Mysore
30
overcast clouds

Social Media

ಬುಧವಾರ, 14 ಅಕ್ಟೋಬರ್ 2026
Light
Dark

ರೇಣುಕಾಸ್ವಾಮಿಗೆ ಕುಟುಕು ಜೀವ; ದರ್ಶನ್ ರೋಷ ಭಾವ

ರೇಣುಕಾಸ್ವಾಮಿ ಕತ್ತಿನ ಮೇಲೆ ಕಾಲಿಟ್ಟು ಅದುಮುತ್ತಿದ್ದ ದರ್ಶನ್

ತನ್ನ ಕೈಯಲ್ಲಿದ್ದ ಸಿಗರೇಟ್‌ನಿಂದ ರೇಣುಕಾಸ್ವಾಮಿಯ ಎದೆಯ ಭಾಗಕ್ಕೆ ಸುಟ್ಟರು 

” ನಾನು ರಾಘವೇಂದ್ರ ಅವರನ್ನು ರೇಣುಕಾಸ್ವಾಮಿಯನ್ನು ಏಕೆ ಚಿತ್ರದುರ್ಗದಿಂದ ಕರೆದುಕೊಂಡು ಬಂದಿದ್ದೀರಿ ಎಂದು ಕೇಳಿದಾಗ, ಪವನ್ ಹೇಳಿದ್ದಕ್ಕೆ ಕರೆದುಕೊಂಡು ಬಂದೆ ಎಂದರು. ಆಗ ನಾನು ರೇಣುಕಾಸ್ವಾಮಿಗೆ ಏನಾದರೂ ಹೆಚ್ಚುಕಮ್ಮಿಯಾದರೆ ನಿನ್ನ ತಲೆಗೆ ಬರುತ್ತದೆ ಎಂದು ರಾಘವೇಂದ್ರರವರಿಗೆ ಹೇಳಿದಾಗ, ರಾಘವೇಂದ್ರ, ದರ್ಶನ್ ಬಳಿ ಹೋಗಿ ಬಾಸ್ ಈತನನ್ನು ಬಿಟ್ಟು ಬಿಡಿ ನಾವು ಊರಿಗೆ ಕರೆದುಕೊಂಡು ಹೋಗುತ್ತೇವೆ ಎಂದರು. ಆಗ ದರ್ಶನ್ … ಮಗನೆ ಈಗ ನೀನು ಇಲ್ಲಿಂದ ಹೋಗದಿದ್ದರೆ, ಆತನಿಗೆ ಬೀಳುವ ಏಟು ನಿನಗೆ ಬೀಳುತ್ತದೆ ಎಂದು ರಾಘವೇಂದ್ರರನ್ನು ಗದರಿದ್ದರು.”

