, ಅವರು ಬೇಜಾರು ಮಾಡಿಕೊಳ್ಳುತ್ತಾರೆ’ ಎಂದರು.
ಅದೇ ಸಮಯಕ್ಕೆ ದೀಪಕ್, ರವಿ ಮತ್ತು ನಾಗರಾಜ್ ಮೂವರು ಸೇರಿ ಸ್ಥಾರ್ಪಿಯೋ ಹಿಂದೆ ಮತ್ತು ಮುಂದೆ ಇರುವ ನಂಬರ್ ಪ್ಲೇಟ್ಗಳನ್ನು ತೆಗೆದುಹಾಕಿದರು. ಗಾಡಿಯ ಹಿಂದೆ ಇದ್ದ D-BOSS ಎಂಬ ಸ್ಟಿಕ್ಟರ್ಗೆ ನಾನು ಪೇಪರ್ ಅಂಟಿಸಿ ಕವರ್ ಮಾಡಿದೆ. ಅಷ್ಟರಲ್ಲಿ ನನ್ನ ಸ್ನೇಹಿತ ಕಾರ್ತಿಕ್ (ಚಾ.ಸಾ.108) ನನಗೆ ಕರೆ ಮಾಡಿ, ನನ್ನ ಕಾರನ್ನು ನಾಯಂಡಹಳ್ಳಿ ಹತ್ತಿರ ತಂದು ನಿಲ್ಲಿಸಿದ್ದೇನೆ ಎಂದು ತಿಳಿಸಿದ. ಅದಕ್ಕೆ ನಾನು ನೀವು ರೆಸ್ಟ್ ಮಾಡುತ್ತಿರಿ, ಬರುತ್ತೇನೆ ಎಂದು ಹೇಳಿ ಕರೆ ಕಟ್ ಮಾಡಿದೆ. ಅಷ್ಟರೊಳಗೆ ಈ ಗಾಡಿಯ ಎರಡು ನಂಬರ್ ಪ್ಲೇಟ್ಗಳನ್ನು ತೆಗೆದು, ಅದರ ಮೇಲೆ ಇದ್ದ D-BOSS ಸ್ಟಿಕ್ಟರ್ ಮೇಲೆ ಪೇಪರ್ ಮುಚ್ಚಿ ರೆಡಿಯಾಯಿತು. ಆಮೇಲೆ ಹೆಣವನ್ನು ತಂದು ಹಾಕಿ ಎಂದು ಹೇಳಿದೆ. ಆಗ ಗೇಟ್ ಬಳಿ ಇದ್ದ ಗಾಡಿಯನ್ನು ರೇಣುಕಾಸ್ವಾಮಿಯ ಮೃತದೇಹ ಇದ್ದ ಪಟ್ಟಣಗೆರೆ ಶೆಡ್ ಒಳಗಡೆ ಇರುವ ಮನೆ ಹತ್ತಿರ ತೆಗೆದುಕೊಂಡು ಹೋಗಲು ಯಾರೂ ಸಿದ್ಧರಿರಲಿಲ್ಲ. (ಮುಂದುವರಿಯುತ್ತದೆ)





