Mysore
30
overcast clouds

Social Media

ಬುಧವಾರ, 14 ಅಕ್ಟೋಬರ್ 2026
Light
Dark

ಮಗನೆ, ನಾನು ಯಾರು ಎಂದು ಗೊತ್ತಾ?

ರೇಣುಕಾಸ್ವಾಮಿಗೆ ಬೈಗುಳದೊಂದಿಗೆ ಏಟು ಕೊಡುತ್ತಿದ್ದ ದರ್ಶನ್
ಕಾರಿನಿಂದ ಇಳಿಯುತ್ತಲೇ ನರಪೇತಲನಿಗೆ ಒದ್ದ ವಿನಯ್

ನಂತರ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಬನಿಯನ್ ಧರಿಸಿದ್ದ, ರಕ್ತ ಸುರಿಯುತ್ತಿದ್ದ ವ್ಯಕ್ತಿ ಕುಳಿತಿದ್ದ ಸ್ಥಳದಲ್ಲಿ ವಿನಯ್‌ ನನಗೆ ಕಾರನ್ನು ನಿಲ್ಲಿಸಲುಸೂಚಿಸಿದರು. ಅದರಂತೆ ನಾನು ಕಾರನ್ನು ಆ ವ್ಯಕ್ತಿ ಇದ್ದ ಸ್ಥಳದಲ್ಲಿ ನಿಲ್ಲಿಸಿದೆ. ವಿನಯ್ ಕಾರಿನಿಂದ ಇಳಿದವರೇ ಗಾಯಗೊಂಡಿದ್ದ ವ್ಯಕ್ತಿಗೆ ಕಾಲಿನಿಂದ ಒದ್ದರು. ಆಗ ಕೂತಿದ್ದ ವ್ಯಕ್ತಿ ನೆಲಕ್ಕೆ ಒರಗಿದ. ಈ ವೇಳೆ ನನ್ನ ಕಾರಿನ ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ದರ್ಶನ್ ಕೂಡ ಕಾರಿನಿಂದ ಕೆಳಗೆ ಇಳಿದರು. ವಿನಯ್ ಕಾರಿನಿಂದ ಇಳಿದಾಗ ಡೋರ್ ಹಾಕಿರಲಿಲ್ಲ. ಆದ್ದರಿಂದ ನಾನು ಕಾರ್ ಡೋರ್‌ನ ಮೂಲಕವೇ ನಾಗರಾಜ್ ಮತ್ತು ಪವನ್ ಬರುತ್ತಿರುವುದನ್ನು ಹಾಗೂ ಗಾಯಗೊಂಡ ವ್ಯಕ್ತಿ ಬಿದ್ದಿರುವುದನ್ನು ನೋಡಿದೆ. ನಾನು ವಿನಯ್‌ಗೆ ಡೋರ್ ಹಾಕಲು ಹೇಳುತ್ತಿದ್ದಾಗ ದರ್ಶನ್ ನನಗೆ ‘ಕಾರನ್ನು ಮುಂದೆ ತೆಗೆದುಕೊಂಡು ನಾನು ಹೋಗಿ’ ಎಂದು ಹೇಳಿದರು. ನಂತರ ಗಾಯಗೊಂಡ ವ್ಯಕ್ತಿ ಇದ್ದ ಸ್ಥಳದಿಂದ ಸುಮಾರು 30 ಅಡಿ ಮುಂದೆ ಹೋದಾಗ ಅಲ್ಲಿ ಹಳ್ಳ ಇದ್ದ ಕಾರಣ ಕಾರನ್ನು ನಿಲುಗಡೆ ಮಾಡಲು ಆಗದೇ ಸ್ವಲ್ಪ ಮುಂದೆ ಹೋಗಿ ಬಲಕ್ಕೆತಿರುಗಿಸಿಕಾರುನಿಲ್ಲಿಸಿದೆ. ಕಾರನ್ನು ಸಂಪೂರ್ಣವಾಗಿ ಯೂ ಟರ್ನ್ ಮಾಡದೇ ಇದ್ದ ಕಾರಣ ನೆಲದ ಮೇಲೆ ಕುಳಿತ್ತಿದ್ದ ಗಾಯಗೊಂಡ ವ್ಯಕ್ತಿಯನ್ನು ನಾನು ಸಂಪೂರ್ಣವಾಗಿ ನೋಡಿದೆ. ಆತ ಸುಮಾರು 50 ಕೆಜಿ ತೂಕದ 30-32 ವಯಸ್ಸಿನ ವ್ಯಕ್ತಿಯಾಗಿದ್ದ.