ಕಾಫಿಯ ಜೊತೆಗೆ ಸಿಗರೇಟ್ ಸೇದುತ್ತಿದ್ದ ದರ್ಶನ್ ದಿಢೀರನೆ ಬಂದು ಊಟ ಮಾಡುತ್ತಿದ್ದರೇಣುಕಾಸ್ವಾಮಿಗೆ ಒದ್ದರು. ಆಗ ಆತ ಕೆಳಗೆ ಬಿದ್ದನು. ಬಿದ್ದ ತಕ್ಷಣ ದರ್ಶನ್ ಆತನ ಮರ್ಮಾಂಗಕ್ಕೆ ಎರಡು ಬಾರಿ ಒದ್ದರು. ಬಿದ್ದ ರೇಣುಕಾಸ್ವಾಮಿಯ ಎದೆಯ ಮೇಲೆ ದರ್ಶನ್ ತನ್ನ ಎರಡು ಕಾಲುಗಳನ್ನು ಇಟ್ಟುಕೊಂಡು ನಿಂತುಕೊಂಡು ಅದುಮುತ್ತಿದ್ದರು. ಆಗ ನಾನು ದರ್ಶನ್‌ರನು ಎಳೆದುಕೊಳ್ಳಲು ಪ್ರಯತ್ನ ಮಾಡಿದೆ, ಆಗಲಿಲ್ಲ. ನಂತರ ನನ್ನ ಕೈಯಲ್ಲಿದ್ದ ರೇಣುಕಾಸ್ವಾಮಿಯ ಮೊಬೈಲ್‌ಅನ್ನು ಪವನ್ ಕೈಗೆ ಕೊಟ್ಟು, ದರ್ಶನ್‌ರನ್ನು ತಳ್ಳಲು ಪ್ರಯತ್ನ ಮಾಡಿದೆ. ಆಗ ದರ್ಶನ್ ಆಯತಪ್ಪಿ ಕೆಳಗೆ ಇಳಿದರು. ನಂತರ ನೆಲದ ಮೇಲೆ ಬಿದ್ದಿದ್ದ ರೇಣುಕಾಸ್ವಾಮಿ ಕತ್ತಿನ ಮೇಲೆ ದರ್ಶನ್ ತನ್ನ ಕಾಲನ್ನು ಇಟ್ಟು ಅದುಮಿದರು. ಈ ವೇಳೆ ನಾನು ದರ್ಶನ್ ಕಾಲು ಹಿಡಿದುಕೊಂಡು ಬೇಡ ಬನ್ನಿ ಎಂದು ಎಳೆದುಕೊಂಡೆ. ಅಷ್ಟರಲ್ಲಿ ದರ್ಶನ್ ಕೈಯಲ್ಲಿದ್ದ ಸಿಗರೇಟ್‌ನಿಂದ ರೇಣುಕಾಸ್ವಾಮಿಯ ಎದೆಯ ಭಾಗಕ್ಕೆ ತಾಗಿಸಿ ಸುಟ್ಟರು. ಆಗ ವಿನಯ್ ಮತ್ತು ನಾಗರಾಜ್ ಅಲ್ಲಿಗೆ ಬಂದು ದರ್ಶನ್‌ರನ್ನು ಆಚೆಗೆ
ಕರೆದುಕೊಂಡು ಹೋದರು.

