Mysore
31
clear sky

Social Media

ಮಂಗಳವಾರ, 13 ಅಕ್ಟೋಬರ್ 2026
Light
Dark

ಓದುಗರ ಪತ್ರ: ರಾಜಕಾರಣಿಗಳದ್ದು ‘ಆಚಾರವಿಲ್ಲದ ನಾಲಿಗೆ’ ಆಗಬಾರದಲ್ಲವೇ?

dgp murder case

ಕೆಲವು ಜನಪ್ರತಿನಿಧಿಗಳೂ ಸೇರಿದಂತ ಹಲವು ರಾಜಕಾರಣಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಹಾಗೂ ಇತರ ಸಭೆ-ಸಮಾರಂಭಗಳಲ್ಲಿ ಪ್ರಜ್ಞಾವಂತರೇನೂ ಸಾಮಾನ್ಯ ಜನರಿಗೂ ಮುಜುಗರವಾಗುವಂತಹ ಮಾತುಗಳನ್ನು ಆಡುವುದು, ಹೇಳಿಕೆಗಳನ್ನು ನೀಡುವುದು ಇತ್ತೀಚೆಗೆ ಹೆಚ್ಚುತ್ತಿರುವುದು ಬೇಸರ ಮೂಡಿಸುವಂತಹದ್ದಾಗಿದೆ. ತಮ್ಮ ಸ್ಥಾನದ ಘನತೆ ಮತ್ತು ಗೌರವಗಳನ್ನು ಗಾಳಿಗೆ ತೂರಿ, ತಮ್ಮ ನೇತಾರರು ಇಲ್ಲವೇ ಹಿಂಬಾಲಕರನ್ನು ಮೆಚ್ಚಿಸಲು ಮಾತುಗಳನ್ನು ಆಡುತ್ತಿದ್ದಾರೆ ಎಂದು ಸುಲಭವಾಗಿ ಊಹಿಸಬಹುದು.

ಆದರೂ ಸಾರ್ವಜನಿಕ ಜೀವನದಲ್ಲಿರುವವರು ಅದೂ ಸಮಾಜವೇ ಸಂಕೀರ್ಣವಾಗುತ್ತಿದೆಯೇನೋ ಎನ್ನುವ ವಾತಾವರಣ ಇರುವಂತಹ ವೇಳೆ ಇಂತಹ ಕುಚೋದ್ಯದ ಮಾತುಗಳು ಮಾನ ನಷ್ಟವನ್ನು ಉಂಟು ಮಾಡಬಲ್ಲದು ಅಥವಾ ಜಾತಿ-ಜಾತಿಗಳ ನಡುವೆ ಸಂಘರ್ಷ ಉಂಟು ಮಾಡಬಹುದಾದ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಸಭ್ಯತೆಯನ್ನು ಹಾಗೂ ಸಂಸ್ಕೃತಿಯನ್ನು ಮೀರುವ ಇಂತಹ ಮಾತುಗಳನ್ನು ಕೇಳುವುದು ಅಸಹ್ಯಕರವಾಗಿದೆ. ಇನ್ನು ಮುಂದಾದರೂ ಸಾರ್ವಜನಿಕ ಕ್ಷೇತ್ರದಲ್ಲಿರುವವರು ಅದರಲ್ಲೂ ರಾಜಕೀಯ ಕ್ಷೇತ್ರವನ್ನೇ ತಮ್ಮ ಕೃಷಿಯಾಗಿಸಿಕೊಂಡಿರುವವರು ತಮ್ಮ ನಾಲಿಗೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಳ್ಳೆಯದು.

-ಕೆ.ವಿ.ವಾಸು, ಮೈಸೂರು

Tags:
error: Content is protected !!