ಕಾರಿನಲ್ಲಿ ಅಳುತ್ತಾ ಕುಳಿತಿದ್ದ ಪವಿತ್ರಾ:  ಆ ಸಮಯದಲ್ಲಿ ನಾನು ಮತ್ತು ಪವಿತ್ರಾ ಗೌಡ ಕಾರಿನಲ್ಲೇ ಕುಳಿತಿದ್ದೆವು. ಆಗ ಪವಿತ್ರಾ ಗೌಡ ನನ್ನ ಹಿಂಬದಿಯ ಸೀಟಿನಲ್ಲಿ ಕುಳಿತುಕೊಂಡು ಅಳುತ್ತಿದ್ದರು. ಆಗ ನಾನು ಏನಾಯಿತು, ಏಕೆ ಅಳುತ್ತಿದ್ದೀರಿ ಎಂದು ಕೇಳಿದೆ. ಅದಕ್ಕೆ ಅವರು ನನಗೆ ಸೊಸೈಟಿಯಲ್ಲಿ ಐಡೆಂಟಿಟಿ ಇಲ್ಲ’ ಎಂದರು. ನಿಮಗೆ ಐಡೆಂಟಿಟಿ ಇಲ್ಲ ಎನ್ನುವುದಕ್ಕೆ ಏನಾಯಿತು ಎಂದು ಕೇಳಿದೆ. ಮಂಚಕ್ಕೆ ಬಾ ಎಂದು ಕರೆಯುತ್ತಿದ್ದಾನೆ. ಆಗ ಪವಿತ್ರಾ ಗೌಡ ಅವರು ‘ನನಗೆ ಒಬ್ಬ ವ್ಯಕ್ತಿ ಇನ್ ಸ್ಟಾಗ್ರಾಮ್‌ನಲ್ಲಿ ಪೈವೇಟ್ ಪಾರ್ಟ್ ಫೋಟೋ ಕಳಿಸಿ ಮಂಚಕ್ಕೆ ಬಾ ಎಂದು ಕರೆಯುತ್ತಿದ್ದಾನೆ’ ಎಂದರು. ಆ ವ್ಯಕ್ತಿ ಯಾರು ಎಂದು ನಾನು ಕೇಳಿದಾಗ, ಅವರು ಅಲ್ಲಿ ನೆಲದ ಮೇಲೆ ಕುಳಿತಿರುವ ವ್ಯಕ್ತಿಯೇ ನನಗೆ ಆ ರೀತಿ ಫೋಟೋ ಮತ್ತು ಮೆಸೇಜ್ಕ ಳುಹಿಸಿದ ವ್ಯಕ್ತಿ’ ಎಂದು ತಿಳಿಸಿದರು.