ರೇಣುಕಾಸ್ವಾಮಿಯ ಕತ್ತು ಸಂಪೂರ್ಣವಾಗಿ ಜೋತು ಬಿದ್ದಿತ್ತು: 
ನಾನು ಮತ್ತು ನನ್ನೊಂದಿಗೆ ಇನ್ನೊಬ್ಬ ವ್ಯಕ್ತಿ ಸೇರಿಕೊಂಡು ಬಿದ್ದಿದ್ದ ರೇಣುಕಾಸ್ವಾಮಿಯನ್ನು ಎಬ್ಬಿಸಿ ಕೂರಿಸಿದೆವು. (ಆ ಸಮಯದಲ್ಲಿ ನನ್ನೊಂದಿಗೆ ಇದ್ದ ಇನ್ನೊಬ್ಬ ವ್ಯಕ್ತಿ ಯಾರು ಎಂದು ಈಗ ನೆನಪಿಗೆ ಬರುತ್ತಿಲ್ಲ) ಕೂರಿಸಿದಾಗ, ಆತನ ಕತ್ತು ಸಂಪೂರ್ಣವಾಗಿ ಜೋತು ಬಿದ್ದಿತ್ತು. ಆತನ ಮೂಗಿನ ಹೊಳ್ಳೆಗಳಲ್ಲಿ ರಕ್ತ ಕಾಣುತ್ತಿತ್ತು. ಈ ವೇಳೆ ಆತ ಸನ್ನೆ ಮಾಡಿ ನೀರು ಬೇಕು ಎಂದು ಕೇಳಿದ. ಆಗ ನನ್ನ ಪಕ್ಕದಲ್ಲಿ ನಿಂತಿದ್ದ ಲಕ ಣ್ ಅವರಿಂದ ನೀರಿನ ಬಾಟಲ್ ಪಡೆದು ರೇಣುಕಾಸ್ವಾಮಿಗೆ ಕೊಟ್ಟೆ. ಆತ ನೀರು ಕುಡಿಯಲು ಬಾಯನ್ನು ತೆರೆದಾಗ, ಆತನ ಬಾಯಲ್ಲಿ ರಕ್ತ ಇರುವುದು ನನಗೆ ಕಂಡಿತ್ತು. ಆಗ ನಾನು ಲಕ್ಷ್ಮಣ್ ಅವರನ್ನು ಉದ್ದೇಶಿಸಿ ಈತನಿಗೆ ಒಂದು ಪೇನ್ ಕಿಲ್ಲರ್ ಟ್ಯಾಬ್ಲೆಟ್ ತರಿಸಿಕೊಡಿ ಅಣ್ಣ ಎಂದು ಹೇಳಿದಾಗ, ಅವರು ತರಿಸಿಕೊಡುತ್ತೇನೆ
ಎಂದರು.
ವಿನಯ್ ಜೀಪ್ ಹತ್ತಿ ಹೊರಟ ದರ್ಶನ್: ಅಷ್ಟು ಹೊತ್ತಿಗೆ ಮನೆಯಿಂದ ನನ್ನ ಮಗಳು ನನಗೆ ಸತತವಾಗಿ ಫೋನ್ ಕರೆ ಮಾಡುತ್ತಿದ್ದ ಕಾರಣ, ನಾನು ಮೊಬೈಲ್ ತೆಗೆದು ನೋಡಿತ್ತಿದ್ದೆ, ಅಷ್ಟರಲ್ಲಿ ವಿನಯ್ ತಮ್ಮ ಕೆಂಪು ಬಣ್ಣದ ಜೀಪ್ ಅನ್ನು ತಂದು ಅಲ್ಲಿಗೆ ನಿಲ್ಲಿಸಿದರು. ಆಗ ದರ್ಶನ ಆ ಜೀಪ್‌ನಲ್ಲಿ ಹತ್ತಿ ಕುಳಿತುಕೊಂಡರು. ನಂತರ ನಾನು ರೇಣುಕಾಸ್ವಾಮಿಯನ್ನು ಅಲ್ಲಿಯೇ ಬಿಟ್ಟು, ನನ್ನ ಕಾರಿನ ಹತ್ತಿರ ಓಡಿ ಹೋಗಿ ಕುಳಿತುಕೊಂಡಿದ್ದೆ. ನಾನು ನನ್ನ ವಾಹನವನ್ನು ತೆಗೆದುಕೊಂಡು ರೇಣುಕಾಸ್ವಾಮಿ ಕುಳಿತಿದ್ದಸ್ಥಳಕ್ಕೆ ಬರುವಷ್ಟರಲ್ಲಿ, ವಿನಯ್ ಮತ್ತು ದರ್ಶನ್ ಅಲ್ಲಿಂದ ಹೊರಟರು. ಅವರ ಜೀಪ್ ಮುಂದೆ ಹೋಗುತ್ತಿದ್ದಂತೆ, ನಾನು ಕೂಡ ನನ್ನ ಕಾರಿನಲ್ಲಿ ಅವರನ್ನು ಫಾಲೋ ಮಾಡಲು ಮುಂದಾದೆ.
ಈ ವೇಳೆ ನಂದೀಶ್ ಮತ್ತು ರಾಘವೇಂದ್ರ ಅವರು ರೇಣುಕಾಸ್ವಾಮಿಯನ್ನು ಎಬ್ಬಿಸಿ ಆತನ ಕೈಯನ್ನು ತಮ್ಮ ಭುಜದ ಮೇಲೆ ಹಾಕಿಕೊಂಡು ನಡೆಸಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾಗ, ರೇಣುಕಾಸ್ವಾಮಿ ನಡೆಯಲಾಗದೆ ತೆವಳುತ್ತಿದ್ದ.
ಗೇಟ್ ಬಳಿ ಹುಡುಗರೊಂದಿಗೆ ಫೋಟೋಗೆ ಪೋಜ್:  ನನ್ನ ಕಾರಿನಲ್ಲಿ ಗೇಟಿನ ಹತ್ತಿರ ಬಂದಾಗ, ವಿನಯ್ ಅವರ ಜೀಪ್ ಅಲ್ಲಿಯೇ ನಿಂತಿತ್ತು. ದರ್ಶನ್ ಗೇಟಿನ ಬಳಿ ನಿಂತಿಕೊಂಡು ರವಿ, ಅನುಕುಮಾರ್ ಮತ್ತು ಪುನೀತ್ ಎಂಬ ಹುಡುಗರೊಂದಿಗೆ ನಿಂತು ಫೊಟೋ ತೆಗೆಸಿಕೊಳ್ಳುತ್ತಿದ್ದರು. ಪುನೀತ್ ಫೋಟೋಗಳನ್ನು ತೆಗೆಯುತ್ತಿದ್ದ.
ನನ್ನ ಕಾರನ್ನು ವಿನಯ್ ಜೀಪಿನ ಹಿಂದೆ ನಿಲ್ಲಿಸಿದೆ. ಕಾರಿನಲ್ಲಿ ನಾನೊಬ್ಬನೇ ಇದ್ದೆ. ಆಗ ಪವನ್ ನನ್ನ ಕಾರಿನ ಬಾಗಿಲು ತೆರೆದು ನನ್ನ ಪಕ್ಕದ ಸೀಟಿನಲ್ಲಿ ಕುಳಿತುಕೊಂಡ. ವಿನಯ್ ತಮ್ಮ ಜೀಪನ್ನು ಮೂವ್ ಮಾಡಿ ಮಣ್ಣಿನ ರಸ್ತೆ ಮೂಲಕ ಹೋಗಿ ಮುಖ್ಯ ರಸ್ತೆಯ ಕಡೆಗೆ ಹೊರಟರು. ಅವರ ಹಿಂದೆ ನಾನು ಕೂಡ ನನ್ನ ಕಾರನ್ನು ಮೂವ್ ಮಾಡಿಕೊಂಡು ಹೊರಟೆನು. ಆ ಸಮಯದಲ್ಲಿ ಲಕ್ಷ್ಮಣ್ ೨೦] ಒಬ್ಬರೇ ನಡೆದುಕೊಂಡು ಬರುವುದನ್ನು ನೋಡಿದೆ.

