Mysore
25
overcast clouds

Social Media

ಬುಧವಾರ, 07 ಅಕ್ಟೋಬರ್ 2026
Light
Dark

ಓದುಗರ ಪತ್ರ: ‘ನಂದಿನಿ’ ಹೆಸರಿಗೆ ಕಳಂಕ ತರಬೇಡಿ

ಓದುಗರ ಪತ್ರ

‘ನಂದಿನಿ’ ಹೆಸರಿಗೆ ಕಳಂಕ ತರಬೇಡಿ

ಮಂಡ್ಯ ಜಿ ಹಾಲು ಒಕ್ಕೂಟದಲ್ಲಿ ( ಮನ್ ಮುಲ್) ನಡೆದಿರುವ

ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್‌ಮುಲ್

ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಸೇರಿದಂತೆ ಎಂಟು

ಮಂದಿಯನ್ನು ಜಿ ಪೊಲೀಸರು ಬಂಧಿಸಿ

ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ, ಹೆಚ್ಚಿನ

ತನಿಖೆಗಾಗಿ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ

ನೀಡಿ ನ್ಯಾಯಾಲಯವು ಆದೇಶಿಸಿದೆ.

ದೇಶದ ನಂದಿನಿ ಹಾಲು ಉತ್ಪನ್ನಗಳು ತನ್ನ

ಉತ್ಕೃಷ್ಟ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ.

ಇತ್ತೀಚೆಗೆ ಕೆಲವು ಅಧ್ಯಯನದ ಪ್ರಕಾರ, ನಂದಿನಿ ಉತ್ಪನ್ನಗಳು ಯಾವುದೇ

ಹಾನಿಕಾರಕ ಅಂಶಗಳು ಇಲ್ಲದ ನೈಸರ್ಗಿಕ ಗುಣಮಟ್ಟ ಮತ್ತು

ಪರಿಶುದ್ಧತೆಯಿಂದ ಕೂಡಿವೆ ಎಂದು ದೃಢಪಡಿಸಿವೆ.

ತಿರುಪತಿ ತಿಮ್ಮಪ್ಪನ ಪ್ರಸಾದ ಲಾಡುವಿನ ರುಚಿಗೆ ಕರ್ನಾಟಕದ ನಂದಿನಿ

ತನ್ನ ‘ಕೊಡುಗೆ’ ನೀಡುತ್ತಿದೆ. ಇಂತಹ ಸಂದರ್ಭದಲ್ಲಿ ನಂದಿನಿ ಹಾಲಿನ

ಪುಡಿಗೆ ಕಲಬೆರಕೆ ಮಾಡಿರುವುದು ಕ್ಷಮಿಸಲಾರದ ಅಪರಾಧ. ಅದು

ಮನ್‌ಮುಲ್ ಮಾಜಿ ಅಧ್ಯಕ್ಷರೇ ಈ ನೀಚ ಕೆಲಸಕ್ಕೆ ಇಳಿದಿದ್ದಾರೆ ಎಂದರೆ

‘ಶತ್ರು’ಗಳು ಒಳಗೇ ಇದ್ದಾರೆ ಎಂಬ ಭಾವನೆ ಜನರಲ್ಲಿ ಮೂಡುತ್ತದೆ.

ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ವಿಧಿಸುವ ಮೂಲಕ ಭವಿಷ್ಯದಲ್ಲಿ ಇಂತಹ ಕೆಲಸಕ್ಕೆ

ಯಾರೂ ಕೈಹಾಕಬಾರದು ಎಂಬ ಸಂದೇಶ ರವಾನೆಯಾಗಬೇಕಾಗಿದೆ.

– ಬೂಕನಕೆರೆ ವಿಜೇಂದ್ರ, ಮೈಸೂರು

Tags:
error: Content is protected !!