“… ಮಗನೆ ಇವಳು(ಪವಿತ್ರಾಗೌಡ) ಯಾರು ಎಂದು ಗೊತ್ತಾಯಿತಾ’: 
ಆಗ ನಾನು ಕಾರಿನಿಂದ ಇಳಿದು, ನೆಲದ ಮೇಲೆ ಬಿದ್ದಿದ್ದ ವ್ಯಕ್ತಿಯ ಬಳಿ ಹೋದೆ. ಅಲ್ಲಿ ದರ್ಶನ್, ನೆಲದ ಮೇಲೆ ಬಿದ್ದಿದ್ದ ವ್ಯಕ್ತಿಗೆ ‘ಸೂ… ಮಗನೆ, ನಿನ್ನ ಅಮ್ಮನ್, ನಿನಗೆ ಏನಾಯಿತು, ನಾನು ಯಾರು ಎಂದು ಗೊತ್ತಾ… ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು. ಆ ಜಾಗಕ್ಕೆ ಬರುತ್ತಿರುವುದನ್ನು ನೋಡಿದ ದರ್ಶನ್ ಹೋಗಿ ಪವಿತ್ರಾ ಗೌಡರನ್ನು ಕರೆದುಕೊಂಡು ಬಾ’ ಎಂದರು. ಅದರಂತೆ ನಾನು ಪವಿತ್ರಾ ಗೌಡರನ್ನು ಕರೆದುಕೊಂಡು ಆ ವ್ಯಕ್ತಿ ಕುಳಿತಿದ್ದ ಸ್ಥಳಕ್ಕೆ ಬಂದೆ. ಆಗ ನಂದೀಶ್(5ನೇ ಆರೋಪಿ) ಮತ್ತು ಪವನ್ (3ನೇ ಆರೋಪಿ) ನೆಲದ ಮೇಲೆ ಕುಳಿತಿದ್ದ ವ್ಯಕ್ತಿಯನ್ನು ಮೇಲೆ ಎಬ್ಬಿಸಿ ನಿಲ್ಲಿಸಿದರು. ಆಗ ದರ್ಶನ್ ಆ ವ್ಯಕ್ತಿಯ ಕೆನ್ನೆಗೆ ಜೋರಾಗಿ ಹೊಡೆದು, … ಮಗನೆ ಇವಳು ಯಾರು ಎಂದು ಗೊತ್ತಾಯಿತಾ’ ಎಂದು ಕೇಳಿದರು. ಆಗ ಆ ವ್ಯಕ್ತಿ ಕೈಮುಗಿದು ದಯಮಾಡಿ ಕ್ಷಮಿಸಿ ಬಿಡಿ, ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ಎಂದನು.

ನನ್ನ ಹೆಂಡತಿಗೇ ಮೆಸೇಜ್ ಮಾಡುತ್ತೀಯ?:  ಆದರೆ ದರ್ಶನ್ ಅವರು ‘ಇವಳು ಯಾರು ಎಂದು ನಿನಗೆ ಗೊತ್ತಾ’ ಎಂದು ಇನ್ನೊಂದು ಸಾರಿ ಕೇಳಿದರಲ್ಲದೆ, ಪವಿತ್ರಾ ಗೌಡ ಅವರ ಹೆಗಲ ಮೇಲೆ ಕೈಹಾಕಿಕೊಂಡು ‘ಇವಳು ನನ್ನ ಹೆಂಡತಿ ….ಮಗನೆ ನಿನಗೆ ಎಷ್ಟು ಧೈರ್ಯ, ನನ್ನ ಹೆಂಡತಿಗೇ ಮೆಸೇಜ್ ಮಾಡುತ್ತೀಯ’ ಎಂದು ಕೇಳಿ, ವ್ಯಕ್ತಿಯ ಮರ್ಮಾಂಗಕ್ಕೆ ಕಾಲಿನಿಂದ ಒದ್ದರು. ಆಗ ವ್ಯಕ್ತಿ ಅಳಲು ಪ್ರಾರಂಭಿಸಿದ.