ಪವನ್ ಕೈಯಲ್ಲಿ ರೇಣುಕಾಸ್ವಾಮಿಯ ಕರಡಿಕೆ: ಹಾಗೆಯೇ ಮುಂದೆ ಹೋಗುವಾಗ, ನನ್ನ ಪಕ್ಕದಲ್ಲಿ ಕುಳಿತಿದ್ದ ಪವನ್ ಕೈಯಲ್ಲಿ ಎರಡುಮೊಬೈಲ್‌ಗಳು ಇದ್ದವು. ಒಂದು ಆತನದಾಗಿದ್ದು, ಇನ್ನೊಂದು ರೇಣುಕಾಸ್ವಾಮಿಯ ಮೊಬೈಲ್ ಆಗಿತ್ತು. ರೇಣುಕಾಸ್ವಾಮಿಯ ಮೊಬೈಲ್ ಜೊತೆಗೆ ಕರಿಯ ದಾರದಲ್ಲಿ ಪೋಣಿಸಿದ್ದ ಬೆಳ್ಳಿಯ ಕರಡಿಕೆ ಇತ್ತು. ಅದು ಲಿಂಗಾಯತರು ಕತ್ತಿಗೆ ಕಟ್ಟಿಕೊಳ್ಳುವಂತಹ ವಸ್ತು ಆಗಿತ್ತು. ನಾನು ಪವನ್‌ಗೆ ಇದು ಏನು ಎಂದು ಕೇಳಿದಾಗ, ಪವನ್ ಇದು ರೇಣುಕಾಸ್ವಾಮಿಯ ಕತ್ತಿನಲ್ಲಿ ಇತ್ತು. ಬೆಳಿಗ್ಗೆ ಹೊಡೆಯುವಾಗ, ನಾನು ಆತನ ಕತ್ತಿನಿಂದ ಕಿತ್ತಿಕೊಂಡಿದ್ದೆ ಎಂದನು. ಆಗ ನಾನು ಆತನಿಗೆ ನಿನಗೆ ಮಾಡಲು ಬೇರೆ ಕೆಲಸ ಇಲ್ಲವಾ, ಇದನ್ನೆಲ್ಲಾ ಏಕೆ ಮಾಡುತ್ತಿದ್ದೀಯಾ ಎಂದು ಕೇಳಿದೆ.

