Mysore
31
clear sky

Social Media

ಮಂಗಳವಾರ, 13 ಅಕ್ಟೋಬರ್ 2026
Light
Dark

ಓದುಗರ ಪತ್ರ: ಶೇ. ೭.೫ರಷ್ಟು ಮೀಸಲಾತಿ: ಜನ ಮೆಚ್ಚುವ ನಿರ್ಧಾರ

ರಾಜ್ಯ ಸರ್ಕಾರವು ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಯಲ್ಲಿ ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೆ ಶೇ. ೭.೫ರಷ್ಟು ಮೀಸಲಾತಿ ನೀಡಿರುವುದು ಜನ ಮೆಚ್ಚುವ ನಿರ್ಧಾರವಾಗಿದೆ. ದುಬಾರಿ ಖಾಸಗಿ ಶಿಕ್ಷಣ ಶುಲ್ಕ ಭರಿಸಲಾಗದ ಬಡ ವಿದ್ಯಾರ್ಥಿಗಳಿಗೆ ಇದು ಹೊಸ ಭರವಸೆ ಮೂಡಿಸಿದೆ. ಆದರೆ, ರಾಜ್ಯದ ಶೇಕಡಾ ೬೫ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳ ಕಲಿಯುತ್ತಿರುವುದರಿಂದ, ಪ್ರಸ್ತುತ ನೀಡಲಾಗಿರುವ ಶೇ.೭.೫ರಷ್ಟು ಮೀಸಲಾತಿಯು ಅವರ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಸಾಲದು.

ಈ ನೀತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಕೆಲವು ತಕ್ಷಣದ ಕ್ರಮಗಳು ಅಗತ್ಯವಾಗಿವೆ. ಮೊದಲನೆಯದಾಗಿ, ಸರ್ಕಾರಿ ಶಾಲಾ ಮಕ್ಕಳ  ಮೀಸಲಾತಿಯನ್ನು ಹಂತ ಹಂತವಾಗಿ ಶೇ. ೧೦ಕ್ಕೆ ಹೆಚ್ಚಿಸಬೇಕು. ಎರಡನೆಯದಾಗಿ, ವೃತ್ತಿಪರ ಶಿಕ್ಷಣಕ್ಕೆ ಸೇರುವ ಈ ವಿದ್ಯಾರ್ಥಿಗಳಿಗೆ ಕೌಶಲ ಹಾಗೂ ಇಂಗ್ಲಿಷ್ ಭಾಷಾ ಪ್ರಾವೀಣ್ಯತೆ ಬೆಳೆಸಲು ವಿಶೇಷ ಸೇತುಬಂಧ ತರಬೇತಿ ನೀಡಬೇಕು.

ಅಂತಿಮವಾಗಿ, ಶಾಲಾ ಹಂತದ ಸಿಇಟಿ ಮತ್ತು ನೀಟ್ ಪರೀಕ್ಷೆಗಳಿಗೆ  ಉಚಿತ ತರಬೇತಿ ಒದಗಿಸಿದರೆ, ಗ್ರಾಮೀಣ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ.

-ಡಾ. ಎಚ್. ಕೆ.ವಿಜಯಕುಮಾರ್, ಬೆಂಗಳೂರು

Tags:
error: Content is protected !!