ರೇಣುಕಾಸ್ವಾಮಿ ಕೆನ್ನೆಗೆ ಚಪ್ಪಲಿ ಏಟು:  ಆಗ ದರ್ಶನ್ ಪವಿತ್ರಾ ಗೌಡರಿಗೆ, ಪವಿ ನೀನು ಚಪ್ಪಲಿ ಬಿಚ್ಚು ಎಂದರು. ಮೊದಲ ಬಾರಿ ಹೇಳಿದಾಗ ಪವಿತ್ರಾ ಗೌಡ ಚಪ್ಪಲಿಯನ್ನು ಬಿಚ್ಚಲಿಲ್ಲ. ಆಗ ದರ್ಶನ್ ಚಪ್ಪಲಿ ಬಿಟ್ಟು ಎಂದು ಗದರಿದರು. ಆಗ ಪವಿತ್ರಾ ಗೌಡ ತಮ್ಮ ಚಪ್ಪಲಿ ಬಿಚ್ಚಿ ಕೈಯಲ್ಲಿ ಹಿಡಿದುಕೊಂಡಾಗ, ದರ್ಶನ್ ಆತನ ಕೆನ್ನೆಗೆ ಹೊಡಿ ಎಂದರು. ಆಗ ಪವಿತ್ರಾ ಗೌಡ ತನ್ನ ಚಪ್ಪಲಿ ತೆಗೆದುಕೊಂಡು ಆ ವ್ಯಕ್ತಿಯ ಕೆನ್ನೆಗೆ ಟಚ್ ಮಾಡಿಸಿದರು. ನಂತರ ದರ್ಶನ್ ನಿನ್ನಮ್ಮನ್ …ಮಗನೆ, ಅವಳ ಕಾಲಿಗೆ ಬಿದ್ದು ಕ್ಷಮೆ ಕೇಳು ಎಂದರು.

ದರ್ಶನ್ ಉಗಿದ ಎಂಜಲು ನೆಕ್ಕಿದ ರೇಣುಕಾಸ್ವಾಮಿ:  ಆಗ ಆ ವ್ಯಕ್ತಿ ಪವಿತ್ರಾ ಗೌಡರ ಕಾಲನ್ನು ಮುಟ್ಟಿ ನಮಸ್ಕಾರ ಮಾಡಲು ಹೋದಾಗ, ದರ್ಶನ್ ‘ನೀನು ಅವಳ ಕಾಲನ್ನು ಮುಟ್ಟಬೇಡ, ನೀನು ಮತ್ತೆ ಹೋಗಿ ಎಲ್ಲರಿಗೂ ಪವಿತ್ರಾ ಗೌಡರ ಕಾಲನ್ನು ಮುಟ್ಟಿ ಬಂದೆ ಎಂದು ಹೇಳುತ್ತೀಯ, ಆದ್ದರಿಂದ ನೆಲವನ್ನು ಮುಟ್ಟಿ ಕ್ಷಮೆ ಕೇಳು’ ಎಂದರು. ಹಾಗಾಗಿ ಆ ವ್ಯಕ್ತಿ ನೆಲವನ್ನು ಮುಟ್ಟಿ ಕ್ಷಮೆ ಕೇಳಿದ. ಈ ವೇಳೆ ದರ್ಶನ್ ಆ ವ್ಯಕ್ತಿಯ ಭುಜಕ್ಕೆ ಕಾಲಿನಿಂದ ಒದ್ದಾಗ, ಆತ ನೆಲಕ್ಕೆ ಬಿದ್ದ. ಆಗ ದರ್ಶನ್ ಆತನ ಮೇಲೆ ಹೂ ಎಂದು ಎಂಜಲು ಉಗಿದರು. ಇನ್ನೊಂದು ಬಾರಿ ನೆಲಕ್ಕೆ ಎಂಜಲನ್ನು ಉಗಿದರಲ್ಲದೆ, …ಮಗನೆ ಆ ಎಂಜಲನ್ನು ನೆಕ್ಕು ಎಂದು