ನಿನ್ನ ಮರ್ಮಾಂಗದ ಫೋಟೋ ನನಗೆ ಇಷ್ಟ ಆಗಿದೆ!!: ನಂತರ ಪವನ್ ಮುಂದುವರಿದು ಮಾತನಾಡುತ್ತಾ ‘ಈತ ತನ್ನ ಇನ್‌ಸ್ಟಾಗ್ರಾಂ ಐಡಿ ಮೂಲಕ ಮೆಸೇಜ್‌ಗಳನ್ನು ಅಕ್ಕನಿಗೆ(ಪವಿತ್ರಾ ಗೌಡ) ಕಳುಹಿಸುತ್ತಾ ಇದ್ದ ಕಾರಣ, ಅಕ್ಕನ ಇನ್‌ಸ್ಟಾಗ್ರಾಂ ಐಡಿಯಿಂದ ನನ್ನ ಮೊಬೈಲ್ ನಂಬರ್ ಹಾಕಿ ರೇಣುಕಾಸ್ವಾಮಿಗೆ ಕಳುಹಿಸಿದ್ದೆ. ಅದಕ್ಕೆ ರೇಣುಕಾಸ್ವಾಮಿ ನನ್ನ ಮೊಬೈಲ್ ನಂಬರ್ ಅನ್ನು ಪವಿತ್ರಾ ಗೌಡರ ಮೊಬೈಲ್ ನಂಬರ್ ಎಂದು ತಿಳಿದುಕೊಂಡು ನನ್ನ ನಂಬರ್‌ನೊಂದಿಗೆ ಚಾಟ್ ಮಾಡುತ್ತಿದ್ದ. ತನ್ನ ಮರ್ಮಾಂಗದ ಫೋಟೋಗಳು, ಕಾಂಡಮ್ ಫೋಟೋ ಮತ್ತು ಸೆಕ್ಸ್ ವಿಡಿಯೋಗಳನ್ನು ಕಳುಹಿಸಿದ್ದ. ಈ ಕಡೆಯಿಂದ ಆತನಿಗೆ ಪ್ರತಿಕ್ರಿಯೆ ನೀಡುತ್ತಿದ್ದ ನಾನು, ನಿನ್ನ ಮರ್ಮಾಂಗದ ಫೊಟೋ ನನಗೆ ಇಷ್ಟ ಆಗಿದೆ, ನಿಮ್ಮನ್ನು ಮರ್ಮಾಂಗದ ಫೊಟೋ ನನಗೆ ಇಷ್ಟ ಆಗಿದೆ, ನಿಮ್ಮನ್ನು ನೇರವಾಗಿ ಭೇಟಿ ಮಾಡುತ್ತೇನೆ. ನೀನು ಎಲ್ಲಿ ಇರುವುದು ಎಂದು ಮೆಸೇಜ್ ಮಾಡಿದೆ. ಅದಕ್ಕೆ ರೇಣುಕಾಸ್ವಾಮಿ ತಾನು ಜಿಗಣಿಯಲ್ಲಿ ಇರುವುದಾಗಿ ಮೆಸೇಜ್ ಮಾಡಿದ್ದ ಎಂದು ಪವನ್ ತಿಳಿಸಿದ.

ಜಿಗಣಿಯಲ್ಲಿ ಇದ್ದೇನೆಂದು ರೇಣುಕಾಸ್ವಾಮಿಯ ಸುಳ್ಳು ಮೆಸೇಜ್: 
ಮುಂದುವರಿದು ಮಾತನಾಡಿದ ಪವನ್, ‘ನಂತರ ನಮಗೆ ಗೊತ್ತಿದ್ದ ಜಿಗಣಿಯ ಹತ್ತಿರ ವಾಸವಾಗಿದ್ದ ತೌಸಿಫ್ ಎಂಬವರಿಗೆ ರೇಣುಕಾಸ್ವಾಮಿಯ ಬಗ್ಗೆ ವಿಚಾರಿಸಿದ್ದೆ. ಆದರೆ ತೌಸಿಫ್‌ಗೆ ರೇಣುಕಾಸ್ವಾಮಿಯನ್ನು ಹುಡುಕಲು ಆಗಲಿಲ್ಲ. ರೇಣುಕಾಸ್ವಾಮಿ ತನ್ನ ನಿಜವಾದ ವಿಳಾಸ ತಿಳಿಸಿರಲಿಲ್ಲ ಎಂದು ಗೊತ್ತಾಯಿತು. ನಾನು ಮತ್ತೆ ರೇಣುಕಾಸ್ವಾಮಿಗೆ ನೀನು ಇರುವುದು ಎಲ್ಲಿ ಎಂದು ಹೇಳು, ನಾನು ನಿನ್ನನ್ನು ಭೇಟಿಯಾಗಬೇಕು ಎಂದು ಮೆಸೇಜ್ ಮಾಡಿದೆ. ಆಗ ರೇಣುಕಾಸ್ವಾಮಿ ಜಿಗಣಿಯಲ್ಲಿ ವಾಸವಾಗಿಲ್ಲ ಎಂದು ಸುಳ್ಳು ಹೇಳುತ್ತಿದ್ದಾನೆ ಎಂದು ಗೊತ್ತಾಯಿತು.

ಚಿತ್ರದುರ್ಗದಲ್ಲಿರುವುದನ್ನು ಬಹಿರಂಗಪಡಿಸಿದ ರೇಣುಕಾಸ್ವಾಮಿ: 
ನಂತರ ಏರ್‌ಟೆಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸ್ನೇಹಿತನಿಗೆ ಕರೆ ಮಾಡಿ ರೇಣುಕಾಸ್ವಾಮಿಯ ಮೊಬೈಲ್ ನಂಬರ್ ಕೊಟ್ಟು, ಈತ ಎಲ್ಲಿ ಇದ್ದಾನೆ ಎಂದು ತಿಳಿದುಕೊ ಎಂದು ಹೇಳಿದೆ. ಅಷ್ಟರಲ್ಲಿಯೇ ರೇಣುಕಾಸ್ವಾಮಿ ತನ್ನ ಲೈವ್ ಲೊಕೋಷನ್ ಮತ್ತು ತಮ್ಮ ಮನೆಯ ಕೆಲವೊಂದು ಫೋಟೋಗಳನ್ನು ನನ್ನ ಮೊಬೈಲ್ ಗೆ ಕಳಿಸಿದ್ದ. ಆಗ ಆತ ಚಿತ್ರದುರ್ಗದಲ್ಲಿ ವಾಸವಾಗಿದ್ದಾನೆ ಎಂದು ಗೊತ್ತಾಯಿತು. ನಂತರ ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಅವರನ್ನು ಸಂಪರ್ಕಿಸಿ, ರೇಣುಕಾಸ್ವಾಮಿಯನ್ನು ಎತ್ತಾಕಿಕೊಂಡು ಬರಬೇಕು ಎಂದು ಹೇಳಿದ್ದೆ. ಹಾಗಾಗಿಯೇ ನಾನು ಮಧ್ಯಾಹ್ನ stoney brook ರೆಸ್ಟೋರೆಂಟ್‌ಗೆ ಬಂದು ಅಣ್ಣನಿಗೆ ಇದೇ ಫೋಟೋಗಳನ್ನು ತೋರಿಸಿದ್ದೆ ಎಂದು ಹೇಳಿದ.