ಹೇಳಿ ಆ ಎಂಜಲನ್ನು ಆ ವ್ಯಕ್ತಿಯಿಂದ ನೆಕ್ಕಿಸಿದರು. ರೇಣುಕಾಸ್ವಾಮಿ ಪ್ಯಾಂಟ್ ಬಿಚ್ಚಿಸಿ ಸತತ ಹೊಡೆತ ಈ ವೇಳೆ ಸ್ಥಳದ ಎಡಭಾಗದಲ್ಲಿ ಬಿದ್ದಿದ್ದ ನೈಲಾನ್ ಹಗ್ಗವನ್ನು ನಾಗರಾಜ್ ಎತ್ತಿಕೊಂಡರು. ದರ್ಶನ್ ನನಗೆ ಪವಿತ್ರಾ ಗೌಡರನ್ನು ಕಾರಿನಲ್ಲಿ ಬಿಟ್ಟು ಬಾ ಎಂದು ತಿಳಿಸಿದರು. ನಾನು ಪವಿತ್ರಾ ಗೌಡರನ್ನು ಕರೆದುಕೊಂಡು ಹೋಗಿ ಕಾರಿನ ಬಳಿ ಬಿಟ್ಟು ಬರುವಾಗ, ದರ್ಶನ್ ರೇಣುಕಾಸ್ವಾಮಿಯ ಪ್ಯಾಂಟನ್ನು ಬಿಚ್ಚು ಎಂದರು. ಆಗ ರೇಣುಕಾಸ್ವಾಮಿ ಕೈಮುಗಿದು ಬೇಡ ಬೇಡ ಎಂದು ಬೇಡಿಕೊಳ್ಳುತ್ತಿದ್ದ. ಈ ವೇಳೆ ನಾಗರಾಜ್ ಬಳಿ ಇದ್ದ ನೈಲಾನ್ ಹಗ್ಗವನ್ನು ಕಿತ್ತುಕೊಂಡ ದರ್ಶನ್ ರೇಣುಕಾಸ್ವಾಮಿಗೆ 2-3 ಮೂರು ಬಾರಿ ಹೊಡೆದರು. ಆಗ ರೇಣುಕಾಸ್ವಾಮಿ ತಾನು ಧರಿಸಿದ್ದ ನೀಲಿ ಬಣ್ಣದ ಜೀನ್ಸ್ ಪ್ಯಾಂಟನ್ನು ತಾನೇ ತೆಗೆದನು.
ಆ ಸಮಯದಲ್ಲಿ ರೇಣುಕಾಸ್ವಾಮಿ ಮುಂದೆ ದರ್ಶನ್ ಮತ್ತು ಹಿಂದೆ ಪವನ್, ಎಡಭಾಗದಲ್ಲಿ ನಂದೀಶ್ ನಿಂತಿದ್ದರು. ನಂದೀಶ್ ಕೈಯಲ್ಲಿ ಮರದ ರೆಂಬೆಯ ತುಂಡು ಇತ್ತು. ಪವನ್ ಬಳಿ ಪೊಲೀಸ್ ಉಪಯೋಗಿಸುವಂತೆ ಲಾಠಿ ಇತ್ತು. ದರ್ಶನ್, ಪವನ್ ಮತ್ತು ನಂದೀಶ್ ಮೂವರು ಸೇರಿ, ರೇಣುಕಾಸ್ವಾಮಿಗೆ ಸತತವಾಗಿ ಹೊಡೆಯುತ್ತಿದ್ದರು. ರೇಣುಕಾಸ್ವಾಮಿ ಜೋರಾಗಿ ಕೂಗಿಕೊಳ್ಳುತ್ತಿದ್ದ ಹಾಗೂ ನೋವನ್ನು ತಡೆಯಲಾರದೇ ಕುಸಿದು ಬಿದ್ದ.