ಸತ್ತರೆ ಸಾಯಲಿ, 3 ತಿಂಗಳು ಜೈಲಿಗೆ ಹೋಗಿ ಬರುತ್ತೇನೆ: ಆಗ ನಾನು ಪವನ್‌ಗೆ ಇಷ್ಟೆಲ್ಲ ಮಾಡಲು ನಿನಗೆ ಹಕ್ಕು ನೀಡಿದ್ದು ಯಾರು? ನಾಗರಾಜ್ ಅಥವಾ ಲಕ್ಷ್ಮಣ್‌ ಗೆ ಈ ವಿಚಾರ ಏಕೆ ತಿಳಿಸಿಲ್ಲ? ಎಂದು ಕೇಳಿದೆ. ಅದಕ್ಕೆ ಪವನ್ ಯಾವುದೇ ಉತ್ತರ ನೀಡಲಿಲ್ಲ. ಮುಂದುವರಿದು, ರೇಣುಕಾಸ್ವಾಮಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ? ಅದಕ್ಕೆ ಪವನ್ ‘ಆತ ಸತ್ತರೆ ಸಾಯಲಿ; ನಾನು 3 ತಿಂಗಳು ಜೈಲಿಗೆ ಹೋಗಿ ಬರುತ್ತೇನೆ’ ಎಂದನಲ್ಲದೆ, ಬೆಳಿಗ್ಗೆ ಪೊಲೀಸ್ ಲಾಠಿಯಿಂದ ರೇಣುಕಾಸ್ವಾಮಿಯ ಕೈಬೆರಳುಗಳಿಗೆ ಹೊಡೆದಿದ್ದು ನಾನೇ ಎಂದು ಹೇಳಿದ.

ಪಟ್ಟಣಗೆರೆ ಜಯಣ್ಣನವರ ಮನೆಗೆ ಎಂಟ್ರಿ:  ನಾವಿಬ್ಬರು ಅಷ್ಟು ಮಾತನಾಡಿಕೊಳ್ಳುತ್ತಿರುವಾಗ, ವಿನಯ್ ಚಾಲನೆ ಮಾಡುತ್ತಿದ್ದ ಜೀಪ್ ಒಂದು ಮನೆಯ ಕಾಂಪೌಂಡ್ ಒಳಗೆ ಹೋಗಿತ್ತು. ಆಗ ನಾನು ಪವನ್‌ಗೆ ಈ ಮನೆ ಯಾರದ್ದು ಎಂದು ಕೇಳಿದೆ. ಅದಕ್ಕೆ ಪವನ್ ಇದು ಪಟ್ಟಣಗೆರೆಯ ಜಯಣ್ಣನವರ ಮನೆ ಎಂದು ಹೇಳಿದ. ವಿನಯ್ ಮತ್ತು ದರ್ಶನ್ ತಮ್ಮ ಜೀಪ್‌ನಿಂದ ಇಳಿದು ಜಯಣ್ಣನವರ ಮನೆಯ ಒಳಗಡೆ ಹೋಗಿದ್ದರು. ನಾನು ಮತ್ತು ಪವನ್ ಆ ಮನೆಯ ಹೊರಗಡೆ ಕಾಯುತ್ತಿದ್ದೆವು. 10 ನಿಮಿಷಗಳ ನಂತರ ವಿನಯ್ ಮತ್ತು ದರ್ಶನ್ ಮನೆಯಿಂದ ಹೊರಗಡೆ ಬಂದು ಜೀಪ್ ಹತ್ತಿ ಮುಂದೆ ಹೊರಟರು. ನಾನು ಕೂಡ ನನ್ನ ಕಾರಿನಲ್ಲಿ ಅವರನ್ನು ಹಿಂಬಾಲಿಸಿದೆ.
ದರ್ಶನ್ ಇದ್ದ ಜೀಪ್ ಮಿಸ್ಲಿಂಗ್:
ಆರ್.ಆರ್.ನಗರದ ರಾಜರಾಜೇಶ್ವರಿ ದೇವಸ್ಥಾನದ ಹತ್ತಿರ ಹೋದಾಗ, ವಿನಯ್ ಅವರ ಜೀಪ್ ಮಿಸ್ ಆಯಿತು; ನಾನು ಸ್ವಲ್ಪ ಮುಂದೆ ಹೋದ ನಂತರ ವಿನಯ್‌ ಕಾಲ್ ಮಾಡಿದಾಗ ಅವರು ರಿಸೀವ್ ಮಾಡಲಿಲ್ಲ. ನಂತರ ಪವನ್ ಕೂಡ ಕರೆ ಮಾಡಿದರೂ ವಿನಯ್ ರಿಸೀವ್ ಮಾಡಲಿಲ್ಲ.
ಆಗ ಪವನ್ ಅವರು ಅಕ್ಕ(ಪವಿತ್ರಗೌಡನ ಮನೆಗೆ ಹೋಗಿರುತ್ತಾರೆ. ನನಗೆ ಗೊತ್ತು, ಅಲ್ಲಿಯೇ ಹೋಗೋಣ ಎಂದ. ಅಷ್ಟರಲ್ಲಿ ವಿನಯ್ ನನಗೆ ವಾಪಸ್ ಕರೆ ಮಾಡಿದರು. ಫೋನ್ ರಿಸೀವ್ ಮಾಡಿದ ನಾನು, ಎಲ್ಲಿ ದರ್ಶನ್ ಅವರನ್ನು ಡ್ರಾಪ್ ಮಾಡುತ್ತಿದ್ದೀರ ಎಂದು ಕೇಳಿದಾಗ ಹಳೆ ಮನೆಯ ಹತ್ತಿರ ಡ್ರಾಪ್ ಮಾಡಿದೆ ಎಂದು ವಿನಯ್ ಹೇಳಿದರು. (ಹಳೆಯ ಮನೆ ಎಂದರೆ ನಂ.217, 9ನೇ ಎಫ್ ಕ್ಲಾಸ್‌ನಲ್ಲಿ ಇರುವ ದರ್ಶನ್ಮ ನೆ).
ನಂತರ ನಾನು ಕಾರನ್ನು ಮೂವ್ ಮಾಡಿ ಹಳೆಯ ಮನೆಯ ಹತ್ತಿರ ಹೋಗಿ ನಿಲ್ಲಿಸಿದೆ. ನಂತರ ಪವನ್ ಹಾಗೂ ನಾನು ಕಾರಿನಿಂದ ಇಳಿದು ದರ್ಶನ್ ಅವರ ಮನೆಯ ಒಳಗಡೆ ಹೋಗಿ ದರ್ಶನ್ ಅವರೊಂದಿಗೆ 5 ನಿಮಿಷಗಳ ಕಾಲ ಮಾತನಾಡಿ, ನಾಳೆ ಅಥವಾ ಮುಂದಿನ ವಾರ ಸಿಗುತ್ತೇನೆ ಎಂದು ಹೇಳಿ ಅಲ್ಲಿಂದ ನಮ್ಮ ಮನೆಯ ಕಡೆಗೆ ಹೊರಟೆ. ಮಾರ್ಗ ಮಧ್ಯೆ ಲಕ್ಷ್ಮಣೆಗೆ ಕರೆ ಮಾಡಿ, ಆ ಹುಡುಗನಿಗೆಪೇನ್ ಕಿಲ್ಲರ್ ಟ್ಯಾಬ್ಲೆಟ್‌ ತರಿಸಿಕೊಟ್ಟಿದ್ದೀರಾ? ಆತ ಈಗ ಹೇಗಿದ್ದಾನೆ? ಈಗ ನೀವು ಎಲ್ಲಿದ್ದೀರಾ ಎಂದು ಕೇಳಿದೆ. ಅದಕ್ಕೆ ಲಕ್ಷ್ಮಣ್ ‘ನಾನು ಆರ್.ಆರ್.ನಗರ ಗೇಟ್‌ನಿಂದ ವಾಪಸ್ಸು ಶೆಡ್ ಕಡೆಗೆ ಹೋಗುತ್ತಿದ್ದೇನೆ ಎಂದರು (ಶೆಡ್ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದು ಹಲ್ಲೆ ಮಾಡಿದ ಸ್ಥಳವಾಗಿತ್ತು. ಆಗ ನಾನು ಲಕ್ಷ್ಮಣ್‌ ಏಕೆ ಹೋಗುತ್ತಿದ್ದೀರಿ? ಏನಾಯಿತು? ಎಂದು ಕೇಳಿದೆ.
-ಮುಂದುವರಿಯುವುದು.

 

Tags:
error: Content is protected !!