ಗೋವಾದಲ್ಲಿ ರೂಂ ಮಾಡುತ್ತೇನೆ ಬಾ ಎಂದು ಅಕ್ಕನಿಗೆ ಮೆಸೇಜ್ಹಾ ಕಿದ್ದಾನೆ:  ಆಗ ನಾನು ಪಕ್ಕದಲ್ಲಿ ಇದ್ದ ನಾಗರಾಜ್ ಬಳಿ ಹೋಗಿ ಇದೇ ರೀತಿ ಹೊಡೆಯುತ್ತಿದ್ದರೆ ಹೆಚ್ಚುಕಮ್ಮಿ ಆಗಿಬಿಡುತ್ತದೆ ಎಂದೆ. ನಂತರ ನಾನು ಮತ್ತು ನಾಗರಾಜ್ ದರ್ಶನ್ ಬಳಿ ಹೋದಾಗ, ದರ್ಶನ್ ನಾಗರಾಜ್‌ರನ್ನು ನೋಡಿ ಏನೋ …ಮಗನೆ ನಿನ್ನ ಹೆಂಡತಿಗೂ ಇದೇ ರೀತಿ ಮೆಸೇಜ್ ಮಾಡಿದ್ದರೆ ನೀನು ಸುಮ್ಮನೆ ಇರುತ್ತಿದ್ದ’ ಎಂದರು. ಈ ವೇಳೆ ಪವನ್ ತನ್ನ ಬಳಿ ಇದ್ದ ರೇಣುಕಾಸ್ವಾಮಿಯ ಮೊಬೈಲ್ ತೆಗೆದು, ದರ್ಶನ್‌ರನ್ನು ಉದ್ದೇಶಿಸಿ ‘ಅಣ್ಣ ಇವನು, ಅಕ್ಕನಿಗೆ (ಪವಿತ್ರಾ ಗೌಡ) ಗೋವಾದಲ್ಲಿ ರೂಂ ಮಾಡುತ್ತೇನೆ ಬಾ ಎಂದು ಮೆಸೇಜ್ಹಾ ಕಿದ್ದಾನೆ ಎಂದನು. ಆಗ ದರ್ಶನ್ ಕೋಪಗೊಂಡು ಕುಳಿತಿದ್ದ ರೇಣುಕಾಸ್ವಾಮಿಯ ಮುಖಕ್ಕೆ 4-5 ಬಾರಿ ಶೂ ಧರಿಸಿದ್ದ ಕಾಲಿನಿಂದ ಒದ್ದರು. ನಂದೀಶ್ ಮುಂದಕ್ಕೆ ಬಂದು ರೇಣುಕಾಸ್ವಾಮಿಯನ್ನು 4-5 ಅಡಿ ಮೇಲೆ ಎತ್ತಿ ಎರಡು ಬಾರಿ ನೆಲಕ್ಕೆ ಕುಕ್ಕಿದರಲ್ಲದೆ ಅಲ್ಲೇ ನಿಂತಿದ್ದ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನದ ಹುಕ್‌ಗೆ ಬನಿಯನ್ ಸಮೇತ ರೇಣುಕಾಸ್ವಾಮಿಯನ್ನು ನೇತು ಹಾಕಲು ಪ್ರಯತ್ನ ಮಾಡಿದರು. ಆದರೆ ಭಾರ ತಡೆಯದೆ ರೇಣುಕಾಸ್ವಾಮಿಯು ಕೆಳಗೆ ಬಿದ್ದನು. ನಂದೀಶ್ ಮತ್ತೆ ಹುಕ್ಕಿಗೆ ನೇತು ಹಾಕಲು ಪ್ರಯತ್ನಿದ್ದರು. ಈ ಸಮಯದಲ್ಲಿ ನಾನು ರಾಘವೇಂದ್ರನ ಬಳಿ ಹೋಗಿ ಈ ವ್ಯಕ್ತಿ ಯಾರು ಎಂದು ಕೇಳಿದೆ. ಆಗ ರಾಘವೇಂದ್ರ ‘ಆತ ಚಿತ್ರದುರ್ಗದ ರೇಣುಕಾಸ್ವಾಮಿ’ ಎಂದು ಹೇಳಿದ. ಅವನನ್ನು ಇಲ್ಲಿಗೆ ಏಕೆ ಕರೆದುಕೊಂಡು ಬಂದಿದ್ದೀರಿ ಎಂದು ರಾಘವೇಂದ್ರನಿಗೆ ಕೇಳಿದೆ. ಅದಕ್ಕೆ ಇವನು  ಪವಿತ್ರಾ ಗೌಡ ಅಕ್ಕನಿಗೆ ಕೆಟ್ಟಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದ, ಅದಕ್ಕೆ ನಾವು ಅಲ್ಲಿಂದ ಕರೆದುಕೊಂಡು ಬಂದಿದ್ದೇವೆ ಎಂದು ರಾಘವೇಂದ್ರ ತಿಳಿಸಿದ. ಆಗ ನಾನು ಈತನನ್ನು ಕರೆದುಕೊಂಡು ಬರಬೇಕು ಎಂದು ನಿಮಗೆ ಯಾರು ಹೇಳಿದ್ದು ಎಂದು ಕೇಳಿದಾಗ, ಪವನ್ ಹೇಳಿದ್ದ ಎಂದು ತಿಳಿಸಿದ.
ಈ ನಡುವೆ ರೇಣುಕಾಸ್ವಾಮಿಯನ್ನು ಅಶೋಕ್ ಲೈಲ್ಯಾಂಡ್‌ ವಾಹನಕ್ಕೆ ಬನಿಯನ್‌ ಸಮೇತನೇತುಹಾಕಲು ಪ್ರಯತ್ನಿಸಿದಾಗ, ಆತನ ಭಾರ ತಡೆಯದೆ ಬನಿಯನ್ ಹರಿದು ಆತ ಕೆಳಗೆ ಬಿದ್ದನು. ಬೀಳುವಾಗ ವಾಹನದ ಬಂಪರ್ ಆತನ ತಲೆಗೆ ಬಲವಾಗಿ ತಾಗಿತು. ರೇಣುಕಾಸ್ವಾಮಿಯ ಎರಡು ಕೈಗಳ ತೋರುಬೆರಳು ಮತ್ತು ಮಧ್ಯದ ಬೆರಳುಗಳ ತುದಿಯಿಂದ ರಕ್ತ ಸುರಿಯುತ್ತಿತ್ತು. ರೇಣುಕಾಸ್ವಾಮಿ ವಾಹನದ ಬಂಪರ್ ಹಿಡಿದುಕೊಂಡು ಕುಳಿತುಕೊಳ್ಳಲು ಯತ್ನಿಸುತ್ತಿದ್ದ.

ಅಣ್ಣ ನಿಮ್ಮ ಮರ್ಮಾಂಗಕ್ಕಿಂತ ಆತನ ಮರ್ಮಾಂಗ ಒಂದು ಇಂಚು ದೊಡ್ಡದು ಎಂದಿದ್ದಾನೆ: ಆಗ ಪವನ್ ರೇಣುಕಾಸ್ವಾಮಿಯ ಮೊಬೈಲ್‌ನಲ್ಲಿ ಇದ್ದ ಮೆಸೇಜ್‌ಗಳನ್ನು ಓದುವುದನ್ನು ಮುಂದುವರೆಸಿ, ದರ್ಶನ್ ಕುರಿತು ಅಣ್ಣ ನಿಮ್ಮ ಮರ್ಮಾಂಗಕ್ಕಿಂತ ಆತನ ಮರ್ಮಾಂಗ ಒಂದು ಇಂಚು ದೊಡ್ಡದು ಇದೆ ಎಂದು ಹೇಳಿದ್ದಾನೆ. ಆಗ ದರ್ಶನ್ ಮತ್ತೆ ರೇಣುಕಾಸ್ವಾಮಿಗೆ ಹೊಡೆಯಲು ಹೋದರು. ಆಗ ನಾನು ಬೇಡ ಎಂದು ಹೇಳಿ ದರ್ಶನ್‌ ಪಕ್ಕಕ್ಕೆ ಕರೆದುಕೊಂಡು ಬಂದೆ. ಈ ಸಮಯದಲ್ಲಿ ರೇಣುಕಾಸ್ವಾಮಿ ಒಳಉಡುಪಿನಲ್ಲಿ ಇದ್ದು, ದರ್ಶನ್ ಅವರು ನಂದೀಶ್ ಮತ್ತು ಪವನ್‌ಗೆ ಹೇಳಿ ರೇಣುಕಾಸ್ವಾಮಿಯ ಒಳ ಉಡುಪನ್ನೂ ತೆಗೆಸಿದರು. ಆ ಸಮಯದಲ್ಲಿ ನಾನು ರೇಣುಕಾಸ್ವಾಮಿಯ ಬೆನ್ನನ್ನು ನೋಡಿದಾಗ, ಆತನ ಕತ್ತಿನ ಮೇಲೆ ಹೊಡೆದಿರುವ ಬರೆಗಳು ಕಾಣುತ್ತಿದ್ದವು. ಬೆನ್ನಿನ ಮೇಲೆ ಬಿದ್ದಿದ್ದ ಬರೆಗಳಿಂದ ರಕ್ತ ಸುರಿಯುತ್ತಿತ್ತು.

ಬೆಳಿಗ್ಗೆಯಿಂದಲೂ ಹೊಡೆಯುತ್ತಿದ್ದಾರೆ: ರೇಣುಕಾಸ್ವಾಮಿಗೆ ಈ ರೀತಿ ಹೊಡೆದಿದ್ದು ಯಾರು ಎಂದು ನನ್ನ ಪಕ್ಕದಲ್ಲಿ ನಿಂತಿದ್ದ ರಾಘವೇಂದ್ರನಿಗೆ ಕೇಳಿದೆ. ಧನರಾಜ್, ನಂದೀಶ್, ಪವನ್, ಧನರಾಜ್ ಸ್ನೇಹಿತ ಇಷ್ಟು ಜನ ಬೆಳಿಗ್ಗೆಯಿಂದಲೂ ಹೊಡೆಯುತ್ತಿದ್ದಾರೆ ಎಂದು ರಾಘವೇಂದ್ರ ತಿಳಿಸಿದನು.ರೇಣುಕಾಸ್ವಾಮಿಯ ಕೈಬೆರಳುಗಳಲ್ಲಿ ರಕ್ತ ಸುರಿಯುವಂತೆ ಹೊಡೆದಿರುವ ಬಗ್ಗೆ ಕೇಳಿದಾಗ, ಇದೇ ಬೆರಳುಗಳಿಂದ ಮೆಸೇಜ್‌ಗಳನ್ನು ಕಳುಹಿಸಿದ್ದೀಯಾ ಎಂದು ಹೇಳಿ ಪವನ್ ಹೊಡೆದ್ದಾನೆ. ಧನರಾಜ್ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ಕೂಡ ಕೊಟ್ಟಿದ್ದಾನೆ ಎಂದು ತಿಳಿಸಿದನು. ಧನರಾಜ್ ನನಗೆ 5-6 ವರ್ಷಗಳಿಂದ ಪರಿಚಯ. ನಂತರ ನಾನು ರಾಘವೇಂದ್ರನಿಗೆ, ನೀನು ಈತನನ್ನು ಚಿತ್ರದುರ್ಗದಿಂದ ಕರೆದುಕೊಂಡು ಬಂದಿದ್ದೀಯಾ ಏನಾದರೂ ಹೆಚ್ಚುಕಮ್ಮಿ ಆದರೆ, ನೀನೇ ಜವಾಬ್ದಾರಿ; ಜೈಲಿಗೆ ಹೋಗುತ್ತೀಯಾ, ದರ್ಶನ್‌ಗೆ ಹೋಗಿ ಹೊಡೆಯುವುದನ್ನು ನಿಲ್ಲಿಸು ಎಂದು ಹೇಳು ಎಂದು ಹೇಳಿದೆ. (ಮುಂದುವರಿಯುವುದು)

Tags:
error: Content is protected !!